ಅನುಮಾನಾಸ್ಪದವಾಗಿ ಯುವಕ ಸಾವು.. ಬೇಕರಿ ಮಾಲೀಕನೇ ಕೊಲೆ ಮಾಡಿರೋದಾಗಿ ಆರೋಪ

author-image
AS Harshith
Updated On
ಅನುಮಾನಾಸ್ಪದವಾಗಿ ಯುವಕ ಸಾವು.. ಬೇಕರಿ ಮಾಲೀಕನೇ ಕೊಲೆ ಮಾಡಿರೋದಾಗಿ ಆರೋಪ
Advertisment
  • ಆತ್ಮಹತ್ಯೆ ಮಾಡಿದ್ದಾನೆ ಎಂದು ಹೇಳುತ್ತಿರೋ ಬೇಕರಿ ಮಾಲೀಕ
  • ಮೃತ ಯುವಕನ ಕಾಲು, ತಲೆಭಾಗದಲ್ಲಿ ಗಾಯ.. ಹಲವು ಅನುಮಾನ
  • ಮಾಲೀಕನ ಮನೆ ಮುಂದೆ ಮೃತದೇಹವಿಟ್ಟು ಪ್ರತಿಭಟಿಸುತ್ತಿರುವ ಕುಟುಂಬಸ್ಥರು

ರಾಮನಗರ: ಯುವಕನೋರ್ವ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ರಾಮನಗರ ಜಿಲ್ಲೆಯ ಸಾತನೂರಿನಲ್ಲಿ ನಡೆದಿದೆ. ನಂದನ್ (23) ಮೃತಪಟ್ಟ ದುರ್ದೈವಿ.

ನಂದನ್ ಬೇಲೂರು ತಾಲೂಕಿನ ಹೆಬ್ಬಾಳು ಗ್ರಾಮದವನಾಗಿದ್ದು, ರಾಮನಗರದ ಜಿಲ್ಲೆಯ ಸಾತನೂರುನಲ್ಲಿ ಬೇಕರಿ ಕೆಲಸ ಮಾಡುತ್ತಿದ್ದನು. ಇದೇ ಗ್ರಾಮದ ಮಧು ಎಂಬುವರ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದನು.

ಇದನ್ನೂ ಓದಿ: ಹೀಲಿಯಂ ಸಿಸ್ಟಂ ಸೋರಿಕೆ! ಬಾಹ್ಯಾಕಾಶದಲ್ಲಿ ಅಪಾಯದಲ್ಲಿ ಸಿಲುಕಿದ ಭಾರತ ಮೂಲದ ವಿಜ್ಞಾನಿ ಸುನೀತಾ ವಿಲಿಯಮ್ಸ್! 

ಮೃತಪಟ್ಟ ಯುವಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರೋದಾಗಿ ಬೇಕರಿ ಮಾಲೀಕ ಮಧು ಹೇಳಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಆತನನ್ನು ಬೆಂಗಳೂರಿಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಂದನ್ ಮೃತಪಟ್ಟಿರೋದಾಗಿ ಬೇಕರಿ ಮಾಲೀಕ ಮಧು ಹೇಳಿದ್ದಾರೆ.

ಇನ್ನು ಮೃತ ಯುವಕನ ಕಾಲು, ತಲೆಭಾಗದಲ್ಲಿ ಗಾಯಗಳಾಗಿವೆ ಎಂದು ಮೃತ ಸಂಬಂಧಿಕರು ಹೇಳಿದ್ದು, ಬೇಕರಿ ಮಾಲೀಕನೇ ಕೊಲೆ ಮಾಡಿದ್ದಾರೆ ಎಂದು ಮೃತ ಯುವಕನ ಸಂಬಂಧಿಕರು ಆರೋಪಿಸಿದ್ದಾರೆ.

ಇದನ್ನೂ ಓದಿ: ಜೈಲಲ್ಲಿರೋ ದರ್ಶನ್​​ ಬಗ್ಗೆ ಸೆಲೆಬ್ರಿಟಿಗಳ ಡಿಫರೆಂಟ್​​ ಡಿಫರೆಂಟ್​ ಮಾತುಗಳು! ಒಬ್ಬೊಬ್ರು ಏನಂತಾರೆ? ಇಲ್ಲಿದೆ ನೋಡಿ

ಸಂಬಂಧಿಕರು ಮತ್ತು ಗ್ರಾಮಸ್ಥರು ಮೃತ ಯುವಕ ನಂದನ್ ಮೃತದೇಹವನ್ನ ಮಧು ಅವರ ಮನೆಯ ಮುಂದಿಟ್ಟು ಪ್ರತಿಭಟನೆ ಮಾಡಿದ್ದಾರೆ. ಬೇಕರಿ ಮಾಲೀಕ ಮಧು ಸ್ಥಳಕ್ಕೆ ಬರುವಂತೆ ಸಂಬಂಧಿಕರು ಆಗ್ರಹಿಸಿದ್ದಾರೆ. ಬೇಲೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment