/newsfirstlive-kannada/media/post_attachments/wp-content/uploads/2024/06/Suryakumar-Yadav1.jpg)
ಸೂರ್ಯಕುಮಾರ್ ಯಾದವ್. ಇದು ಹೆಸರಲ್ಲ. ಟಿ20 ಕ್ರಿಕೆಟ್ನ ಬ್ರ್ಯಾಂಡ್. ಯಾಕಂದ್ರೆ ಟಿ20 ಕ್ರಿಕೆಟ್ ಆಡೋದು ಹೀಗೆ ಅನ್ನೋದು ಜಗತ್ತಿಗೆ ಅದ್ಭುತವಾಗಿ ತೋರಿಸಿದ್ದೇ ಈ ಸೂರ್ಯ.
ಸೂರ್ಯಕುಮಾರ್ ಯಾದವ್. ಟಿ20 ಕ್ರಿಕೆಟ್ನ ಬ್ರ್ಯಾಂಡ್ ಅಂಬಾಸಿಡರ್. ಈ ಟಿ20 ಕ್ರಿಕೆಟ್ನ ಬ್ರಾಂಡ್ ಒಮ್ಮೆ ಸಿಡಿದೆದ್ದು ನಿಂತ್ರೆ ಸ್ಫೋಟ ಫಿಕ್ಸ್. ವಿಶ್ವ ಕ್ರಿಕೆಟ್ನ ನಂ.1 ಬ್ಯಾಟರ್ ಆಗಿ ಕರೆಸಿಕೊಳ್ಳುವ ಈ SKY. ನಂಬರ್ ಒನ್ ಬ್ಯಾಟರ್ ಮಾತ್ರವಲ್ಲ. ವಿಶ್ವ ಕ್ರಿಕೆಟ್ನ ಡೆಡ್ಲಿಯೆಸ್ಟ್ ಬ್ಯಾಟರ್. ಬಾಲ್ ಡಾಟ್ ಅನ್ನೋ ಪದವನ್ನ ಇಷ್ಟ ಪಡದ ಈ ಸೂರ್ಯ, ಫಸ್ಟ್ ಬಾಲ್ ಟು ಲಾಸ್ಟ್ ಬಾಲ್ ತನಕ ಆಕ್ಷರಶಃ ಸೃಷ್ಟಿಸುವುದು ರನ್ ಸುನಾಮಿ.
ಇದನ್ನೂ ಓದಿ:ಭಾರತ ತಂಡದ ಗೆಲುವಿಗೆ ಇವರೇ ಕಾರಣ ಎಂದ ಕ್ಯಾಪ್ಟನ್ ಸೂರ್ಯ; ಬಿಚ್ಚಿಟ್ಟ ಅಸಲಿ ಸತ್ಯವೇನು?
ಫಸ್ಟ್ 10 ಬಾಲ್.. 150 ಸ್ಟ್ರೈಕ್ರೇಟ್
ಫಸ್ಟ್ 10 ಬಾಲ್ಸ್.. 150 ಸ್ಟ್ರೈಕ್ರೇಟ್. ಇದು ನಿಜಕ್ಕೂ ಊಹಿಸಿಕೊಳ್ಳುವುದು ಕಷ್ಟ. ಎಂಥಹ ಬ್ಯಾಟರ್ ಆಗಲಿ ಮೊದಲ ಐದಾರು ಬಾಲ್ ಸಿಕ್ಸರ್ ಇರಲಿ, ಬಾಲ್ ಟು ಬಾಲ್ ರೋಟೆಟ್ ಮಾಡೋಕೆ ಕಷ್ಟ ಪಡ್ತಾರೆ. ಸೂರ್ಯ ಇದಕ್ಕೆ ತದ್ವಿರುದ್ಧ. ಫಸ್ಟ್ ಬಾಲ್ನಿಂದಲೇ ರನ್ ಅಟ್ಟಹಾಸ ನಡೆಸ್ತಾರೆ. ಇದಕ್ಕೆ ಸಾಕ್ಷಿ ಟಿ20 ಕರಿಯರ್ನ ಮೊದಲ 10 ಎಸೆತಗಳಲ್ಲಿ ಸಿಡಿಸಿರುವ 873 ರನ್ ಹಾಗೂ 43 ಸಿಕ್ಸರ್.
11-20 ಬಾಲ್ಸ್, ರಣ ಭಯಂಕರ ಆಟ
ಮೊದಲ ಹತ್ತು ಎಸೆತಗಳಲ್ಲೇ 150ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸೋ ಸೂರ್ಯ, ಆ ನಂತರದ 10 ಎಸೆತಗಳಲ್ಲಿ ಆಕ್ಷರಶಃ ವಿಶ್ವರೂಪವನ್ನೇ ತೋರಿಸ್ತಾರೆ. ಇಂಟ್ರೆಸ್ಟಿಂಗ್ ಅಂದ್ರೆ ಈ ಅಂತರದ ಎಸೆತಗಳಲ್ಲಿ 163 ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿರುವ ಸೂರ್ಯ, ತಾನು ಗಳಿಸಿದ 626 ರನ್ ಪೈಕಿ 28 ಸಿಕ್ಸರ್ ಸಿಡಿಸಿದ್ದಾರೆ.
21-30 ಸುನಾಮಿ ಸುಂಟರಗಾಳಿ ಬ್ಯಾಟಿಂಗ್
ಸೂರ್ಯಕುಮಾರ್ರ ಸುನಾಮಿ ಸುಂಟರಗಾಳಿಯ ಬ್ಯಾಟಿಂಗ್ ಶುರುವಾಗುವುದೆ 21-30ರ ಎಸೆತಗಳ ನಡುವೆ. ಈ ಅವಧಿಯ ತನಕ ಸೂರ್ಯ, ಕ್ರೀಸ್ ಕಾಯ್ದುಕೊಂಡಿದ್ರೆ. ಎದುರಾಳಿ ಮಟಾಶ್ ಫಿಕ್ಸ್ ಅಂತಾನೇ ಲೆಕ್ಕ. ಬಾಲ್ ಬೈ ಬಾಲ್, ಬೌಂಡರಿಯ ದರ್ಶನವಾಗುತ್ತೆ. ಇದಕ್ಕೆ ಸಾಕ್ಷಿ 193.61ರ ಸ್ಟ್ರೈಕ್ರೇಟ್ನ ಬ್ಯಾಟಿಂಗ್ ಮಾತ್ರವಲ್ಲ. ಈ ಅವಧಿಯಲ್ಲಿ ಸಿಡಿಸಿರುವ 39 ಸಿಕ್ಸರ್ಗಳೂ ಸಹ ಸಾಕ್ಷಿ!
ಇದನ್ನೂ ಓದಿ:ಸೂರ್ಯ, ಹಾರ್ದಿಕ್ ಪಾಂಡ್ಯ ಸಿಡಿಲಬ್ಬರದ ಬ್ಯಾಟಿಂಗ್; ಭಾರತಕ್ಕೆ ರೋಚಕ ಗೆಲುವು
30+ ಬಾಲ್.. ನರಸಿಂಹನ ಉಗ್ರ ಅವತಾರ
30 ಎಸೆತಗಳ ತನಕ ಕ್ರೀಸ್ನಲ್ಲಿದ್ದರೆ ನಿಜಕ್ಕೂ ನಡೆಯೋದು ನರಸಿಂಹನ ಉಗ್ರವತಾರವಾಗಿರತ್ತೆ. 30 ಪ್ಲಸ್ ಬಾಲ್ ಬಳಿಕ ವಿದ್ವಂಸಕಾರಿ ಬ್ಯಾಟಿಂಗ್ ನಡೆಸೋ ಸೂರ್ಯ, 198.67 ಸ್ಟ್ರೈಕ್ರೇಟ್ನಲ್ಲಿ 447 ರನ್ ಸಿಡಿಸಿದ್ದಾರೆ. 29 ಸಿಕ್ಸರ್ ಒಳಗೊಂಡಿವೆ.
ಈ ಬ್ಯಾಟಿಂಗ್ ಅಟ್ಯಾಕಿಂಗ್ ಮೆಂಟಾಲಿಟಿಯನ್ನ ಮಾತ್ರ ತೋರಿಸ್ತಿಲ್ಲ. ಬಾಲ್ ಬೈ ಬಾಲ್ ಟಿ20 ಬ್ಯಾಟಿಂಗ್ನ ಇಂಟೆಂಟ್ ಹೇಗಿರಬೇಕು ಅನ್ನೋದನ್ನು ತೋರಿಸ್ತಿದೆ. ತಾನು ಕ್ರೀಸ್ನಲ್ಲಿ ಇರುವಷ್ಟು ತನಕ ಎದುರಾಳಿಗಳ ಗೆಲುವು ಸುಲಭದಲ್ಲ ಎಂಬುವುದನ್ನ ಪ್ರತಿಬಿಂಬಿಸುತ್ತಿದೆ. ಡೆಬ್ಯು ಮ್ಯಾಚ್ನಿಂದ ಇಲ್ಲಿಯ ತನಕ ಬ್ಯಾಟಿಂಗ್ನಲ್ಲೂ ಎಲ್ಲೂ ರಾಜಿಯಾಗದ ಸೂರ್ಯ, ಇದೇ ರೀತಿ ಪ್ರಜ್ವಲಿಸುತ್ತಾ ಸಾಗಲಿ ಅನ್ನೋದೇ ಕ್ರಿಕೆಟ್ ಅಭಿಮಾನಿಗಳ ಆಶಯ.
ಇದನ್ನೂ ಓದಿ:T20 ವಿಶ್ವಕಪ್ ಗೆಲುವಿಗೆ ಸೂರ್ಯ ಅಲ್ಲ, ಪಂತ್ನ ಆ ಟ್ರಿಕ್ಸ್ ಕಾರಣ; ರೋಹಿತ್ ರಿವೀಲ್ ಮಾಡಿದ್ದೇನು?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್