/newsfirstlive-kannada/media/post_attachments/wp-content/uploads/2024/11/Surya_Hardik.jpg)
ಟೀಮ್ ಇಂಡಿಯಾದ ಟಿ20 ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ದೊಡ್ಡ ಶಾಕ್ ಎದುರಾಗಿದೆ. ಸೈಲೆಂಟಾಗೇ ಸೂರ್ಯನ ಏಕದಿನ ಕರಿಯರ್ ಖತಂ ಆಗೋ ಎಲ್ಲಾ ಲಕ್ಷಣಗಳು ಕಾಣಿಸ್ತಿವೆ.
ಮೆಲ್ಬೋರ್ನ್ ಟೆಸ್ಟ್ ಪಂದ್ಯದ ಅಬ್ಬರದ ನಡುವೆ ಭಾರತೀಯ ಕ್ರಿಕೆಟ್ ಲೋಕದಲ್ಲಿ ಚಾಂಪಿಯನ್ಸ್ ಟ್ರೋಫಿಗೆ ಸೈಲೆಂಟಾಗೇ ಸಿದ್ಧತೆ ಆರಂಭವಾಗಿದೆ. ಮಹತ್ವದ ಒನ್ ಡೇ ಟೂರ್ನಿ ಫೆಬ್ರವರಿ 19ರಿಂದ ಆರಂಭವಾಗಲಿದ್ದು, ಐಸಿಸಿ ಟ್ರೋಫಿ ಗೆಲ್ಲಲು ಬ್ಲ್ಯೂ ಪ್ರಿಂಟ್ ಸಿದ್ಧವಾಗ್ತಿದೆ. ಸಿದ್ಧತೆಯ ಹಂತದಲ್ಲೇ ದೊಡ್ಡ ನ್ಯೂಸ್ ಹೊರಬಿದ್ದಿದೆ. ಮಹತ್ವದ ಟೂರ್ನಿಯಿಂದ ಟೀಮ್ ಇಂಡಿಯಾದ ಟಿ20 ಕ್ಯಾಪ್ಟನ್ ಸೂರ್ಯಕುಮಾರ್ನ ಡ್ರಾಪ್ ಮಾಡೋ ಸಾಧ್ಯತೆ ದಟ್ಟವಾಗಿದೆ.
ಚಾಂಪಿಯನ್ಸ್ ಟ್ರೋಫಿಯಿಂದ ಸೂರ್ಯ ಔಟ್
ಸೂರ್ಯಕುಮಾರ್ ಯಾದವ್.. ಈ ಹೆಸರು ಕೇಳಿದ್ರೆ ಎದುರಾಳಿಗಳಿಗೆ ನಡುಕ ಶುರುವಾಗುತ್ತೆ. ಇವರು ಕೊಡುವ ಒಂದೊಂದು ಏಟು ಚಿತ್ರ.. ವಿಚಿತ್ರ! ಮೈದಾನದ ಅಷ್ಟದಿಕ್ಕಿಗೂ ಚೆಂಡಿನ ದರ್ಶನ ಮಾಡಿಸೊ ಕಿಲಾಡಿ. ಸೂರ್ಯ ಕುಮಾರ್ ಯಾದವ್ ಬ್ಯಾಟಿಂಗ್ ನೋಡೋ ಮಜಾನೇ ಬೇರೆ ಬಿಡಿ. ಇಂತಹ ಸೂರ್ಯ ಕುಮಾರ್ನ ಮಹತ್ವದ ಒನ್ ಡೇ ಟೂರ್ನಿಯಿಂದ ಡ್ರಾಪ್ ಮಾಡಲು ಟೀಮ್ ಮ್ಯಾನೇಜ್ಮೆಂಟ್ ಮುಂದಾಗಿದೆ.
ಇದನ್ನೂ ಓದಿ:IND vs AUS ರೋಚಕ ಘಟ್ಟ ತಲುಪಿದ ಟೆಸ್ಟ್; ಗೆಲುವಿನ ಭರವಸೆ ಮೂಡಿಸಿದ ಯಶಸ್ವಿ ಜೈಸ್ವಾಲ್..!
ODI ಕ್ರಿಕೆಟ್ ಕರಿಯರ್ ಖತಂ
ಸೂರ್ಯಕುಮಾರ್ ಯಾದವ್ ಡ್ರಾಪಾ? ಅನ್ನೋ ಅಚ್ಚರಿ ನಿಮ್ಮನ್ನ ಕಾಡ್ತಿರಬಹುದು. ಅಸಲಿಗೆ ಚಾಂಪಿಯನ್ಸ್ ಟ್ರೋಫಿಯಿಂದ ಡ್ರಾಪ್ ಮಾತ್ರವಲ್ಲ. ಸೂರ್ಯ ಒನ್ ಡೇ ಕರಿಯರ್ ಖತಂ ಆದ್ರೂ ಆಶ್ಚರ್ಯಪಡಬೇಕಿಲ್ಲ. ಅನ್ನೋ ಪ್ರಶ್ನೆಗೆ ಉತ್ತರ ಇದೆ. ಟಿ20 ಕ್ರಿಕೆಟ್ನ ಈ ಸೂಪರ್ ಸ್ಟಾರ್ ಒನ್ ಡೇ ಕ್ರಿಕೆಟ್ಗೆ ಸೂಟೇ ಆಗಲ್ಲ.
35 ಇನ್ನಿಂಗ್ಸ್, 25 ಸರಾಸರಿ..!
35 ಇನ್ನಿಂಗ್ಸ್ಗಳು, 773 ರನ್.. 25ರ ಕಳಪೆ ಸರಾಸರಿ.. ಇದು ಸೂರ್ಯಕುಮಾರ್ ಯಾದವ್ರ ಏಕದಿನ ಫಾರ್ಮೆಟ್ನ ಸಾಧನೆ. ಟಿ20 ಕ್ರಿಕೆಟ್ನಲ್ಲಿ ಧಮಾಕಾ ಸೃಷ್ಟಿಸಿ ಎದುರಾಳಿಗಳನ್ನ ಸುಡುವ ಸೂರ್ಯ ಏಕದಿನ ಫಾರ್ಮೆಟ್ ಟೀಮ್ ಇಂಡಿಯಾಗೆ ವಿಲನ್ ಆಗಿದ್ದಾರೆ. ಸೂರ್ಯನ ಕಳಪೆ ಆಟ ಏಕದಿನ ವಿಶ್ವಕಪ್ ಫೈನಲ್ ಸೇರಿದಂತೆ ಹಲವು ಪಂದ್ಯಗಳ ಸೋಲಿಗೆ ಕಾರಣವಾಗಿರೋದು ಸುಳ್ಳಲ್ಲ. ಈ ಕಾರಣಕ್ಕೆ ಏಕದಿನ ಕ್ರಿಕೆಟ್ನಿಂದ ದೂರಾಗಿರೋದು.
ವಿಜಯ್ ಹಜಾರೆ ಟೂರ್ನಿಯಲ್ಲೂ ಸೂರ್ಯ ಸೈಲೆಂಟ್
ಓನ್ ಡೇ ಕ್ರಿಕೆಟ್ಗೆ ಕಮ್ಬ್ಯಾಕ್ ಮಾಡೋಕೆ ಸೂರ್ಯ ಈಗಲೂ ಪ್ರಯತ್ನ ನಡೆಸ್ತಿದ್ದಾರೆ. ಫಲ ಸಿಗ್ತಿಲ್ಲ. ಸದ್ಯ ಮುಂಬೈ ಪರ ವಿಜಯ್ ಹಜಾರೆ ಟೂರ್ನಿಯಲ್ಲಿ ಸೂರ್ಯ ಕುಮಾರ್ ಆಡ್ತಿದ್ದಾರೆ. ಇಲ್ಲೂ ಫಾರ್ಮ್ ಕಂಡು ಕೊಳ್ಳಲು ಪರದಾಡ್ತಿದ್ದಾರೆ. ಹಿಂದಿನ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಡಕೌಟ್ ಆಗಿದ್ದಾರೆ. ಟೂರ್ನಿಯಲ್ಲಿ 3 ಪಂದ್ಯ ಆಡಿ 38 ರನ್ಗಳಿಸಿರೋ ಸೂರ್ಯ, 12.67ರ ಹೀನಾಯ ಸರಾಸರಿ ಹೊಂದಿದ್ದಾರೆ.
ವಿಜಯ್ ಹಜಾರೆ ಮಾತ್ರವಲ್ಲ. ಅದಕ್ಕೂ ಹಿಂದೆ ಮುಷ್ತಾಕ್ ಅಲಿ ಟೂರ್ನಿಯಲ್ಲೂ ಸೂರ್ಯ ಕಳಪೆ ಪರ್ಫಾಮೆನ್ಸ್ ನೀಡಿದ್ರು. 5 ಇನ್ನಿಂಗ್ಸ್ನಿಂದ ಕೇವಲ 26.40ರ ಸರಾಸರಿಯಲ್ಲಿ 132 ರನ್ಗಳಿಸಿದ್ರು.
ಇದನ್ನೂ ಓದಿ:BIGG BOSS; ಉಗ್ರಂ ಮಂಜು- ತ್ರಿವಿಕ್ರಮ್ ನಡುವೆ ಬಿರುಸಿನ ಮಾತುಕತೆ.. ಟಾಸ್ಕ್ ಕೈ ಚೆಲ್ಲಿದ್ರಾ ಸ್ಪರ್ಧಿಗಳು?
ಸೂರ್ಯಕುಮಾರ್ ಯಾದವ್ ಕೊನೆಯದಾಗಿ ಏಕದಿನ ಪಂದ್ಯವನ್ನಾಡಿದ್ದು 2023 ನವೆಂಬರ್ನಲ್ಲಿ. ಆಸ್ಟ್ರೇಲಿಯಾ ಎದುರು ಏಕದಿನ ವಿಶ್ವಕಪ್ ಫೈನಲ್ನಲ್ಲಿ ಆಡಿದ್ದೇ ಕೊನೆ. ಅದಾಗಿ ಒಂದು ವರ್ಷದ ಮೇಲಾಯ್ತು. ಈವರೆಗೆ ಸೂರ್ಯ ಏಕದಿನ ತಂಡಕ್ಕೆ ಸೆಲೆಕ್ಟೇ ಆಗಿಲ್ಲ. ಸೈಲೆಂಟಾಗೇ ಸೂರ್ಯಕುಮಾರ್ ಒನ್ ಡೇ ಕರಿಯರ್ ಅಂತ್ಯವಾಗ್ತಿದೆ ಅನ್ನೋದನ್ನ ಸೆಲೆಕ್ಟರ್ಸ್ ನಡೆಯೇ ಸೂಚಿಸ್ತಿದೆ.
ಸೂರ್ಯಕುಮಾರ್ ಕಮ್ಬ್ಯಾಕ್ಗಿರೋ ಒಂದೇ ಅವಕಾಶ ಅಂದ್ರೆ ಚಾಂಪಿಯನ್ಸ್ ಟ್ರೋಫಿ. ಅದಾದ ಬಳಿಕ ಮುಂಬರೋ ಏಕದಿನ ವಿಶ್ವಕಪ್ಗೆ ಸಿದ್ಧತೆ ಆರಂಭವಾಗಲಿದ್ದು, ಸೀನಿಯರ್ಸ್ ಬಿಟ್ಟು ಯುವ ಆಟಗಾರರ ಮೇಲೆ ಮ್ಯಾನೇಜ್ಮೆಂಟ್ ಕಣ್ಣಿಡಲಿದೆ. ಸದ್ಯ ಸೂರ್ಯ ಫಾರ್ಮ್ನಲ್ಲಿಲ್ಲ. ಹೀಗಾಗಿ ಚಾಂಪಿಯನ್ಸ್ ಟ್ರೋಫಿ ತಂಡಕ್ಕೆ ಎಂಟ್ರಿ ಕೊಡೋದು ಅನುಮಾನವಾಗಿದೆ. ಒಂದು ವೇಳೆ ಸೂರ್ಯ ಚಾಂಪಿಯನ್ಸ್ ಟ್ರೋಫಿಯಿಂದ ಡ್ರಾಪ್ ಆಗಿದ್ದೇ ಆದ್ರೆ ಏಕದಿನ ಕರಿಯರ್ಗೆ ಕೊನೆ ಮೊಳೆ ಬಿದ್ದಂತೆ.
ಇದನ್ನೂ ಓದಿ:ಸುದೀಪ್ ಬಳಿ ವಿಶೇಷ ಮನವಿ ಮಾಡಿದ ಐಶ್ವರ್ಯ.. ‘ಡನ್’ ಎಂದ ಕಿಚ್ಚ..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್