ವೇದಿಕೆ ಮೇಲೆ ತಲೆ ಸುತ್ತಿ ಬಿದ್ದಿದ್ದೆ ಆದ್ರೆ.. ಮಜಾಭಾರತ ಖ್ಯಾತಿಯ ಸುಶ್ಮಿತಾ ಜಗಪ್ಪ ಹೇಳಿದ್ದೇನು?

author-image
Veena Gangani
Updated On
ವೇದಿಕೆ ಮೇಲೆ ತಲೆ ಸುತ್ತಿ ಬಿದ್ದಿದ್ದೆ ಆದ್ರೆ.. ಮಜಾಭಾರತ ಖ್ಯಾತಿಯ ಸುಶ್ಮಿತಾ ಜಗಪ್ಪ ಹೇಳಿದ್ದೇನು?
Advertisment
  • ಮಜಾ ಭಾರತ, ಗಿಚ್ಚಿ ಗಿಲಿಗಿಲಿ ಮೂಲಕ ಫೇಮಸ್​ ಆಗಿದ್ದ ನಟಿ
  • ತಮ್ಮ ಜೀವನದಲ್ಲಿ ಆದ ಘಟನೆಗಳನ್ನು ನೆನಪಿಸಿಕೊಂಡ ಸುಶ್ಮಿತಾ   
  • ಅಂದು ವೇದಿಕೆ ಮೇಲೆ ತಲೆ ಸುತ್ತಿ ಬಿದ್ದಿದ್ದು ಹೇಗೆ ಅಂತ ಹೇಳಿದ ನಟಿ

ಕಿರುತೆರೆ ಜನಪ್ರಿಯ ಶೋ ಮಜಾ ಭಾರತ ಹಾಗೂ ಗಿಚ್ಚಿ ಗಿಲಿಗಿಲಿ ಖ್ಯಾತಿಯ ನಟಿ ಸುಶ್ಮಿತಾ ಮತ್ತು ಜಗಪ್ಪ ಜೋಡಿ ಯಾರಿಗೇ ತಾನೇ ಗೊತ್ತಿಲ್ಲ ಹೇಳಿ. ವೀಕೆಂಡ್ ಬಂತು ಅಂದ್ರೆ ಸಾಕು ವೀಕ್ಷಕರನ್ನು ನಕ್ಕು ನಗಿರೋ ಹಾಸ್ಯ ಕಲಾವಿದರಲ್ಲಿ ಸುಶ್ಮಿತಾ ಹಾಗೂ ಜಗಪ್ಪ ಜೋಡಿ ಕೂಡ ಒಂದು.

ಇದನ್ನೂ ಓದಿ:ಶತಕ ಬಾರಿಸ್ತಿದ್ದಂತೆ ಪಲ್ಟಿ ಹೊಡಿ ಎಂದ ಗವಾಸ್ಕರ್​.. ಪಂತ್​​ ಪ್ರತಿಕ್ರಿಯೆ ಹೇಗಿತ್ತು? ಹೃದಯಗೆದ್ದ ವಿಡಿಯೋ..!

ಮಜಾ ಭಾರತ, ಗಿಚ್ಚಿ ಗಿಲಿಗಿಲಿ, ಕನ್ನಡ ಸೀರಿಯಲ್​ ಮೂಲಕ ಕನ್ನಡಿಗರ ಮನ ಗೆದ್ದವರು ಸುಶ್ಮಿತಾ ಅವರು ಶೋ ವೇಳೆ ನಡೆದ ಒಂದು ಘಟನೆ ಬಗ್ಗೆ ವಿವರಿಸಿದ್ದಾರೆ. ಇತ್ತೀಚೆಗೆ ʻರ್ಯಾಪಿಡ್‌ ರಶ್ಮಿʼ ಯೂಟ್ಯೂಬ್‌ ಚಾನೆಲ್‌ಗೆ ಸಂದರ್ಶನ ನೀಡಿದ ನಟಿ ಸುಶ್ಮಿತಾ ವೇದಿಕೆ ಮೇಲೆ ತಲೆ ಸುತ್ತಿ ಬಿದ್ದಿದ್ದೆ ಅಂತ ಹೇಳಿಕೊಂಡಿದ್ದಾರೆ.

ಹೌದು, ಈ ಬಗ್ಗೆ ಮಾತಾಡಿದ ಅವರು, ಒಂದು ಸಲ ಕಾರ್ಯಕ್ರಮಕ್ಕೆ ಶರಣ್​ ಸರ್​ ಬಂದಿದ್ದರು. ಆಗ ನಾನು ವೇದಿಕೆ ಮೇಲೆ ತಲೆ ಸುತ್ತಿ ಬಿದ್ದಿದ್ದೆ. ನಾನೇ ನಾಟಕ ಮಾಡಿದ್ದೇ. ಅದನ್ನು ನಾನು ಮರುದಿನ ಒಪ್ಪಿಕೊಂಡೆ. ನನಗೆ ಅವಾಗ ಹೇಳಿದ್ದರು ನೀನು ಏನಾದ್ರೂ ಡೈಲಾಗ್ ಮರೆತು ಹೋದರೆ ಶೋನಲ್ಲಿ ಇರೋದಿಲ್ಲ ಅಂದಿದ್ರು. ಇದನ್ನು ನನ್ನ ಜೊತೆಗೆ ಓಡಾಡಿಕೊಂಡಿದ್ದವರೇ ಹೇಳಿದ್ದರು. ಡೈಲಾಗ್ ಸರಿಯಾಗಿ ಹೇಳಲಿ ಅಂತ ಅವರು ಹಾಗೇ ಹೇಳಿದ್ರೂ. ಹೀಗಾಗಿ ನಾನ್ನ ಎಲ್ಲಿ ಶೋಯಿಂದ ಆಚೆ ಹಾಕುತ್ತಾರಾ ಅಂತ ಹಾಗೇ ಮಾಡಿಬಿಟ್ಟೆ. ನನಗೆ ಡೈಲಾಗ್ ನೆನಪು ಬರೋವರೆಗೂ ನಾನು ಎದ್ದೇ ಇಲ್ಲ. ಇದಾದ ಬಳಿಕ ಡೈಲಾಗ್ ನೆನಪಿಗೆ ಬಂದ ಕೂಡಲೇ ಎದ್ದು ಟೆಕ್​ ತೆಗೆದುಕೊಂಡೆ. ಇದಕ್ಕೆ ನಾನು ಶರಣ್​ ಸರ್​ಗೆ ಕ್ಷಮೆ ಕೇಳುತ್ತೇನೆ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment