2025ರ ಐಪಿಎಲ್​​; ಮುಂಬೈ ಇಂಡಿಯನ್ಸ್​ಗೆ ಸೂರ್ಯಕುಮಾರ್​​ ಯಾದವ್​ ಕ್ಯಾಪ್ಟನ್​​

author-image
Ganesh Nachikethu
Updated On
2025ರ ಐಪಿಎಲ್​​; ಮುಂಬೈ ಇಂಡಿಯನ್ಸ್​ಗೆ ಸೂರ್ಯಕುಮಾರ್​​ ಯಾದವ್​ ಕ್ಯಾಪ್ಟನ್​​
Advertisment
  • ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್
  • ಈ ಮುನ್ನವೇ ಮುಂಬೈ ಇಂಡಿಯನ್ಸ್​ಗೆ ಮೇಜರ್​ ಸರ್ಜರಿ
  • ಮುಂಬೈ ಕ್ಯಾಪ್ಟನ್ಸಿ ರೇಸ್​ನಲ್ಲಿ ಸ್ಟಾರ್​​ ಆಟಗಾರನ ಹೆಸ್ರು!

2025ರ ಐಪಿಎಲ್​ ಸೀಸನ್​ಗಾಗಿ ಬರೋಬ್ಬರಿ 16 ಕೋಟಿ ನೀಡಿ ಸ್ಟಾರ್​ ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯ ಅವರನ್ನು ಮುಂಬೈ ಇಂಡಿಯನ್ಸ್​ ಉಳಿಸಿಕೊಂಡಿದೆ. 2025ರ ಐಪಿಎಲ್​ಗೂ ಮುಂಬೈ ಇಂಡಿಯನ್ಸ್​ ತಂಡವನ್ನು ಹಾರ್ದಿಕ್​ ಪಾಂಡ್ಯ ಅವರೇ ಲೀಡ್​ ಮಾಡಲಿದ್ದಾರೆ. ಇದರ ಮಧ್ಯೆ ಹಾರ್ದಿಕ್​ ಪಾಂಡ್ಯಗೆ ಒಂದು ಶಾಕಿಂಗ್​ ನ್ಯೂಸ್​ ಒಂದಿದೆ.

ಹಾರ್ದಿಕ್​ ಮೇಲೆ ನಿಷೇಧ

ಕಳೆದ ಸೀಸನ್​ನಲ್ಲಿ ಮುಂಬೈ ಇಂಡಿಯನ್ಸ್​ ತಂಡದ ಕೊನೆ ಪಂದ್ಯದಲ್ಲಿ ನಿಧಾನಗತಿಯ ಓವರ್‌ ಮಾಡಲಾಗಿತ್ತು. ಹೀಗಾಗಿ ಮುಂಬೈ ಇಂಡಿಯನ್ಸ್​ ಕ್ಯಾಪ್ಟನ್​​ ಹಾರ್ದಿಕ್​ ಪಾಂಡ್ಯ ಮೇಲೆ ಒಂದು ಪಂದ್ಯಕ್ಕೆ ಬಿಸಿಸಿಐ ನಿಷೇಧ ಹೇರಿದೆ. ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಯಾವುದೇ ತಂಡದಲ್ಲಿ ಸ್ಲೋ ಓವರ್ ರೇಟ್ 3 ಬಾರಿ ಕಂಡು ಬಂದಲ್ಲಿ ನಿಷೇಧ ಹೇರಲಾಗುತ್ತದೆ. ಅದರಲ್ಲೂ ತಂಡದ ನಾಯಕನಿಗೆ 1 ಪಂದ್ಯಕ್ಕೆ ನಿಷೇಧ ಹೇರುವುದು ಕಾನೂನು. ಹೀಗಾಗಿ ಹಾರ್ದಿಕ್ ಪಾಂಡ್ಯ ಅವರು ಐಪಿಎಲ್ 2025ರ ಮೊದಲ ಪಂದ್ಯ ಆಡುವುದಿಲ್ಲ.

2025ರ ಐಪಿಎಲ್​ನಲ್ಲೂ ಹಾರ್ದಿಕ್ ಪಾಂಡ್ಯ ಅವರನ್ನೇ ಮುಂಬೈ ಇಂಡಿಯನ್ಸ್ ನಾಯಕನಾಗಿ ಮುಂದುವರಿಸಲಿದೆ. ಈ ಪರಿಸ್ಥಿತಿಯಲ್ಲಿ ಹಾರ್ದಿಕ್ ಪಾಂಡ್ಯ ಬದಲಿಗೆ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ತಂಡವನ್ನು ಯಾರು ಮುನ್ನಡೆಸಲಿದ್ದಾರೆ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.

ಸೂರ್ಯಗೆ ಕ್ಯಾಪ್ಟನ್ಸಿ

ಇನ್ನೂ ಐಪಿಎಲ್​ ಶುರುವಾಗಲು 2 ದಿನ ಮಾತ್ರ ಬಾಕಿ ಇದೆ. ಇದಕ್ಕೂ ಮುನ್ನ ಕ್ಯಾಪ್ಟನ್​ ಹಾರ್ದಿಕ್ ಪಾಂಡ್ಯ ಮತ್ತು ಮುಖ್ಯ ಕೋಚ್ ಮಹೇಲಾ ಜಯವರ್ಧನೆ ಸುದ್ದಿಗೋಷ್ಠಿ ನಡೆಸಿ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದರು. ಈ ವೇಳೆ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ತಂಡವನ್ನು ಸೂರ್ಯಕುಮಾರ್ ಯಾದವ್ ಲೀಡ್​ ಮಾಡಲಿದ್ದಾರೆ ಎಂದರು.

ಸೂರ್ಯಕುಮಾರ್ ಯಾದವ್ ಭಾರತ ತಂಡದ ನಾಯಕ. ಇವರು 2025ರ ಐಪಿಎಲ್​ ಮೊದಲ ಪಂದ್ಯದಲ್ಲಿ ಮುಂಬೈ ತಂಡದ ಕ್ಯಾಪ್ಟನ್​ ಆಗಲಿದ್ದಾರೆ. ಐಪಿಎಲ್ 2024ರಿಂದ ಹಾರ್ದಿಕ್ ಮೇಲಿನ ಒಂದು ಪಂದ್ಯದ ನಿಷೇಧದ ಬಗ್ಗೆ ಅಧಿಕೃತವಾಗಿ ತಿಳಿಸಲಾಗಿದೆ ಎಂದರು ಹೆಡ್‌ಕೋಚ್ ಮಹೇಲ ಜಯವರ್ಧನೆ.

ಇದನ್ನೂ ಓದಿ:ನೀವು ಸ್ಲಿಮ್​​ ಅಂಡ್​ ಫಿಟ್​ ಆಗಿ ಕಾಣಬೇಕೇ? ಯೋಗಾಸನದಿಂದ ಇರೋ ಲಾಭಗಳೇನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment