/newsfirstlive-kannada/media/post_attachments/wp-content/uploads/2024/08/VINESH-PHOGAT-9.jpg)
ಪ್ಯಾರಿಸ್: ವಿನೇಶ್ ಪೋಗಟ್​ಗೆ ಬೆಳ್ಳಿ ಪದಕದ ವಿಚಾರಣೆಯಲ್ಲಿ ಈಗಲೂ ಕೂಡ ಕುತೂಹಲವೊಂದನ್ನು ಉಳಿಸಿಯೇ ವಿಚಾರಣೆ ಮುಗಿಸಿದೆ ಕೋರ್ಟ್​ ಆಫ್​ ಆರ್ಬಿಟ್ರೇಷನ್ ಫಾರ್ ಸ್ಪೋರ್ಟ್ಸ್. ತಮಗೆ ಬೆಳ್ಳಿ ಪದಕ ನೀಡಬೇಕು ಎಂದು ಸಿಎಎಸ್​ಗೆ ವಿನೇಶ್ ಪೋಗಟ್​ ಅರ್ಜಿ ಸಲ್ಲಿಸಿದ್ದರು, ಶನಿವಾರ ಈ ಬಗ್ಗೆ ಅಂತಿಮ ತೀರ್ಪು ಬರುವ ನಿರೀಕ್ಷೆಯಿತ್ತು. ಆದ್ರೆ ಸಿಎಎಸ್ ಆ ಪೋಗಟ್​ಗೆ ರಜತ ಪದಕ ನೀಡುವ ವಿಚಾರದ ಗುಟ್ಟನ್ನು ಹಾಗೆಯೇ ಮುಂದುವರಿಸಿದೆ.
/newsfirstlive-kannada/media/post_attachments/wp-content/uploads/2024/08/CAS.jpg)
ಶನಿವಾರ ಕೋರ್ಟ್​ನ ತೀರ್ಪು ಬರಲಿದೆ ಎಂದು ಕಾದು ಕುಳಿತಿದ್ದ ಕ್ರೀಡಾ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ 50ಕೆಜಿ ಕುಸ್ತಿ ವಿಭಾಗದಲ್ಲಿ ಅನರ್ಹಗೊಂಡಿದ್ದ ವಿನಶ್ ಪೋಗಟ್​ ಅವರ ಮನವಿಯ ವಿಚಾರಣೆಯನ್ನ ರವಿವಾರ ಅಂದ್ರೆ ಆಗಸ್ಟ್ 11ಕ್ಕೆ ಮುಂದೂಡಿದೆ. ಮೂಲಗಳ ಮಾಹಿತಿ ಪ್ರಕಾರ ಭಾನುವಾರ ಸಂಜೆ 6 ಗಂಟೆಗೆ ತೀರ್ಪು ಪ್ರಕಟಿಸಲಿದೆ. ಡಾ ಅನ್ನಾಬೆಲ್ಲೆ ಬೆನೆಟ್ ವರ್ಸಸ್ ವಿಶ್ವ ಕುಸ್ತಿ ಒಕ್ಕೂಟ ಮತ್ತು ಅಂತಾರಾಷ್ಟ್ರೀಯ ಹಾಕಿ ಮಂಡಳಿ ತಮ್ಮ ನಿರ್ಧಾರವನ್ನು ಪ್ರಕಟಿಸಲಿವೆ ಎಂದು ಭಾರತೀಯ ಒಲಿಂಪಿಕ್ಸ್ ಮಂಡಳಿ ತಿಳಿಸಿದೆ.
ತೀರ್ಪು ಸಾರ್ವಜನಿಕವಾಗಿ ಪ್ರಕಟವಾಗುವುದು ಆಗಸ್ಟ್​ 13ಕ್ಕೆ
ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಮಂಡಳಿ ಮೂಲಗಳು ಹೇಳುವ ಪ್ರಕಾರ, ಭಾನುವಾರದಂದು ತೀರ್ಪು ಬಂದರೂ ಕೂಡ ಅದನ್ನು ಸಾರ್ವಜನಿಕವಾಗಿ ಆಗಸ್ಟ್ 13 ರಂದು ಬಿಡುಗಡೆ ಮಾಡಲಾಗುತ್ತದಂತೆ. ಅಂದ್ರೆ ಒಲಿಂಪಿಕ್ಸ್ ಕ್ರೀಡಾಕೂಟದ ಸಮಾರೋಪ ಸಮಾರಂಭ ನಡೆದ ಎರಡು ದಿನಗಳ ಬಳಿಕ ಸಿಎಎಸ್​ನ ಅಂತಿಮ ನಿರ್ಧಾರ ಸಾರ್ವಜನಿಕವಾಗಿ ಪ್ರಕಟಗೊಳ್ಳಲಿದೆ.
/newsfirstlive-kannada/media/post_attachments/wp-content/uploads/2024/08/HIGUCHI.jpg)
ಜಪಾನ್ ಕುಸ್ತಿಪಟುವಿಂದ ಪೋಗಟ್​ಗೆ ಬೆಂಬಲ
ಜಪಾನ್​ನ 57ಕೆಜಿ ಪುರುಷ ಕುಸ್ತಿ ವಿಭಾಗದ ರಿಯ್ ಹುಗುಚಿ ವಿನೇಶ್ ಪೋಗಟ್​ ಬೆಂಬಲಕ್ಕೆ ನಿಂತಿದ್ದಾರೆ. ಕಳೆದ ಬಾರಿ ಟೋಕಿಯೋದಲ್ಲಿ ನಡೆದ ಒಲಿಂಪಿಕ್ಸ್​ನಲ್ಲಿ ಕೇವಲ ಐವತ್ತು ಗ್ರಾಮ್​ ಹೆಚ್ಚು ತೂಗಿದ್ದಕ್ಕೆ ಹುಗುಚಿ ತನ್ನದೇ ನೆಲದಲ್ಲಿ ಕುಸ್ತಿ ಆಡುವ ಅವಕಾಶವನ್ನು ಕಳೆದುಕೊಂಡಿದ್ದರು. ಹೀಗಾಗಿ ಅವರು ಈಗ ಪೋಗಟ್ ಬೆಂಬಲಕ್ಕೆ ನಿಂತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us