/newsfirstlive-kannada/media/post_attachments/wp-content/uploads/2025/07/SURYA_PRIYANKA.jpg)
ಸೂರ್ಯಕುಮಾರ್​​ ಯಾದವ್​, ಕನ್ನಡತಿ ಶ್ರೇಯಾಂಕ ಪಾಟೀಲ್​ ಮಾಡಿರೋ ಒಂದು ರೀಲ್ಸ್​ ಸದ್ಯ ಸಖತ್​ ಟ್ರೆಂಡ್​ ಸೃಷ್ಟಿಸಿದೆ. ಇವರಿಬ್ಬರು ಮಾತ್ರವಲ್ಲ, ಈ ಔರಾ ಫಾರ್ಮಿಂಗ್​​ ಟ್ರೆಂಡ್​​ಗೆ ಕ್ರೀಡಾಲೋಕ ಸರೆಂಡರ್​​ ಆಗಿಬಿಟ್ಟಿದೆ. ಅಷ್ಟಕ್ಕೂ ಈ ಔರಾ ಫಾರ್ಮಿಂಗ್​ ಟ್ರೇಂಡ್​​ ಅಂದರೇನು? ಇದು ಹುಟ್ಟಿದ್ದು ಹೇಗೆ?.
ಇದು ಸೋಷಿಯಲ್​ ಮೀಡಿಯಾ ದುನಿಯಾ. ಮೀಮ್ಸ್​​, ಟ್ರೋಲ್​, ರೀಲ್ಸ್​ ಇವುಗಳದ್ದೇ ಕಾರು ಬಾರು. ಇವುಗಳದ್ದೇ ದರ್ಬಾರ್​. ಸದ್ಯ ಸೋಷಿಯಲ್​ ಮೀಡಿಯಾದಲ್ಲಿ ಔರಾ ಫಾರ್ಮಿಂಗ್​ ರೀಲ್ಸ್ ಸಖತ್​ ಟ್ರೆಂಡ್​ ಸೃಷ್ಟಿಸಿದೆ. ಫಾರ್ಮುಲಾ ಒನ್​ ರೇಸ್​, ಫುಟ್ಬಾಲ್​, ಕ್ರಿಕೆಟ್​​.. ಎಲ್ಲಾ ಲೋಕಗಳು ಈ ಔರಾ ಫಾರ್ಮಿಂಗ್​ ಟ್ರೆಂಡ್​​ಗೆ ಕ್ಲೀನ್​ಬೋಲ್ಡ್​ ಆಗಿವೆ.
‘ಟ್ರೆಂಡ್​​ಗೆ ಸರೆಂಡರ್​’ ಆದ ಸೂರ್ಯಕುಮಾರ್​​.!
ಟೀಮ್​ ಇಂಡಿಯಾ ಟಿ20 ಕ್ಯಾಪ್ಟನ್​ ಸೂರ್ಯಕುಮಾರ್​ ಯಾದವ್​​, ಟೀಮ್​ ಇಂಡಿಯಾ ಆಟಗಾರ್ತಿ ಕನ್ನಡತಿ ಶ್ರೇಯಾಂಕ ಪಾಟೀಲ್ ಬೆಂಗಳೂರಿನ ಎನ್​ಸಿಎನಲ್ಲಿದ್ದಾರೆ. ಇಂಜುರಿಯಿಂದ ಚೇತರಿಸಿಕೊಳ್ತಿರೋ ಇಬ್ಬರೂ ರಿಹ್ಯಾಬ್​ಗೆ ಒಳಗಾಗಿದ್ದಾರೆ. ಇದ್ರ ನಡುವೆ ಬಿಡುವಿನ ವೇಳೆ ಒಂದು ರೀಲ್ಸ್ ಮಾಡಿದ್ದಾರೆ. ಆ ರೀಲ್ಸ್ ಇಂಟರ್​ನೆಟ್​ನಲ್ಲಿ ಧೂಳೆಬ್ಬಿಸಿದೆ. ರೀಲ್ಸ್ ನೋಡಿ ಸಖತ್​ ವೈರಲ್​ ಆಗಿರೋದು. ಇದ್ರಲ್ಲಿ, ಸೂರ್ಯಕುಮಾರ್, ಶ್ರೇಯಾಂಕ ಇದ್ದಾರೆ ಅನ್ನೋದು ಮ್ಯಾಟರ್​​ ಆಗಿಲ್ಲ. ಈ ರೀಲ್ಸ್​​ ಸಖತ್​ ಸೌಂಡ್​ ಮಾಡ್ತಿರೋದ್ರ ಹಿಂದಿರೋ ರೀಸನ್​ ಔರಾ ಫಾರ್ಮಿಂಗ್​ ಟ್ರೆಂಡ್​​.
ವಿಕೆಟ್​ ತೆಗೆದು ಆಟಗಾರರ ಔರಾ ಫಾರ್ಮಿಂಗ್​ ಸೆಲಬ್ರೇಷನ್​​.!
ಆರ್​​ಸಿಬಿ ಮಾಜಿ ವೇಗಿ ವೇಯ್ನ್​ ಪಾರ್ನೆಲ್​ ಸದ್ಯ ಲೆಜೆಂಡ್​​ ಲೀಗ್​ನಲ್ಲಿ ಸೌತ್​ ಆಫ್ರಿಕಾ ಚಾಂಪಿಯನ್ಸ್​ ಪರ ಆಡ್ತಿದ್ದಾರೆ. ಇಂಗ್ಲೆಂಡ್​​​ ವಿರುದ್ಧದ ಪಂದ್ಯದಲ್ಲಿ ರವಿ ಬೋಪಾರ ವಿಕೆಟ್​ ಉರುಳಿಸಿದ ಪಾರ್ನೆಲ್​ ಔರಾ ಫಾರ್ಮಿಂಗ್​ ಸೆಲಬ್ರೇಷನ್​ ಮಾಡಿದ್ದಾರೆ. ವೆಸ್ಟ್​ ಇಂಡೀಸ್​​​ ಆಲ್​​ರೌಂಡರ್​​ ಕಾರ್ಲಸ್​ ಬ್ರಾಥ್​ವೇಟ್​​ ಕೂಡ ಈ ಟ್ರೆಂಡ್​ನ ಫಾಲೋ ಮಾಡಿದ್ದಾರೆ. ಇಂಟರ್​ನ್ಯಾಷನಲ್​ ಮಾತ್ರವಲ್ಲ.. ಲೋಕಲ್​ ಕ್ಲಬ್​​ ಕ್ರಿಕೆಟರ್ಸ್​​ ಕೂಡ ಈ ಟ್ರೆಂಡ್​ ಫಾಲೋ ಮಾಡಿದ್ದಾರೆ.
‘ಔರಾ ಫಾರ್ಮಿಂಗ್​ ಟ್ರೆಂಡ್’​ಗೆ ಕ್ರೀಡಾ ಲೋಕ ಫಿದಾ.!
ಕ್ರಿಕೆಟ್​ ಲೋಕ ಮಾತ್ರವಲ್ಲ.. ಫುಟ್ಬಾಲ್​ ಆಟಗಾರರು, ಎಫ್​ 1 ರೇಸರ್​​ಗಳು ಎಲ್ರೂ ಇದಕ್ಕೆ ಸರೆಂಡರ್​ ಆಗಿದ್ದಾರೆ. ಅಮೇರಿಕಾದ ಫುಟ್ಬಾಲ್​ ಆಟಗಾರ ಟ್ರಾವಿಸ್​ ಕೆಲ್ಸ್​​, ಪ್ಯಾರೀಸ್​ ಸೆಂಟ್​​ ಜರ್ಮನ್​ ಫುಟ್ಬಾಲ್​ ಟೀಮ್​, ಎಫ್​ 1 ಡ್ರೈವರ್​ ಅಲೆಕ್ಸ್​ ಅಲ್ಬನ್​ ಸೇರಿದಂತೆ ಹಲವರು ಇದನ್ನ ರೀಕ್ರಿಯೇಟ್​ ಮಾಡಿದ್ದಾರೆ.
ಇಂಡೋನೇಷ್ಯಾದ 5ನೇ ಕ್ಲಾಸ್​ ಹುಡುಗ ಇದ್ರ ಸೃಷ್ಟಿಕರ್ತ.!
ಇಷ್ಟೆಲ್ಲಾ ಟ್ರೆಂಡ್ ಸೃಷ್ಟಿಸಿರೋ ಈ ಔರಾ ಫಾರ್ಮಿಂಗ್​ ಅಂದರೇನು.? ಇದು ಹುಟ್ಟಿದ್ದು ಹೇಗೆ.? ಎಂಬೆಲ್ಲಾ ಪ್ರಶ್ನೆಗಳು ನಿಮ್ಮಲ್ಲಿ ಇರಬಹುದು. ಅದಕ್ಕೆ ಉತ್ತರ ತಿಳಿದುಕೊಳ್ಳೋಕೆ ಮುನ್ನ ಇದ್ರ ಒರಿಜಿನಲ್​ ವಿಡಿಯೋ ನೋಡ್ಬಿಡಿ. 5ನೇ ಕ್ಲಾಸ್​​ ಹುಡುಗನೇ ಟ್ರೆಂಡ್​​ನ ಸೃಷ್ಟಿಕರ್ತ.!
ಇಂಡೋನೇಷ್ಯಾ ರಯಾನ್​ ಅರ್ಕಾನ್​ ಡಿಕಾ
ಬಾಲಕನ ಹೆಸ್ರು ರಯಾನ್​ ಅರ್ಕಾನ್​ ಡಿಕಾ, ಇಂಡೋನೇಷ್ಯಾದವನು. ಈ ಇಂಡೋನೇಷ್ಯಾದ ಬೋಟ್​​​ರೇಸ್​​ನಲ್ಲಿ ಬೋಟ್​ ಮುಂದೆ ನಿಂತು ತನ್ನ ತಂಡವನ್ನ ಹುರಿದುದುಂಬಿಸೋದು ಈತನ ಕೆಲಸ. ಆ ಕೆಲಸವನ್ನ ಈ ಸ್ಪೆಷಲ್​​ ಸ್ಟೆಪ್ಸ್​​ನೊಂದಿಗೆ ರಯಾನ್​ ಆರ್ಕಾನ್​ ಮಾಡೋಕೆ ಶುರು ಮಾಡಿದ. ಈತನ ‘ಕೂಲ್​​​ ಡಾನ್ಸ್​’​​ ಹೊಸ ಟ್ರೆಂಡೇ ಸೃಷ್ಟಿಸಿಬಿಡ್ತು.
ಅಂದ್ಹಾಗೆ, ಈ ಔರಾ ಫಾರ್ಮಿಂಗ್​ ಅಂದ್ರೆ, ತನಗೆ ಇಷ್ಟ ಬಂದಿದ್ದನ್ನ ಮಾಡೋದು, ಅದನ್ನ ಏಂಜಾಯ್​ ಮಾಡೋದು ಅನ್ನೋ ಅರ್ಥ ಬರುತ್ತೆ. ಇಂಡೋನೇಷ್ಯಾದ ಆ ಚಿಕ್ಕ ಹುಡುಗ ತನಗಿಷ್ಟ ಬಂದಿದ್ದನ್ನ ಮಾಡಿದ. ಈಗ ಅದನ್ನ ಇಡೀ ಜಗತ್ತೇ ಇಷ್ಟಪಡ್ತಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ