ನಟ ಸುಶಾಂತ್ ಸಿಂಗ್ ಕೇಸ್.. CBI ವರದಿ ಬಗ್ಗೆ ರಿಹಾ ಚಕ್ರವರ್ತಿಗೆ ಕೋರ್ಟ್ ನೋಟಿಸ್, ಮುಂದೇನಾಗುತ್ತೆ?

author-image
Bheemappa
Updated On
ನಟ ಸುಶಾಂತ್ ಸಿಂಗ್ ಕೇಸ್.. CBI ವರದಿ ಬಗ್ಗೆ ರಿಹಾ ಚಕ್ರವರ್ತಿಗೆ ಕೋರ್ಟ್ ನೋಟಿಸ್, ಮುಂದೇನಾಗುತ್ತೆ?
Advertisment
  • ಗರ್ಲ್​​​ಫ್ರೆಂಡ್​ಗೆ ನೋಟಿಸ್ ಜಾರಿ ಮಾಡಿರುವ ನ್ಯಾಯಾಲಯ​
  • ಸಂಪೂರ್ಣ ತನಿಖೆ ಮಾಡಿರುವ ಸಿಬಿಐ ಹೇಳಿರುವುದೇನು?
  • ಸುಶಾಂತ್ ಸಿಂಗ್ ಕೇಸ್​​ನಲ್ಲಿ ತಪ್ಪಿತಸ್ಥರು ಯಾರು ಯಾರು?

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಕೇಸ್​ನಲ್ಲಿ ಗರ್ಲ್ ಫ್ರೆಂಡ್ ರಿಹಾ ಚಕ್ರವರ್ತಿಗೆ ಕೋರ್ಟ್ ನೋಟಿಸ್. ತನಿಖೆ ನಡೆಸಿದ್ದ ಸಿಬಿಐ ಪ್ರಕರಣದ ಬಗ್ಗೆ ಹೇಳಿದ್ದೇನು?

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಕೇಸ್​​ನಲ್ಲಿ ಮುಂಬೈನ ಮ್ಯಾಜಿಸ್ಟ್ರೇಟ್ ಕೋರ್ಟ್, ನಟಿ ರಿಹಾ ಚಕ್ರವರ್ತಿಗೆ ನೋಟಿಸ್ ನೀಡಿದೆ. ಸಿಬಿಐ ಸಲ್ಲಿಸಿರುವ ಸುಶಾಂತ್ ಸಿಂಗ್ ಪ್ರಕರಣದ ಮುಕ್ತಾಯದ ವರದಿಯ ಬಗ್ಗೆ ಪ್ರತಿಕ್ರಿಯೆ ಸಲ್ಲಿಸುವಂತೆ ರಿಹಾ ಚಕ್ರವರ್ತಿಗೆ ಮ್ಯಾಜಿಸ್ಟ್ರೇಟ್ ಕೋರ್ಟ್ ಸೂಚಿಸಿದೆ. 2025ರ ಮಾರ್ಚ್ ತಿಂಗಳಲ್ಲೇ ಸಿಬಿಐ, ಕೇಸ್ ಮುಕ್ತಾಯದ ವರದಿಯನ್ನು ಕೋರ್ಟ್​ಗೆ ಸಲ್ಲಿಸಿತ್ತು.

ಮ್ಯಾಜಿಸ್ಟ್ರೇಟ್ ಆರ್‌.ಡಿ.ಚವ್ಹಾಣ್, ಒರಿಜಿನಲ್ ಮಾಹಿತಿದಾರರು, ಸಂತ್ರಸ್ತರು, ತೊಂದರೆಗೊಳಗಾದ ವ್ಯಕ್ತಿಗೆ ನೋಟಿಸ್ ಜಾರಿ ಮಾಡಲಾಗುತ್ತಿದೆ ಎಂದು ನೋಟೀಸ್ ಜಾರಿ ಮಾಡಿದ್ದರು. ಬಳಿಕ ರಿಹಾ ಚಕ್ರವರ್ತಿಗೆ ನೋಟೀಸ್ ತಲುಪಿರುವುದು ಖಚಿತ ಆಗುವವರೆಗೂ ವಿಚಾರಣೆ ಮುಂದೂಡುವುದಾಗಿ ಕೋರ್ಟ್ ಹೇಳಿದೆ. ಆಗಸ್ಟ್ 12ರೊಳಗೆ ನೋಟಿಸ್​ಗೆ ಉತ್ತರಿಸುವಂತೆ ರಿಹಾ ಚಕ್ರವರ್ತಿಗೆ ಮ್ಯಾಜಿಸ್ಟ್ರೇಟ್ ಕೋರ್ಟ್ ಸೂಚಿಸಿದೆ.

publive-image

ಮರುತನಿಖೆಗೆ ಅವಕಾಶ ಇದೆ

ತನಿಖಾ ಸಂಸ್ಥೆಯಾದ ಸಿಬಿಐ ಸಲ್ಲಿಸಿರುವ ಸುಶಾಂತ್ ಸಿಂಗ್ ರಜಪೂತ್ ಸಾವಿನ ಕೇಸ್ ಮುಕ್ತಾಯದ ವರದಿಗೆ ಏನಾದರೂ ಆಕ್ಷೇಪಣೆ ಇದ್ದಲ್ಲಿ, ಈ ವೇಳೆ ರಿಹಾ ಚಕ್ರವರ್ತಿಗೆ ಕೋರ್ಟ್​ಗೆ ಸಲ್ಲಿಸಬಹುದು. ಸುಶಾಂತ್ ಸಿಂಗ್ ರಜಪೂತ್ ಸಾವಿನ ತನಿಖೆ ಸರಿಯಾಗಿ ನಡೆದಿಲ್ಲ ಎಂದು ಮರುತನಿಖೆಯನ್ನು ಸಹ ಕೋರಲು ಅವಕಾಶ ಇದೆ. ರಿಹಾ ಚಕ್ರವರ್ತಿ ಸಿಬಿಐ ನಡೆಸಿರುವ ತನಿಖೆಯನ್ನು ಒಪ್ಪಿಕೊಳ್ಳಲೂಬಹುದು. ಸಿಬಿಐ ತನ್ನ ಕೇಸ್ ಮುಕ್ತಾಯದ ವರದಿಯಲ್ಲಿ ನಟಿ ರಿಹಾ ಚಕ್ರವರ್ತಿಗೆ ಕ್ಲೀನ್ ಚಿಟ್ ನೀಡಿದೆ. ಸುಶಾಂತ್ ಸಿಂಗ್ ರಜಪೂತ್ ಸಾವಿನಲ್ಲಿ ಸುಶಾಂತ್ ಗರ್ಲ್ ಫ್ರೆಂಡ್ ಆಗಿದ್ದ ನಟಿ ರಿಹಾ ಚಕ್ರವರ್ತಿಯ ಯಾವುದೇ ಪಾತ್ರವಿಲ್ಲ ಎಂದು ಸಿಬಿಐ ಹೇಳಿದೆ. ಹೀಗಾಗಿ ದೇಶದ ಜನರು, ರಿಹಾ ಚಕ್ರವರ್ತಿಗೆ ಕ್ಷಮೆ ಕೇಳಬೇಕೆಂದು ಮಾರ್ಚ್​​ನಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಕ್ಯಾಂಪೇನ್ ನಡೆದಿತ್ತು.

ಸುಶಾಂತ್ ಸಿಂಗ್ ರಜಪೂತ್ ಸಾವಿನ ಕೇಸ್​ನಲ್ಲಿ ರಿಹಾ ಚಕ್ರವರ್ತಿಯೇ ಒರಿಜಿನಲ್ ದೂರುದಾರೆ. ಸುಶಾಂತ್ ಸಿಂಗ್ ಸೋದರಿಯರಾದ ಮೀತೂ ಸಿಂಗ್ ಮತ್ತು ಪ್ರಿಯಾಂಕಾ ಸಿಂಗ್ ವಿರುದ್ಧ ನಟಿ ರಿಹಾ ಚಕ್ರವರ್ತಿ ದೂರು ನೀಡಿದ್ದರು. ಜೊತೆಗೆ ವೈದ್ಯ ಡಾಕ್ಟರ್ ತರುಣ್ ನಾಥೂ ರಾಮ್ ವಿರುದ್ಧ ಸಹ ದೂರು ನೀಡಿದ್ದರು. ಸರಿಯಾಗಿ ವೈದ್ಯರ ಸಲಹೆ ಪಡೆಯದೇ, ಮಾತ್ರೆಗಳನ್ನ ಸೋದರಿಯರೇ ತಂದು ಸುಶಾಂತ್ ಸಿಂಗ್ ರಜಪೂತ್​ಗೆ ನೀಡಿದ್ದರು ಎಂದು ರಿಹಾ ಚಕ್ರವರ್ತಿ ಪೊಲೀಸರಿಗೆ ಸಲ್ಲಿಸಿದ್ದ ದೂರಿನಲ್ಲಿ ಹೇಳಿದ್ದರು.

ಮಾತ್ರೆಗಳನ್ನು ತೆಗೆದುಕೊಳ್ಳುವುದು ನಿಲ್ಲಿಸುತ್ತಿದ್ದರು

ಸುಶಾಂತ್ ಸಿಂಗ್ ಗರ್ಲ್ ಫ್ರೆಂಡ್ ಆಗಿದ್ದ ರಿಹಾ ಚಕ್ರವರ್ತಿ ಹೇಳುವ ಪ್ರಕಾರ, ನಟ ಸುಶಾಂತ್ ಸಿಂಗ್ ರಜಪೂತ್, ಬೈಪೋಲಾರ್ ಡಿಸಾರ್ಡರ್​ನಿಂದ ಬಳಲುತ್ತಿದ್ದರು. ಸುಶಾಂತ್ ಸಿಂಗ್ ರಜಪೂತ್‌ಗೆ ನಿರಂತರವಾಗಿ ಟ್ರೀಟ್ ಮೆಂಟ್ ಕೊಡಿಸಿರಲಿಲ್ಲ. ಆಗ್ಗಾಗ್ಗೆ ಮಾತ್ರೆಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸುತ್ತಿದ್ದರು. ಸುಶಾಂತ್ ಸಿಂಗ್​​ಗೆ ಮಾನಸಿಕ ಸಮಸ್ಯೆ ಇದ್ದರೂ, ಆತನ ಸೋದರಿಯರು, ಮೊಬೈಲ್ ಮೇಸೇಜ್ ಮೂಲಕವೇ ಯಾವ ಔಷಧಿ ತೆಗೆದುಕೊಳ್ಳಬೇಕೆಂದು ಹೇಳುತ್ತಿದ್ದರು. ಮಾತ್ರೆಗಳನ್ನು ತೆಗೆದುಕೊಳ್ಳಲು ಬಳಸಿದ್ದ ಪ್ರಿಸ್ಕ್ರಿಪ್ಷನ್ ಕೂಡ ಪೋರ್ಜರಿಯಾಗಿತ್ತು ಎಂದು ನಟಿ ರಿಹಾ ಚಕ್ರವರ್ತಿ ಮುಂಬೈನ ಪೊಲೀಸರಿಗೆ ಪ್ರಾರಂಭದಲ್ಲಿ ದೂರು ನೀಡಿದ್ದರು.

ಇದನ್ನೂ ಓದಿ:ಲಂಡನ್​ಗೆ ಟ್ರೈನ್​ನಲ್ಲಿ ಪ್ರಯಾಣಿಸಿದ ಶುಭ್​​ಮನ್ ಗಿಲ್ ಪಡೆ.. ರಿಷಭ್ ಪಂತ್​ ಕಾಲಿಗೆ ಪ್ಲಾಸ್ಟರ್!

publive-image

ಈ ದೂರಿನ ಆಧಾರದ ಮೇಲೆ ಐಪಿಸಿ ಸೆಕ್ಷನ್ ಹಾಗೂ ಎನ್‌ಡಿಪಿಎಸ್ ಕಾಯಿದೆಯಡಿ ಕೇಸ್ ದಾಖಲಿಸಲಾಗಿತ್ತು. ಬಳಿಕ ಕೇಸ್ ತನಿಖೆಯನ್ನು ಸುಪ್ರೀಂಕೋರ್ಟ್​ ಸಿಬಿಐಗೆ ವಹಿಸಿತ್ತು. ಬಳಿಕ ಕೇಸ್ ತನಿಖೆಯನ್ನು ಕೈಗೆತ್ತಿಕೊಂಡ ತನಿಖೆ ನಡೆಸಿದ್ದ ಸಿಬಿಐ, ಸುಶಾಂತ್ ಸಿಂಗ್ ರಜಪೂತ್ ಸೋದರಿಯರಿಗೂ ಕ್ಲೀನ್ ಚಿಟ್ ನೀಡಿದೆ. ತನಿಖೆಯಲ್ಲಿ ಯಾರ ವಿರುದ್ಧವೂ ಯಾವುದೇ ಕ್ರಿಮಿನಲ್ ಆರೋಪ ಸಾಬೀತಾಗಿಲ್ಲ ಎಂದು ಕೇಸ್ ತನಿಖೆಯನ್ನು ಮುಕ್ತಾಯಗೊಳಿಸುವ ವರದಿಯನ್ನು ಮ್ಯಾಜಿಸ್ಟ್ರೇಟ್ ಕೋರ್ಟ್​ಗೆ ಸಲ್ಲಿಸಿದೆ. ಈಗ ರಿಹಾ ಚಕ್ರವರ್ತಿ, ಕೋರ್ಟ್​ನ ನೋಟಿಸ್​ಗೆ ಉತ್ತರಿಸಿದ ಬಳಿಕ ಕೋರ್ಟ್​​ನಲ್ಲಿ ಮತ್ತೆ ವಿಚಾರಣೆ ನಡೆಯಲಿದೆ.

ಸುಶಾಂತ್ ಸಿಂಗ್ ರಜಪೂತ್ ಪ್ರಕರಣದ ಹಿನ್ನೆಲೆ

ಬಾಲಿವುಡ್ ನಲ್ಲಿ ಹೆಸರು ಗಳಿಸಿದ್ದ ನಟ ಸುಶಾಂತ್ ಸಿಂಗ್ ರಜಪೂತ್, 2020ರ ಜೂನ್ 14 ರಂದು ಮುಂಬೈನ ಬಾಂದ್ರಾ ನಿವಾಸದಲ್ಲಿ ಸಾವನ್ನಪ್ಪಿದ್ದರು. ಮಾಧ್ಯಮಗಳಲ್ಲಿ ಸಾವಿನ ಬಗ್ಗೆ ಅನುಮಾನಗಳು ವ್ಯಕ್ತವಾಗಿದ್ದರಿಂದ ಸುಪ್ರೀಂಕೋರ್ಟ್ ಕೇಸ್ ತನಿಖೆಯನ್ನು ಮುಂಬೈ ಪೊಲೀಸರಿಂದ ಸಿಬಿಐಗೆ ವಹಿಸಿ ಆದೇಶ ನೀಡಿತ್ತು. ನಟ ಸುಶಾಂತ್ ತಂದೆ ಬಿಹಾರದಲ್ಲಿ ಪ್ರತೇಕ ಎಫ್ಐಆರ್ ದಾಖಲಿಸಿದ್ದರು. ಸುಶಾಂತ್ ಸಿಂಗ್ ಗರ್ಲ್ ಫ್ರೆಂಡ್ ಆಗಿದ್ದ ನಟಿ ರಿಹಾ ಚಕ್ರವರ್ತಿ ಕುಟುಂಬ ಸುಶಾಂತ್ ರಿಂದ ಹಣ ಪಡೆದು ಆರ್ಥಿಕವಾಗಿ ಶೋಷಣೆ ಮಾಡಿದೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದೆ ಎಂದು ಸುಶಾಂತ್ ತಂದೆ ದೂರು ನೀಡಿದ್ದರು. ಹೀಗಾಗಿ ಒಂದೇ ಕೇಸ್ ಬಗ್ಗೆ ಎರೆಡೆರಡು ರಾಜ್ಯಗಳಲ್ಲಿ ತನಿಖೆ ನಡೆಯುವುದು ಸೂಕ್ತವಲ್ಲ ಎಂದು ಸುಪ್ರೀಂಕೋರ್ಟ್ ಕೇಸ್ ತನಿಖೆಯನ್ನು ಸಿಬಿಐಗೆ ವಹಿಸಿತ್ತು. ಈಗಾಗಲೇ ಸಿಬಿಐ, ಸುಶಾಂತ್ ಸಿಂಗ್ ಸಾವಿಗೆ ಯಾರನ್ನೂ ಹೊಣೆ ಮಾಡಿಲ್ಲ. ಕೇಸ್ ಅನ್ನು ಮುಕ್ತಾಯಗೊಳಿಸಿ ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ವರದಿ ಸಲ್ಲಿಸಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment