ಕಳೆದ ವರ್ಷ ಸೂರ್ಯ ಪ್ರದರ್ಶನ ಚೆನ್ನಾಗಿರಲಿಲ್ಲ
2012ರಲ್ಲಿ MI ತಂಡಕ್ಕೆ ಆಗಮಿಸಿದ ಸೂರ್ಯ ಕುಮಾರ್
ಮುಂಬೈಗೆ ಟಾಟಾ ಗುಡ್ಬೈ ಅಂತಾರಾ ಮಿಸ್ಟರ್ 360
IPL2025ರ ಮೇಲೆ ಎಲ್ಲರ ಕಣ್ಣಿದೆ. ಮುಂಬರುವ ಪಂದ್ಯವನ್ನು ಕಣ್ತುಂಬಿಕೊಳ್ಳಲು ಕ್ರಿಕೆಟ್ ಫ್ಯಾನ್ಸ್ ಕಾಯುತ್ತಿದ್ದಾರೆ. ಇದರ ಜೊತೆ ಜೊತೆಗೆ 2025ರ ಹರಾಜಿನ ಮೇಲೂ ಎಲ್ಲರ ಕಣ್ಣು ನೆಟ್ಟಿದೆ. ಹೀಗಿರುವಾಗ ಸ್ಟಾರ್ ಬ್ಯಾಟ್ಸ್ಮನ್ ಸೂರ್ಯ ಕುಮಾರ್ ಯಾದವ್ ಮುಂಬೈ ಇಂಡಿಯನ್ಸ್ ತಂಡದಿಂದ ಬೇರ್ಪಡುವ ಸಾಧ್ಯತೆ ಬಗ್ಗೆ ಮಾತೊಂದು ಕೇಳಿಬರುತ್ತಿದೆ.
ಮುಂಬರುವ ಸೀಸನ್ನಲ್ಲಿ ಸೂರ್ಯ ಮುಂಬೈ ತಂಡದಲ್ಲಿ ಆಡದಿರುವ ಸಾಧ್ಯತೆಯಿದೆ ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿವೆ. ಮತ್ತೊಂದೆಡೆ 2024ರಲ್ಲಿ ಸೂರ್ಯ ಕುಮಾರ್ ಯಾದವ್ ಪ್ರದರ್ಶನ ಅಷ್ಟೇನು ಚೆನ್ನಾಗಿರಲಿಲ್ಲ. ಹೀಗಾಗಿ ಈ ಆಟಗಾರ ಕುರಿತು ಚರ್ಚೆಗಳು ನಡೆಯುತ್ತಿವೆ.
ಇದನ್ನೂ ಓದಿ: ಅಂದು RCB ಆಟಗಾರನಿಗೆ ಬೆದರಿಕೆ ಹಾಕಿದ್ದ ಮುಂಬೈ ಇಂಡಿಯನ್ಸ್; ಸ್ಟೋರಿ ಓದಿದ್ರೆ ಶಾಕ್ ಆಗ್ತೀರಾ!
ಕಳೆದ ವರ್ಷ ಅಲ್ರೌಂಡರ್ ಹಾರ್ದಿಕ್ ಪಾಂಡ್ಯ ಮುಂಬೈ ತಂಡವನ್ನು ಮುನ್ನಡೆಸಿದರು. ಆಡಿರುವ 14 ಪಂದ್ಯದಲ್ಲಿ ನಾಲ್ಕರಲ್ಲಿ ಮಾತ್ರ ಗೆಲವು ಸಾಧಿಸಿದರು. ರೋಹಿತ್ ಶರ್ಮಾ ಬದಲಿಗೆ ಪಾಂಡ್ಯಗೆ ಅವಕಾಶ ಕೊಟ್ಟರು. ಆದರೆ ತಂಡವನ್ನು ಮುನ್ನೆಸಲು ಪಾಂಡ್ಯ ಕಷ್ಟಪಟ್ಟರು.
ಸೂರ್ಯ ಕುಮಾರ್ ಅನೇಕ ವರ್ಷಗಳಿಂದ ಮುಂಬೈ ತಂಡದಲ್ಲಿದ್ದಾರೆ. 2018ರಿಂದ ಮುಂಬೈ ತಂಡದ ಪರ ಆಡುತ್ತಿದ್ದಾರೆ. 2012ರಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕಾಗಿ ಐಪಿಎಲ್ಗೆ ಕಾಲಿಟ್ಟ ಅವರು ಅನೇಕ ಪಂದ್ಯಗಳನ್ನು ಆಡಿದ್ದಾರೆ.
ಇದನ್ನೂ ಓದಿ: 7 ಪಂದ್ಯದಲ್ಲಿ ಕೇವಲ 84 ರನ್; ದ್ರಾವಿಡ್ ಪುತ್ರ ಸಮಿತ್ ಕಳಪೆ ಪ್ರದರ್ಶನಕ್ಕೆ ಕಾರಣವೇನು?
2014ರಿಂದ 2017ರವರೆಗೆ ಕೆಕೆಆರ್ ತಂಡದಲ್ಲಿ ಆಡಿದ್ದರು. ನಾಲ್ಕು ವರ್ಷ ಆಡಿದ ಬಳಿಕ ಮರಳಿ ಮುಂಬೈ ಇಂಡಿಯನ್ಸ್ ಗೂಡು ಸೇರಿದರು. ಸೂರ್ಯ ಈವರೆಗೆ 150 ಐಪಿಎಲ್ ಪಂದ್ಯಗಳಲ್ಲಿ 32.09 ಸರಾಸರಿಯಲ್ಲಿ 3594 ರನ್ ಗಳಿಸಿದ್ದಾರೆ. 2 ಶತಕ ಮತ್ತು 24 ಅರ್ಧ ಶತಕ ಸೇರಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ