/newsfirstlive-kannada/media/post_attachments/wp-content/uploads/2025/01/SURYA_TEAM-1.jpg)
ಪುಣೆ ಪಂದ್ಯ ಗೆದ್ದು ಟಿ20 ಸರಣಿ ಜಯಿಸಿದರೂ, ಟೀಮ್​ ಇಂಡಿಯಾದಲ್ಲಿ ಸಮಾಧಾನ ಇಲ್ಲ. ಇಂದು ಮುಂಬೈನಲ್ಲಿ ನಡೆಯುವ ಮೆಗಾ ಫೈಟ್​ಗೂ ಮುನ್ನ ಟೀಮ್​ ಮ್ಯಾನೇಜ್​​ಮೆಂಟ್ ವಲಯದಲ್ಲಿ ಟೆನ್ಶನ್​ ಶುರುವಾಗಿದೆ. ಸಿರೀಸ್​ ಜಯಸಿದರೂ ಭಾರತ ತಂಡಕ್ಕೆ ಟೆನ್ಶನ್ ಯಾಕೆ?.
ಇಂಡೋ-ಇಂಗ್ಲೆಂಡ್​ ಅಂತಿಮ ಟಿ20 ಫೈಟ್​ಗೆ ವೇದಿಕೆ ಸಜ್ಜಾಗಿದೆ. ಮುಂಬೈನ ಐಕಾನಿಕ್​ ವಾಂಖೆಡೆ ಅಂಗಳದಲ್ಲಿ ಸರಣಿಯ ಕೊನೆ ಫೈಟ್​​ ನಡೆಯಲಿದೆ. ಸರಣಿ ಗೆದ್ದಿರುವ ಟೀಮ್​ ಇಂಡಿಯಾ ಮುಂಬೈ ಮಹಾನಗರಿಯಲ್ಲಿ ಗೆಲುವನ್ನ ಎದುರು ನೋಡ್ತಿದೆ. ಈಗಾಗಲೇ ಸರಣಿ ಕೈ ಚೆಲ್ಲಿರೋ ಪ್ರವಾಸಿ ಆಂಗ್ಲ ಪಡೆ ಕೊನೆ ಪಂದ್ಯ ಗೆದ್ದು ಮರ್ಯಾದೆ ಉಳಿಸಿಕೊಳ್ಳೋ ಯತ್ನದಲ್ಲಿದೆ.
/newsfirstlive-kannada/media/post_attachments/wp-content/uploads/2025/02/HARSHIT-RANA.jpg)
ಮುಂಬೈ ಮಹಾಕಾಳಗಕ್ಕೆ ಕಿಚ್ಚು ಹಚ್ಚಿದ ವಿವಾದ.!
4ನೇ ಟಿ20 ಪಂದ್ಯದಲ್ಲಿ ಶಿವಂ ದುಬೆ ಕಂಕಷನ್​​ ಇಂಜುರಿಗೆ ತುತ್ತಾದ ಬಳಿಕ ಸಬ್​ಸ್ಟಿಟ್ಯೂಟ್​ ಪ್ಲೇಯರ್ ಆಗಿ ಹರ್ಷಿತ್​ ರಾಣಾ ಫೀಲ್ಡ್​ಗೆ ಎಂಟ್ರಿ ಕೊಟ್ಟಿದ್ರು. ಅದೃಷ್ಟದ ಅವಕಾಶದಲ್ಲಿ ಡೆಬ್ಯೂ ಮಾಡಿದ ಹರ್ಷಿತ್​ ರಾಣಾ, 3 ವಿಕೆಟ್​ ಕಬಳಿಸಿ ಮ್ಯಾಚ್​ ವಿನ್ನರ್​ ಆದ್ರು. ಪಂದ್ಯ ಅಂತ್ಯವಾದ ಬೆನ್ನಲ್ಲೇ ಇದು ವಿವಾದಕ್ಕೆ ಕಾರಣವಾಯ್ತು. ಆಲ್​​ರೌಂಡರ್​ ದುಬೆಗೆ ಕಂಕಷನ್​ ಸಬ್​ಸ್ಟಿಟ್ಯೂಟ್​​​ ಆಗಿ ಸ್ಪೆಷಲಿಸ್ಟ್​ ಬೌಲರ್​ ಎಂಟ್ರಿಯಾಗಿದ್ದಕ್ಕೆ ಇಂಗ್ಲೆಂಡ್​​ ನಾಯಕ ಜೋಸ್​​ ಬಟ್ಲರ್​ ಕಿಡಿ ಕಾರಿದ್ದಾರೆ. ಹಲವು ಆಂಗ್ಲ ಪಡೆಯ ಮಾಜಿ ಪ್ಲೇಯರ್ಸ್​ ಕೂಡ ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದು, ಫ್ಯಾನ್ಸ್​ ನಡುವೆ ವಾರ್​ ಶುರುವಾಗಿದೆ. ಈ ವಿವಾದ ಇಂದಿನ ಪಂದ್ಯಕ್ಕೆ ಕಿಚ್ಚು ಹಚ್ಚಿದೆ.
ಸರಣಿ ಗೆದ್ದರೂ ಟೀಮ್​ ಇಂಡಿಯಾಗೆ ತಪ್ಪದ ಟೆನ್ಶನ್​.!
ಈಗಾಗಲೇ ಟೀಮ್​ ಇಂಡಿಯಾ ಸರಣಿ ಗೆದ್ದಾಗಿದೆ. ಆದ್ರೂ, ತಂಡದಲ್ಲಿ ಟೆನ್ಶನ್​ ತಪ್ಪಿಲ್ಲ. ಆಟಗಾರರ ಕಳಪೆ ಪರ್ಫಾಮೆನ್ಸ್​​ ಟೀಮ್​ ಮ್ಯಾನೇಜ್​ಮೆಂಟ್​ ಟೆನ್ಶನ್​ ಹೆಚ್ಚಿಸಿದೆ. ಅಂತಿಮ ಟಿ20 ಪರ್ಫಾಮೆನ್ಸ್​ ಟೀಮ್​ ಇಂಡಿಯಾದ ಹಲವು ಆಟಗಾರರ ಭವಿಷ್ಯ ನಿರ್ಧರಿಸಲಿದೆ.
‘ಸೈಲೆಂಟ್​ ಸಂಜು’.. ಆರಂಭಿಕನ ಸ್ಥಾನಕ್ಕೆ ಕುತ್ತು.!
ಸೌತ್​ ಆಫ್ರಿಕಾ ಪ್ರವಾಸದಲ್ಲಿ 2 ಸೆಂಚುರಿ ಸಿಡಿಸಿ ಮಿಂಚಿದ್ದ ಸಂಜು ಸ್ಯಾಮ್ಸನ್​, ಟಿ20 ಫಾರ್ಮೆಟ್​ನಲ್ಲಿ ಓಪನರ್ ಸ್ಥಾನವನ್ನ ಕಬ್ಜಾ ಮಾಡಿದರು. ಆದ್ರೆ, ಇಂಗ್ಲೆಂಡ್​ ವಿರುದ್ಧ ಫ್ಲಾಪ್​ ಶೋ ನೀಡಿದ್ದಾರೆ. 8.75ರ ಹೀನಾಯ ಸರಾಸರಿಯಲ್ಲಿ ರನ್​ಗಳಿಸಿದ್ದು, ಈ ಪರ್ಫಾಮೆನ್ಸ್​ ಸ್ಥಾನಕ್ಕೆ ಸಂಕಷ್ಟ ತಂದಿಟ್ಟಿದೆ. ಮುಂದಿನ ಸರಣಿಗಳಲ್ಲಿ ಶುಭ್​ಮನ್​ ಗಿಲ್​, ಯಶಸ್ವಿ ಜೈಸ್ವಾಲ್ ತಂಡಕ್ಕೆ​ ಎಂಟ್ರಿ ಕೊಟ್ರೆ, ಸಂಜು ಸ್ಥಾನಕ್ಕೆ ಕುತ್ತು ಬರಲಿದೆ. ಸ್ಥಾನ ಉಳಿಸಿಕೊಳ್ಳಬೇಕಂದ್ರೆ, ಇಂದಿನ ಪಂದ್ಯದಲ್ಲಿ ಸಿಡಿಲಬ್ಬರದ ಆಟ ಆಡಬೇಕಿದೆ.
ಸಾರಥಿ ಸೂರ್ಯನ ಸಾಮರ್ಥ್ಯದ ಬಗ್ಗೆ ಪ್ರಶ್ನೆ.!
ಟೀಮ್​ ಇಂಡಿಯಾ ಕ್ಯಾಪ್ಟನ್​​ ಸೂರ್ಯಕುಮಾರ್​ ಯಾದವ್​ ಟಿ20 ಕ್ರಿಕೆಟ್​ನ ಅಧಿಪತಿ ಅನ್ನಿಸಿಕೊಂಡಿದ್ದ ಆಟಗಾರ. ಆದ್ರೆ, ನಾಯಕನ ಪಟ್ಟಕ್ಕೇರಿದ ಬಳಿ ಸೂರ್ಯ ಶೈನ್​ ಆಗ್ತಿಲ್ಲ. ಆಫ್ರಿಕಾದಲ್ಲಿ ಫ್ಲಾಪ್​ ಆದ ಸೂರ್ಯ, ಇದೀಗ ಇಂಗ್ಲೆಂಡ್​ ಸರಣಿಯಲ್ಲೂ ವೈಫಲ್ಯ ಅನುಭವಿಸಿದ್ದಾರೆ. ಕೇವಲ 6.50ರ ಹೀನಾಯ ಸರಾಸರಿಯಲ್ಲಿ ರನ್​ಗಳಿಸಿರೋ ಸೂರ್ಯನ ಸಾಮರ್ಥ್ಯದ ಬಗ್ಗೆ ಪ್ರಶ್ನೆ ಎದ್ದಿದೆ. ಕೊನೆಯ ಟಿ20ಯಲ್ಲಾದ್ರೂ ಮಿಸ್ಟರ್​ 360 ಈ ಪ್ರಶ್ನೆಗೆ ಆನ್ಸರ್​ ಕೊಡ್ತಾರಾ ನೋಡಬೇಕಿದೆ. ಇಲ್ಲದಿದ್ರೆ, ನಾಯಕತ್ವಕ್ಕೆ ಕಂಟಕ ಬರೋ ಸಾಧ್ಯತೆಯಿದೆ.
ವೇಗಿ ಮೊಹ್ಮದ್​ ಶಮಿ ಫಿಟ್​ನೆಸ್​ ಕಥೆ ಏನು.?
ಇಂಗ್ಲೆಂಡ್​ ಸರಣಿಯಲ್ಲಿ 14 ತಿಂಗಳ ಬಳಿಕ ವೇಗಿ ಮೊಹಮ್ಮದ್​ ಶಮಿ ಅಂತರಾಷ್ಟ್ರೀಯ ಕ್ರಿಕೆಟ್​ಗೆ​ ಮರಳಿದ್ದಾರೆ. ಶಮಿ ಫಿಟ್​ ಅನ್ನೋ ಕಾರಣಕ್ಕೆ ಈ ಸರಣಿಯ ಜೊತೆಗೆ ಮಹತ್ವದ ಚಾಂಪಿಯನ್ಸ್​ ಟ್ರೋಫಿ ತಂಡದಲ್ಲೂ ​ಶಮಿಗೆ ಸ್ಥಾನ ನೀಡಲಾಗಿದೆ. ಆದ್ರೆ, ಕಮ್​ಬ್ಯಾಕ್​ ಸೀರಿಸ್​ನಲ್ಲಿ ಶಮಿ ಆಡಿರೋದು ಕೇವಲ ಒಂದೇ ಒಂದು ಪಂದ್ಯ ಮಾತ್ರ. ಆ ಪಂದ್ಯದಲ್ಲೂ ಎಫೆಕ್ಟಿವ್​ ಎನಿಸಿಕೊಳ್ಳದ ಶಮಿ, ವಿಕೆಟ್​ ಕಬಳಿಸುವಲ್ಲೂ ವಿಫಲರಾಗಿದ್ದಾರೆ. ಸದ್ಯ ಶಮಿ ಫಿಟ್​ನೆಸ್ ಮೇಲೆ ಅನುಮಾನ ಶುರುವಾಗಿದ್ದು, ಕೊನೆಯ ಟಿ20ಯಲ್ಲಿ ಆಡಿ ಮ್ಯಾಚ್​ ಫಿಟ್​ನೆಸ್​ ಸಾಬೀತುಪಡಿಸ್ತಾರಾ ಅನ್ನೋದು ಕುತೂಹಲ ಮೂಡಿಸಿದೆ.
/newsfirstlive-kannada/media/post_attachments/wp-content/uploads/2025/01/SURYA.jpg)
ಇದನ್ನೂ ಓದಿ: T20 ತಂಡದಲ್ಲಿ ಇಂದು ಮಹತ್ವದ ಬದಲಾವಣೆ.. ಪಂದ್ಯ ನಡೆಯುವುದು ಎಲ್ಲಿ, ಯಾವಾಗ?
ಉಪನಾಯಕ ಅಕ್ಷರ್​ ಪಟೇಲ್ ಕೂಡ​ ಆಲ್​​ರೌಂಡ್​ ಪರ್ಫಾಮೆನ್ಸ್​ ನೀಡುವಲ್ಲಿ ಫೇಲ್​ ಆಗಿದ್ದಾರೆ. ಬೌಲಿಂಗ್​ನಲ್ಲಿ ಮಿಂಚಿದ ಅಕ್ಷರ್​, ಬ್ಯಾಟಿಂಗ್​ನಲ್ಲಿ ಫ್ಲಾಪ್​ ಆಗಿದ್ದಾರೆ. 3 ಇನ್ನಿಂಗ್ಸ್​ನಲ್ಲಿ ಕೇವಲ 7.33ರ ಸರಾಸರಿಯಲ್ಲಿ ರನ್​ಗಳಿಸಿರುವ ಅಕ್ಷರ್​​ಗೂ ಇದು ಅಗ್ನಿಪರೀಕ್ಷೆ ಕಣ.
ಉಳಿದಂತೆ ಇಡೀ ಸರಣಿಯಲ್ಲಿ ಗುಡ್​ ಪಾರ್ಟ್​ನರ್​ಶಿಪ್​ನ​​ ಕೊರತೆ ಟೀಮ್​ ಇಂಡಿಯಾಗೆ ಹಿನ್ನಡೆಯಾಗಿದೆ. ಬೌಲಿಂಗ್​ ವಿಭಾಗದಲ್ಲೂ ಇನ್​​​ಕನ್ಸಿಸ್ಟೆನ್ಸಿ ತಂಡವನ್ನ ಬಿಡದೇ ಕಾಡಿದೆ. ಸರಣಿ ಗೆದ್ದ ಸಂಭ್ರಮದ ನಡುವೆ, ಈ ಎಲ್ಲಾ ಸಮಸ್ಯೆಗಳು ಟೀಮ್​ ಇಂಡಿಯಾದ ಟೆನ್ಶನ್​ ಹೆಚ್ಚಿಸಿವೆ. ಹಳಿ ತಪ್ಪಿದ ಆಟಗಾರರು ಅಂತಿಮ ಟಿ20ಯಲ್ಲಿ ಟ್ರ್ಯಾಕ್​​​ಗೆ ಮರಳ್ತಾರಾ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us