/newsfirstlive-kannada/media/post_attachments/wp-content/uploads/2025/05/SURYAKUMAR_YADAV-2.jpg)
ಐಪಿಎಲ್ನ ಆರಂಭದಲ್ಲಿ ಕೆಟ್ಟ ಪ್ರದರ್ಶನ ನೀಡಿದರೂ ಕೊನೆಯಲ್ಲಿ ಉತ್ತಮ ಪರ್ಫಾಮೆನ್ಸ್ ನೀಡಿದ ಮುಂಬೈ ಇಂಡಿಯನ್ಸ್ ಇಂದು ಗುಜರಾತ್ ವಿರುದ್ಧ ಎಲಿಮಿನೇಟರ್ ಪಂದ್ಯ ಆಡಲಿದೆ. ಇದರ ನಡುವೆ ಮುಂಬೈ ಇಂಡಿಯನ್ಸ್ನ ಸ್ಟಾರ್ ಬ್ಯಾಟ್ಸ್ಮನ್ ಸೂರ್ಯಕುಮಾರ್ ಯಾದವ್ ಅವರು ತನ್ನ ತಂದೆಯ ಕಚೇರಿಗೆ ಭೇಟಿ ನೀಡಿದ್ದಾರೆ. ಪಂದ್ಯದ ನಡುವೆಯೂ ಸೂರ್ಯಕುಮಾರ್, ತಂದೆಯ ಆಫೀಸ್ಗೆ ಹೋಗಿದ್ದು ಏಕೆ, ವಿಶ್ ಮಾಡಿದ್ದು ಯಾಕೆ?.
ಮುಂಬೈ ತಂಡದ ಬ್ಯಾಟರ್, ಉಪನಾಯಕ ಸೂರ್ಯಕುಮಾರ್ ಅವರು ಕಾರ್ಯಕ್ರಮದಲ್ಲಿ ಮಾತನಾಡಿ, ಇಲ್ಲಿಗೆ ಬಂದ ಮೇಲೆ ವಿಡಿಯೋದಲ್ಲಿ ನೋಡಿದ ಮೇಲೆಯೇ ಅಪ್ಪ ಇಷ್ಟೊಂದು ಚೆನ್ನಾಗಿ ಹಾಡು ಹಾಡುತ್ತಾರೆ ಎಂದು ಗೊತ್ತಾಗಿದ್ದು. ಮನೆಯಲ್ಲಿ ಯಾವಾಗಲೂ ಹಾಡು ಹಾಡಿಲ್ಲ. ನಾನು, ನನ್ನ ತಂಗಿ ಇಲ್ಲದ ಸಮಯದಲ್ಲಿ ಗ್ಯಾರಂಟಿ ಸಾಂಗ್ ಹಾಡಿರುತ್ತಾರೆ ಅಂತ ಸೂರ್ಯಕುಮಾರ್ ಅವರು ಹೇಳುತ್ತಿದ್ದಂತೆ ಕಾರ್ಯಕ್ರಮದಲ್ಲಿ ಇದ್ದವರೆಲ್ಲರೂ ನಕ್ಕರು.
ತುಂಬಾ ಸುಂದರವಾದ ಪ್ರವಾಸ ಕೆಲವು ದಿನಗಳ ನಂತರ ಕೊನೆಗೊಳ್ಳುತ್ತದೆ. ಅದರಂತೆ ಉದ್ಯೋಗದಲ್ಲಿ ನಿವೃತ್ತಿ ಎನ್ನುವುದು ಇದ್ದೇ ಇದೆ. ಪ್ರೀತಿಯನ್ನು ಕೊಡುವ ಒಳ್ಳೆಯ ಗಳೆಯರ ಜೊತೆ ಕೆಲಸ ಮಾಡಿ ವಿದಾಯ ಹೇಳುತ್ತಿದ್ದೀರಿ. ಆದರೆ ಸೆಕೆಂಡ್ ಇನ್ನಿಂಗ್ಸ್ ಅನ್ನೊದು ಇದೆ. ಅದನ್ನು ಇನ್ನಷ್ಟು ಚೆನ್ನಾಗಿ ಹಾಗೂ ನೆನಪಿನಲ್ಲಿ ಉಳಿಯುವಂತೆ ಮಾಡಲು ನಾನು ಶ್ರಮ ವಹಿಸುತ್ತೇನೆ ಅಂತ ತಂದೆಗೆ ಸೂರ್ಯಕುಮಾರ್ ಭರವಸೆ ನೀಡಿದರು.
ಇದನ್ನೂ ಓದಿ:ಫೈನಲ್ಗೆ 4ನೇ ಬಾರಿ ಎಂಟ್ರಿಕೊಟ್ಟ RCB.. Qualifier-1ರಲ್ಲಿ ಬೆಂಗಳೂರಿಗೆ ಸುಲಭ ಜಯ
ನನ್ನ ಜೀವನದಲ್ಲಿ ಅತಿ ಮುಖ್ಯ ಪಾತ್ರವಹಿಸಿದ್ದು ಅಪ್ಪ. ದಿನಗಳು ಕಳೆದಂತೆ ಜೀವನದಲ್ಲಿ ಮುಂದೆ ಮುಂದೆ ಹೋಗಲು ನನಗೆ ಏನು ಗೊತ್ತಿರಲಿಲ್ಲ. ತುಂಬಾ ಸಪೋರ್ಟ್ ಮಾಡಿದರು. ಬೆಳಗ್ಗೆ ಎದ್ದೇಳಬೇಕು. ಶಾಲೆಗೆ ಹೋಗಬೇಕಾದರೆ ಟಿಫಿನ್ ಬಾಕ್ಸ್ ರೆಡಿ ಮಾಡಿಕೊಡುತ್ತಿದ್ದರು. ಬಳಿಕ ಕರೆದುಕೊಂಡು ಹೋಗಿ ಶಾಲೆಗೆ, ಕಾಲೇಜಿಗೆ ಬಿಡುತ್ತಿದ್ದರು. ಇವೆಲ್ಲಾ ಸಣ್ಣ ಸಣ್ಣ ನೆನಪುಗಳು, ಇಂತಹವು ಜೀವನದಲ್ಲಿ ಸಾಕಷ್ಟು ಇವೆ ಎಂದು ಹೇಳಿದರು.
ಕ್ರಿಕೆಟ್ಗೆ ಬಂದ ಮೇಲೆ ಟೆಸ್ಟ್ ಪಂದ್ಯಗಳನ್ನು ಬೆಳಗ್ಗೆ 9 ಗಂಟೆ ಇಂದ 5 ಗಂಟೆವರೆಗೆ ಆಡುತ್ತಿದ್ದೆ. ಅಪ್ಪನೂ ಬೆಳಗ್ಗೆ 9 ಗಂಟೆಗೆ ಆಫೀಸ್ಗೆ ಹೋಗಿ 6 ಗಂಟೆಗೆ ಬರುತ್ತಿದ್ದರು. ಆಫೀಸ್ನಲ್ಲಿ ಏನೇ ಗಲಾಟೆ, ತಪ್ಪು, ಸಂತೋಷ ಆದರೂ ಮನೆವರೆಗೂ ಯಾವಾತ್ತೂ ತಂದಿಲ್ಲ. ಇದೆಲ್ಲ ಅವರಿಂದ ನಾನು ಕಲಿತುಕೊಂಡೆ. ಒಳ್ಳೆ ಒಳ್ಳೆ ಕ್ವಾಲಿಟಿಗಳನ್ನು ಅವರಿಂದ ಪಡೆದಿದ್ದೇನೆ. ಅವರ ಮುಂದಿನ ಜೀವನ, ಸೆಕೆಂಡ್ ಇನ್ನಿಂಗ್ಸ್ ನಮ್ಮ ಜೊತೆ ಇರುತ್ತದೆ. ಈ ವೇಳೆ ಎಷ್ಟು ಸಮಯ ಕೊಡಬೇಕೋ ಅಷ್ಟು ಸಮಯವನ್ನು ನಾವು ಕೊಡುತ್ತೇವೆ. ಅಮ್ಮನೂ, ಅಪ್ಪಗೆ ಫಿಲ್ಲರ್ ಆಫ್ ಸ್ಟ್ರೆಂಥ್ ಆಗಿದ್ದಾರೆ. ಇಬ್ಬರೂ ಜೊತೆ ಆದಷ್ಟು ಹೆಚ್ಚಿನ ಸಮಯ ಕಳೆಯಲು ಇಷ್ಟ ಪಡುತ್ತೇನೆ ಎಂದು ಹೇಳಿದ್ದಾರೆ.
ಇನ್ನು ಸೂರ್ಯಕುಮಾರ್ ಅವರ ತಂದೆ ಅಶೋಕ್ ಕುಮಾರ್ ಯಾದವ್ ಅವರು ಮುಂಬೈಯಲ್ಲಿರುವ ಬಾಬಾ ಅಟೋಮಿಕ್ ರಿಸರ್ಚ್ ಸೆಂಟರ್ (ಬಾರ್ಕ್) ನಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಇತ್ತೀಚೆಗೆ ಅವರು ಸಂಸ್ಥೆಯಲ್ಲಿ ಚೀಫ್ ಇಂಜಿನಿಯರ್ ಆಗಿದ್ದರು. ಸದ್ಯ ಈ ಹುದ್ದೆಯಿಂದ ಅಶೋಕ್ ಕುಮಾರ್ ಯಾದವ್ ಅವರು ನಿವೃತ್ತಿ ಹೊಂದಿದ್ದಾರೆ. ತಂದೆಯ ನಿವೃತ್ತಿ ಕಾರ್ಯಕ್ರಮದಲ್ಲಿ ಸೂರ್ಯಕುಮಾರ್ ಕುಟುಂಬದ ಸದಸ್ಯರು ಎಲ್ಲರೂ ಭಾಗಿಯಾಗಿದ್ದರು.
Suryakumar Yadav Giving beautiful speech on his father retirement day.🩵 pic.twitter.com/hl345SPMZq
— 𝐑𝐮𝐬𝐡𝐢𝐢𝐢⁴⁵ (@rushiii_12)
Suryakumar Yadav Giving beautiful speech on his father retirement day.🩵 pic.twitter.com/hl345SPMZq
— 𝐑𝐮𝐬𝐡𝐢𝐢𝐢⁴⁵ (@rushiii_12) May 29, 2025
">May 29, 2025
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ