newsfirstkannada.com

ಗಂಭೀರ್ ಮೇಲೆ ಹಳೇ ದ್ವೇಷ ಸಾಧಿಸಿದ ಅನುಮಾನ.. 12 ವರ್ಷಗಳ ಹಿಂದಿನ ನಡೆಗೆ ಇಂದು ರಿವೇಂಜ್..!

Share :

Published July 20, 2024 at 9:39am

    ಗೌತಮ್ ಗಂಭೀರ್​ ಆ​ ದ್ವೇಷಕ್ಕೆ 12 ವರುಷ..?

    ಪಾಂಡ್ಯಗೆ ಪಂಚ್.. ಡೆಲ್ಲಿಯ ಪಂತ್​ಗೆ ಡಿಚ್ಚಿ ಕೊಟ್ಟಿದ್ಯಾಕೆ?

    ನಾಲ್ವರನ್ನ ಬಿಗ್ ಟಾರ್ಗೆಟ್ ಮಾಡಿದ ಗೌತಮ್ ಗಂಭೀರ್

ಎಲ್ಲರನ್ನೂ ಸಮಾನವಾಗಿ ಕಂಡು, ಮೇಲು ಕೀಳು ಎಂಬ ತಾರತಮ್ಯ ಹೊಗಲಾಡಿಸಿ, ಸಾಮರಸ್ಯವನ್ನ ಸೃಷ್ಟಿಸುವುದೇ ಗುರುವಿನ ಕರ್ತವ್ಯ. ಟೀಮ್ ಇಂಡಿಯಾಗೆ ಗುರುವಾಗಿ ಎಂಟ್ರಿ ಕೊಟ್ಟಿರುವ ಗಂಭೀರ್​, ಆ ಮೂಲ ತತ್ವವನ್ನೇ ಸೈಡ್​ಲೈನ್​ ಮಾಡಿದಂತಿದೆ. ಲಂಕಾ ಟೂರ್​​​ಗೆ ಮಾಡಿರುವ ಟೀಮ್​ ಸೆಲೆಕ್ಷನ್​ ಈ ಡಿಬೆಟ್​ಗೆ ಕಾರಣವಾಗಿದೆ. ಕೆಲ ಆಟಗಾರರ ವಿಚಾರದಲ್ಲಿ ತೆಗೆದುಕೊಂಡ ನಿರ್ಧಾರಗಳು ಗಂಭೀರ್​ ಹಳೆ ದ್ವೇಷ ಸಾಧಿಸಿದ್ರಾ ಎಂಬ ಅನುಮಾನ ಮೂಡಿಸಿದೆ.

ಟೀಮ್ ಇಂಡಿಯಾದಲ್ಲಿ ಹೆಡ್ ಕೋಚ್ ಗೌತಮ್ ಗಂಭೀರ್ ಪರ್ವ ಶುರುವಾಗಿದೆ. ಶ್ರೀಲಂಕಾ ಪ್ರವಾಸಕ್ಕೆ ಟೀಮ್ ಇಂಡಿಯಾವನ್ನು ಪ್ರಕಟವಾಗೋದ್ರೊಂದಿಗೆ ಗಂಭೀರ್​ ಕಾರ್ಯ ಆರಂಭವಾಗಿದೆ. ಟೀಮ್​ ಸೆಲೆಕ್ಷನ್​ ವಿಚಾರದಲ್ಲಿ ಸೆಲೆಕ್ಷನ್​ ಕಮಿಟಿಗಿಂತ ಗಂಭೀರ್​ ಮಹತ್ವದ ಪಾತ್ರ ನಿರ್ವಹಿಸಿರೋದು ಮೇಲ್ನೋಟಕ್ಕೆ ತಿಳಿದುಬರ್ತಿದೆ. ಕೆಲ ಆಟಗಾರರ ವಿಚಾರದಲ್ಲಿ ತೆಗೆದುಕೊಂಡ ನಿರ್ಧಾರಗಳು ಕಾಂಟ್ರವರ್ಸಿ ಹುಟ್ಟಿ ಹಾಕಿದೆ. ಧೋನಿ ಆಪ್ತರ ಮೇಲೆ ರಿವೇಂಜ್ ತೆಗೆದುಕೊಂಡ್ರಾ ಎಂಬ ಚರ್ಚೆ ನಡೀತಿದೆ.

ಇದನ್ನೂ ಓದಿ:ರಾಜ್ಯದಲ್ಲಿ ಇನ್ನೂ ಎಷ್ಟು ದಿನ ಭರ್ಜರಿ ಮಳೆ.. ಬೆಂಗಳೂರಿಗೆ ಬಿಸಿಲು ಬರೋದು ಯಾವಾಗ ಗೊತ್ತಾ..?

ಭರ್ಜರಿ ಫಾರ್ಮ್​ನಲ್ಲಿದ್ದ ಧೋನಿ ಶಿಷ್ಯ ಡ್ರಾಪ್​..!​
ಋತುರಾಜ್ ಗಾಯಕ್ವಾಡ್, ಟೀಮ್ ಇಂಡಿಯಾದ ಫ್ಯೂಚರ್​​​​​​​ ಪ್ಲೇಯರ್. ರೆಡ್ ಹಾಟ್​ ಫಾರ್ಮ್​ನಲ್ಲಿದ್ದಾರೆ. ಕಳೆದ ಜಿಂಬಾಬ್ವೆ ಟೂರ್​ನಲ್ಲೂ ಅಬ್ಬರಿಸಿದ್ದಾರೆ. ಸದ್ಯ ಸಾಲಿಡ್​ ಫಾರ್ಮ್​ನಲ್ಲಿದ್ರೂ ಈ ಋತುರಾಜ್​​ನ ತಂಡದಿಂದ ಕೈ ಬಿಡಲಾಗಿದೆ. ಐಪಿಎಲ್​ನಲ್ಲಿ ಚೆನ್ನೈ ತಂಡದ ನಾಯಕತ್ವ ನಿಭಾಯಿಸುತ್ತಿದ್ದಾರೆ. ಈ ಟ್ಯಾಲೆಂಟೆಡ್ ಹುಡುಗನ ಬೆಳವಣಿಗೆ ಹಿಂದೆ ಧೋನಿ ಪಾತ್ರ ಹಾಗೂ ಶ್ರಮ ಅಪಾರವಿದೆ. ಧೋನಿ ಶಿಷ್ಯ ಅನ್ನೋ ಕಾರಣಕ್ಕೆ ಡ್ರಾಪ್​ ಮಾಡಿದ್ರಾ ಎಂಬ ಚರ್ಚೆ ನಡೀತಿದೆ.

ಧೋನಿ ಬೆಳೆಸಿದ ಆಟಗಾರ ರವೀಂದ್ರ ಜಡೇಜಾ
ಟಿ20ಗೆ ಗುಡ್ ಬೈ ಹೇಳಿರುವ ರವೀಂದ್ರ ಜಡೇಜಾ, ಏಕದಿನದಲ್ಲಿ ಮುಂದುವರಿಯೋ ಲೆಕ್ಕಾಚಾರದಲ್ಲಿದ್ದರು. ಜಡೇಜಾ ಫಾರ್ಮ್​ ಕೂಡ ಚನ್ನಾಗೇ ಇತ್ತು. ಗಂಭೀರ್ ಎಂಟ್ರಿ ಬೆನ್ನಲ್ಲೇ ರಾಕ್​ಸ್ಟಾರ್ ಜಡೇಜಾಗೆ ಶಾಕ್ ಎದುರಾಗಿದೆ. ಏಕದಿನ ತಂಡದಿಂದ ಗೇಟ್​ ಪಾಸ್​ ನೀಡಲಾಗಿದೆ.

ಇದನ್ನೂ  ಓದಿ:ಪಾಕ್ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು.. ಕನ್ನಡತಿ ಶ್ರೇಯಂಕಾ ಪಾಟೀಲ್ ಶೈನ್

ಜಡೇಜಾ ಸೂಪರ್​ ಸ್ಟಾರ್​ ಆಗಿ ಬೆಳೆದ ಹಿಂದೆ ಮಾಹಿ ಹೆಜ್ಜೆ ಗುರುತು ಇದೆ. ಧೋನಿಯ ಬಲಗೈ ಬಂಟನಾಗಿ ಗುರುತಿಸಿಕೊಂಡಿರೋ ಜಡೇಜಾ, ಆಫ್​ ದಿ ಫೀಲ್ಡ್​ನಲ್ಲೂ ಮಾಹಿ ಜೊತೆ ಉತ್ತಮ ಭಾಂದವ್ಯ ಹೊಂದಿದ್ದಾರೆ. ಈ ಹಿಂದೆ 2016ರಲ್ಲಿ ಐಪಿಎಲ್​ನಲ್ಲಿ ಧೋನಿ ಬ್ಯಾಟಿಂಗ್ ವೇಳೆ ಗಂಭೀರ್, ಟೆಸ್ಟ್ ಮಾದರಿಯ ಫೀಲ್ಡ್​ ಸೆಟ್ ಮಾಡಿದ್ರು. ಇದು ಟಿ20ಯ ಮಾಸ್ಟರ್​ ಸ್ಟ್ರೋಕ್ ಎಂದೇ ಕೆಕೆಆರ್ ಫೋಸ್ಟ್ ಮಾಡಿತ್ತು. ಇದಕ್ಕೆ ಜಡೇಜಾ ಶೋ ಆಫ್ ಎಂದು ಕಮೆಂಟ್​ ಮಾಡಿದ್ರು. ಆ ಸಿಟ್ಟನ್ನು ಈಗ ತೀರಿಸಿಕೊಂಡ್ರಾ ಎಂಬ ಪ್ರಶ್ನೆ ಎದ್ದಿದೆ.

ಧೋನಿ ಆಪ್ತ ಎಂಬ ಕಾರಣಕ್ಕೆ ಪಾಂಡ್ಯಗೆ ಕೊಟ್ರಾ ಪಂಚ್..?
ಋತುರಾಜ್, ರವೀಂದ್ರ ಜಡೇಜಾನೇ ಅಲ್ಲ. ಹಾರ್ದಿಕ್ ಕೂಡ ಧೋನಿ ಗರಡಿಯಲ್ಲೇ ಪಳಗಿದ ಪ್ರತಿಭೆ. ನೋಡ ನೋಡುತ್ತಿದ್ದಂತೆಯೇ ಸೂಪರ್ ಸ್ಟಾರ್​ ಆಗಿ ಬೆಳದವ. ಕ್ಯಾಪ್ಟನ್ಸಿಯಲ್ಲೂ ಕಮಾಲ್ ಮಾಡಿದ್ದ ಈತ, ಟಿ20 ತಂಡದ ಫ್ಯೂಚರ್​ ಕ್ಯಾಪ್ಟನ್​ ಅನಿಸಿಕೊಂಡಿದ್ರು. ಆದ್ರೀಗ ನಾಯಕತ್ವದ ರೇಸ್​ನಲ್ಲಿದ್ದ ಪಾಂಡ್ಯಗೆ ಈಗ ಉಪ ನಾಯಕನೂ ಪಟ್ಟವೂ ಇಲ್ಲದಾಗಿದೆ.

ಇದನ್ನೂ ಓದಿ:ಗಂಭೀರ್​​ ಆಡಿದ ಗೇಮ್​ಗೆ ಬೆಂಡ್​ ಆದ ಕೊಹ್ಲಿ.. ಆರಂಭದಲ್ಲೇ ಜುಟ್ಟು ಹಿಡಿದು ಬಿಗಿಗೊಳಿಸಿದ ಗೌತಿ..!

ಡೆಲ್ಲಿಯ ರಿಷಭ್​​ಗೂ ಡಿಚ್ಚಿ ನೀಡಿದ್ರಾ ಗೌತಮ್ ಗಂಭೀರ್..?
ಹಾರ್ದಿಕ್ ಪಾಂಡ್ಯ ಜೊತೆ ಜೊತೆಗೆ ರಿಷಭ್ ಪಂತ್, ಭವಿಷ್ಯದ ನಾಯಕನಾಗಿ ಗುರುತಿಸಿಕೊಂಡವರು. ಹಾರ್ದಿಕ್ ನಂತರದ ಸ್ಥಾನದಲ್ಲಿ ನಾಯಕತ್ವದ ಪಟ್ಟಕ್ಕೆ ಕರ್ಚೀಫ್ ಹಾಕಿದ್ರು. ಆದ್ರೀಗ ಇದೇ ಪಂತ್​ಗೆ ವೈಸ್ ಕ್ಯಾಪ್ಟನ್ಸಿಯೂ ಸಿಗದಂತಾಗಿದೆ. ಈ ಪಂತ್​ ಕೂಡ ಧೋನಿಯ ಆಪ್ತ.

ಧೋನಿ ಮೇಲಿನ ಸಿಟ್ಟು ಆಪ್ತರ ಮೇಲೆ ತೋರಿದ್ರಾ ಗೌತಿ?
ಎಮ್​​.ಎಸ್. ಧೋನಿ ಆಪ್ತರಾದ ಋತುರಾಜ್ ಗಾಯಕ್ವಾಡ್, ರವೀಂಡ್ರ ಜಡೇಜಾ, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್​​ಗೆ ಇದೀಗ ಶಾಕ್ ಎದುರಾಗಿದೆ. ಇದಕ್ಕೆ ಕಾರಣ 12 ವರ್ಷಗಳ ಹಿಂದಿನ ದ್ವೇಷನಾ ಎಂಬ ಅನುಮಾನ ಹುಟ್ಟಿದೆ. 2012ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೀಮ್ ಇಂಡಿಯಾ, 4-0 ಅಂತರದಿಂದ ಸರಣಿ ಸೋತಿತ್ತು. ಆಗ ನಾಯಕನ ಬದಲಾಗಿ ವೈಸ್ ಕ್ಯಾಪ್ಟನ್ಸಿ ಪಟ್ಟದಿಂದ ಗೌತಮ್​ ಗಂಭೀರ್​ಗೆ ಕೊಕ್ ಕೊಡಲಾಗಿತ್ತು. ನಂತರ ಏಕದಿನ ತಂಡದಿಂದಲೂ ದೂರ ಮಾಡಲಾಯ್ತು.

ಇದನ್ನೂ ಓದಿ:ಪಾಂಡ್ಯ ಹಿಂದಿಕ್ಕಿ ಸೂರ್ಯ ಪಟ್ಟ ಗಿಟ್ಟಿಸಿಕೊಂಡಿದ್ದು ಹೇಗೆ..? ಇದು ತ್ರಿಮೂರ್ತಿಗಳ ಕೃಪಾಕಟಾಕ್ಷ..!

ಈ ಘಟನೆಯ ಬಗ್ಗೆ ಬಹಿರಂಗವಾಗೇ ಗಂಭೀರ್​ ಅಸಮಾಧಾನ ವ್ಯಕ್ತಪಡಿಸಿದ್ರು. ಆ ಬಳಿಕ ಒಂದಿಲ್ಲೊಂದು ಕಾರಣಕ್ಕೆ ಧೋನಿಯನ್ನ ಹಿಗ್ಗಾಮುಗ್ಗಾ ಜರಿಯುತ್ತಿದ್ರು. ಇದೀಗ ಆ ಕೋಪವನ್ನು ಆಪ್ತರ ಮೇಲೆ ತೀರಿಸಿಕೊಂಡ್ರಾ ಎಂಬ ಚರ್ಚೆ ಸದ್ಯ ನಡೀತಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಗಂಭೀರ್ ಮೇಲೆ ಹಳೇ ದ್ವೇಷ ಸಾಧಿಸಿದ ಅನುಮಾನ.. 12 ವರ್ಷಗಳ ಹಿಂದಿನ ನಡೆಗೆ ಇಂದು ರಿವೇಂಜ್..!

https://newsfirstlive.com/wp-content/uploads/2024/07/GAMBHIR-VS-MS-DHINI.jpg

Load More