/newsfirstlive-kannada/media/post_attachments/wp-content/uploads/2024/02/Rohit_Hardik_Test.jpg)
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲೇ ಅತ್ಯಂತ ಯಶಸ್ವಿ ತಂಡ ಮುಂಬೈ ಇಂಡಿಯನ್ಸ್. ಕಳೆದ ಸೀಸನ್ನಲ್ಲಿ ಕ್ಯಾಪ್ಟನ್ಸಿಯಿಂದ ರೋಹಿತ್ ಶರ್ಮಾ ಅವರನ್ನು ಕೆಳಗಿಳಿಸಿ ಹಾರ್ದಿಕ್ ಪಾಂಡ್ಯಗೆ ಮಣೆ ಹಾಕಲಾಯ್ತು. ಹಾರ್ದಿಕ್ ಪಾಂಡ್ಯಗೆ ನಾಯಕತ್ವ ಪಟ್ಟ ಕಟ್ಟಿದ ನಿರ್ಧಾರ ಎಲ್ಲರಿಗೂ ಶಾಕಿಂಗ್ ಆಗಿತ್ತು. ಈ ಹೊತ್ತಲೇ ಹಾರ್ದಿಕ್ ಪಾಂಡ್ಯ ನಾಯಕತ್ವದ ಬಗ್ಗೆ ಭಾರತ ಟಿ20 ಕ್ರಿಕೆಟ್ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಮಾತಾಡಿದ್ದಾರೆ.
ಏನಂದ್ರು ಸೂರ್ಯ?
ಇನ್ನು ಈ ಕುರಿತು ಕಾರ್ಯಕ್ರಮವೊಂದರಲ್ಲಿ ಮಾತಾಡಿದ ಸೂರ್ಯಕುಮಾರ್ ಯಾದವ್ ಅಚ್ಚರಿಕೆ ಹೇಳಿಕೆ ನೀಡಿದರು. ಮುಂಬೈ ಇಂಡಿಯನ್ಸ್ ಒಂದು ಕುಟುಂಬ ಇದ್ದಂತೆ. ನಮ್ಮಲ್ಲಿ ಮೂವರು ನಾಯಕರು ಇದ್ದಾರೆ, ನಾಲ್ವರು ನಾಯಕರಿದ್ದಾರೆ ಎಂದು ಯೋಚನೆ ಮಾಡುವುದಿಲ್ಲ. ನಾವು ಎಲ್ಲರೂ ಒಂದೇ ತಂಡಕ್ಕೆ ಸೇರಿದವರು ಅನ್ನೋ ಭಾವನೆ ಇದೆ ಎಂದರು.
ಮುಂಬೈ ಇಂಡಿಯನ್ಸ್ ತಂಡದಲ್ಲಿ ಹಲವು ನಾಯಕರಿದ್ದಾರೆ. ರೋಹಿತ್ ಶರ್ಮಾ ಭಾರತದ ಟೆಸ್ಟ್ ಮತ್ತು ಏಕದಿನ ನಾಯಕರಾಗಿದ್ದರೆ, ಸೂರ್ಯಕುಮಾರ್ ಟಿ20ಯಲ್ಲಿ ಭಾರತವನ್ನು ಲೀಡ್ ಮಾಡುತ್ತಿದ್ದಾರೆ. ಇಷ್ಟೇ ಅಲ್ಲ ಜಸ್ಪ್ರೀತ್ ಬುಮ್ರಾ ಕೂಡ ಹಲವು ಬಾರಿ ಭಾರತ ತಂಡವನ್ನು ಮುನ್ನಡೆಸಿದ್ದಾರೆ. ಹಾರ್ದಿಕ್ ಪಾಂಡ್ಯ ಕೂಡ ಭಾರತ ತಂಡದ ಕ್ಯಾಪ್ಟನ್ ಆಗಿದ್ದರು.
2025ರ ಐಪಿಎಲ್ ತಂಡ ಹೀಗಿದೆ!
ರೋಹಿತ್ ಶರ್ಮಾ, ವಿಲ್ ಜಾಕ್ಸ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ನಮನ್ ಧೀರ್, ರಿಯಾನ್ ರಿಕೆಲ್ಟನ್, ಮಿಚೆಲ್ ಸ್ಯಾಂಟ್ನರ್, ಜಸ್ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್ ಮತ್ತು ದೀಪಕ್ ಚಹಾರ್.
ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿ; ಭಾರತ ತಂಡದ ಮಾನ ಕಾಪಾಡಿದ ಕನ್ನಡಿಗ KL ರಾಹುಲ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ