ಬೆಳಗಾವಿಯಲ್ಲಿ 4 ತಿಂಗಳ ಗರ್ಭಿಣಿ ಅನುಮಾನಾಸ್ಪದ ಸಾವು; ಉಸಿರುಗಟ್ಟಿಸಿ ಕೊಲೆ ಮಾಡಿರೋ ಶಂಕೆ?

author-image
admin
Updated On
ಬೆಳಗಾವಿಯಲ್ಲಿ 4 ತಿಂಗಳ ಗರ್ಭಿಣಿ ಅನುಮಾನಾಸ್ಪದ ಸಾವು; ಉಸಿರುಗಟ್ಟಿಸಿ ಕೊಲೆ ಮಾಡಿರೋ ಶಂಕೆ?
Advertisment
  • ಇನ್ಸ್‌ಸ್ಟಾಗ್ರಾಂನಲ್ಲಿ ಪರಿಚಯವಾಗಿದ್ದ ಗೆಳಯನ ಜೊತೆ ಮದುವೆ
  • ಒಂದೂವರೆ ವರ್ಷ ಮಂಜುಳಾ, ಬಾಳೇಶನ ಲವ್ ಸ್ಟೋರಿಗೆ ಏನಾಯ್ತು?
  • ಮನೆಯಲ್ಲೇ ನಾಲ್ಕು ತಿಂಗಳ ಗರ್ಭಿಣಿಯ ಅನುಮಾನಾಸ್ಪದ ಸಾವು

ಮೈಸೂರು ಮೂಲದ ವಿವಾಹಿತೆ ಅನುಮಾನಾಸ್ಪದ ಸಾವನ್ನಪ್ಪಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ನಾಲ್ಕು ತಿಂಗಳ ಗರ್ಭಿಣಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ ಎಂದು ಮೃತ ಮಹಿಳೆಯ ಪೋಷಕರು ಆರೋಪಿಸಿದ್ದಾರೆ.

ಇದನ್ನೂ ಓದಿ: ಓವರ್ ಟೇಕ್ ಮಾಡಲು ಹೋಗಿ ಬೇವಿನ ಮರಕ್ಕೆ ಕಾರು ಡಿಕ್ಕಿ.. ಸ್ಥಳದಲ್ಲೇ ಉಸಿರು ಚೆಲ್ಲಿದ ಇಬ್ಬರು ಯುವಕರು 

22 ವರ್ಷದ ಮಂಜುಳಾ ಮೃತ ದುರ್ದೈವಿ. ಮಂಜುಳಾ ಅವರಿಗೆ ಒಂದೂವರೆ ವರ್ಷದ ಹಿಂದೆ ಬೆಳಗಾವಿಯ ಮಚ್ಛೆ ಮೂಲದ ಬಾಳೇಶ ಅವರ ಜೊತೆ ಮದುವೆ ಮಾಡಲಾಗಿತ್ತು. ನಾಲ್ಕು ತಿಂಗಳ‌ ಗರ್ಭಿಣಿಯಾಗಿದ್ದ ಮಂಜುಳಾ ಅವರ ಮೃತದೇಹ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

publive-image

ಮದುವೆಗೆ ಪೋಷಕರ ವಿರೋಧ
ಮಂಜುಳಾಗೆ ಇನ್ಸ್‌ಸ್ಟಾಗ್ರಾಂನಲ್ಲಿ ರೀಲ್ಸ್ ಮಾಡುವ ಹವ್ಯಾಸ ಇತ್ತು. ಇನ್ಸ್‌ಸ್ಟಾಗ್ರಾಂ ಮೂಲಕ ಬಾಳೇಶನ ಪರಿಚಯವಾಗಿತ್ತು. ಪರಿಚಯ ಪ್ರೀತಿಯಾಗಿ ಒಂದೂವರೆ ವರ್ಷದ ಹಿಂದೆ ಮಂಜುಳಾ ಅವರು ಬೆಳಗಾವಿಯ ಬಾಳೇಶನ ಕೈ ಹಿಡಿದಿದ್ದರು. ಇನ್ಸ್‌ಸ್ಟಾಗ್ರಾಂ ಮೂಲಕ ಪರಿಚಯವಾಗಿದ್ದ ಈ ಪ್ರೇಮಿಗಳ ಮದುವೆಗೆ ಪೋಷಕರ ವಿರೋಧ ಇತ್ತು.

ಇದನ್ನೂ ಓದಿ: ಸೋಲಂಕಿ ಆಯ್ತು.. ಈಗ ಬಾಲಿವುಡ್ ನಟಿ ಜೊತೆ ಹಾರ್ದಿಕ್ ಪಾಂಡ್ಯ ಭರ್ಜರಿ ಡ್ಯಾನ್ಸ್​.. Video 

ಒಂದೂವರೆ ವರ್ಷ ಮಂಜುಳಾ, ಬಾಳೇಶನ ಲವ್ ಸ್ಟೋರಿ ಚೆನ್ನಾಗಿಯೇ ಇತ್ತು. ಆದರೆ ಕಳೆದ ಎರಡು ದಿನಗಳ ಹಿಂದೆ ಮನೆಯಲ್ಲೇ ಮಂಜುಳಾ ಶವ ಪತ್ತೆಯಾಗಿದೆ. ಬಾಳೇಶ ಬೆಳಗಾವಿ ಉದ್ಯಮ ಭಾಗದ ಕೈಗಾರಿಕೆ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದ. ಮಂಜುಳಾ ಪೋಷಕರು ಮಗಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ಈ ಘಟನೆಯ ಬಗ್ಗೆ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment