/newsfirstlive-kannada/media/post_attachments/wp-content/uploads/2025/05/Surya-kumar-yadav-MI.jpg)
IPL ಸೀಸನ್ 18ರ ಪ್ಲೇ ಆಫ್ ರೇಸ್‌ನ ನಿರ್ಣಾಯಕ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಆಟಗಾರರು ಅಬ್ಬರಿಸಿದ್ದಾರೆ. ಸೂರ್ಯ ಕುಮಾರ್ ಯಾದವ್ ಅಮೋಘ ಬ್ಯಾಟಿಂಗ್ ಮುಂಬೈ ತಂಡಕ್ಕೆ ಹೊಸ ಭರವಸೆ ತಂದಿದೆ. ಕೊನೆಯ 2 ಓವರ್‌ನಲ್ಲಿ ಬೌಡರಿ, ಸಿಕ್ಸರ್‌ಗಳ ಸುರಿಮಳೆಗೈದಿದ್ದು ಡೆಲ್ಲಿ ಕ್ಯಾಪಿಟಲ್ಸ್‌ಗೆ ಉತ್ತಮ ಟಾರ್ಗೆಟ್ ನೀಡಲಾಗಿದೆ.
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್‌ಗೆ ಇಳಿದ ಮುಂಬೈ ಇಂಡಿಯನ್ಸ್ ಆರಂಭದಲ್ಲಿ ರನ್ ಕಲೆ ಹಾಕಲು ಸಾಧ್ಯವಾಗಲಿಲ್ಲ. ಕೇವಲ 5 ರನ್‌ಗೆ ರೋಹಿತ್ ಶರ್ಮಾ ಔಟ್ ಆದರು. ನಾಯಕ ಹಾರ್ದಿಕ್ ಪಾಂಡ್ಯ ಕೂಡ 3 ರನ್‌ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್‌ಗೆ ಹೊರಟರು.
ಕಡಿಮೆ ರನ್ ಗಳಿಸಿದ್ದ ಮುಂಬೈ ಇಂಡಿಯನ್ಸ್‌ಗೆ ಸ್ಫೋಟಕ ಆಟಗಾರ ಸೂರ್ಯ ಕುಮಾರ್ ಯಾದವ್ ಅವರೇ ಮತ್ತೆ ಆಸರೆಯಾದರು. 43 ಬಾಲ್ ಎದುರಿಸಿದ ಸೂರ್ಯ ಕುಮಾರ್ ಯಾದವ್ ಅವರು 7 ಬೌಂಡರಿ, 4 ಭರ್ಜರಿ ಸಿಕ್ಸರ್‌ಗಳನ್ನ ಬಾರಿಸಿದರು.
18ನೇ ಓವರ್‌ನಲ್ಲಿ ಸೂರ್ಯಕುಮಾರ್ ಯಾದವ್ ಅವರು ಡೆಲ್ಲಿ ಬೌಲರ್‌ಗಳನ್ನ ಬೆಂಡೆತ್ತಿದರೆ, ಸೂರ್ಯಕುಮಾರ್‌ಗೆ ನಮನ್ ಧೀರ್ ಅವರು ಸಾಥ್ ಕೊಟ್ಟರು. ಸೂರ್ಯ ಕುಮಾರ್ ಹಾಗೂ ನಮನ್ ಧೀರ್ ಅವರು 21 ಬಾಲ್‌ಗೆ 57 ರನ್‌ಗಳ ಜೊತೆಯಾಟ ಮುಂಬೈ ಇಂಡಿಯನ್ಸ್‌ಗೆ ನೆರವಾಯಿತು.
ಇದನ್ನೂ ಓದಿ: ಮುಂಬೈನಲ್ಲಿ ಇವತ್ತು ಮಳೆಯಿಂದ ಪಂದ್ಯ ರದ್ದಾದ್ರೆ ಯಾರಿಗೆ ಚಾನ್ಸ್? ಯಾರಿಗೆ ಪ್ಲೇ ಆಫ್ ಅದೃಷ್ಟ?
ಮುಂಬೈ ಇಂಡಿಯನ್ಸ್ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 180 ರನ್‌ಗಳಿಸಿದೆ. ಡೂ ಆರ್ ಡೈ ಪಂದ್ಯದಲ್ಲಿ ಪ್ಲೇ ಆಫ್‌ಗೆ ಹತ್ತಿರವಾಗಬೇಕಾದ್ರೆ ಡೆಲ್ಲಿ ಕ್ಯಾಪಿಟಲ್ಸ್ 181 ರನ್‌ಗಳ ಟಾರ್ಗೆಟ್ ರೀಚ್ ಆಗಬೇಕಿದೆ. ಮುಂಬೈ ಇಂಡಿಯನ್ಸ್ ಪರ ಬೌಲಿಂಗ್ ಅಟ್ಯಾಕ್ ಹಾಗೂ ಕೆ.ಎಲ್ ರಾಹುಲ್ ಅವರ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನದ ಮೇಲೆ ಪಂದ್ಯದ ಫಲಿತಾಂಶ ನಿಂತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ