/newsfirstlive-kannada/media/post_attachments/wp-content/uploads/2024/07/Bangalore-Girl-Death-1.jpg)
ಬೆಂಗಳೂರು: ಜಿಮ್‌ನಲ್ಲಿ ರಿಸೆಪ್ಶನಿಸ್ಟ್ ಆಗಿ ಕೆಲಸ ಮಾಡುತ್ತಿದ್ದ ಯುವತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತ ಯುವತಿಯನ್ನು ಶ್ರಾವಣಿ ಎಂದು ಗುರುತಿಸಲಾಗಿದೆ. ಎರಡು ದಿನಗಳ ಹಿಂದೆ ಈ ದುರ್ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಮದುವೆಯಾಗಲು ನಿರಾಕರಿಸಿದ ಬಾಯ್ಫ್ರೆಂಡ್.. ಸಿಟ್ಟಿಗೆದ್ದು ಆತನ ಖಾಸಗಿ ಅಂಗವನ್ನೇ ಕತ್ತರಿಸಿದ ಪ್ರಿಯತಮೆ
22 ವರ್ಷದ ಶ್ರಾವಣಿಯು ಎಂಟನೇ ಮೈಲಿಯ ಗೋಲ್ಡನ್ ಜಿಮ್‌ನಲ್ಲಿ ರಿಸೆಪ್ಶನಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು. ಮೊನ್ನೆ ಕೆಲಸಕ್ಕೆ ಬಂದಾಗ ಇದ್ದಕ್ಕಿದ್ದ ಹಾಗೆ ಶ್ರಾವಣಿ ವಾಂತಿ ಮಾಡಿಕೊಂಡಿದ್ದಳು. ತಕ್ಷಣವೇ ಜಿಮ್‌ನಲ್ಲಿದ್ದವರು ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಶ್ರಾವಣಿ ಚಿಕಿತ್ಸೆ ಫಲಕಾರಿಯಾಗದೆ ಪ್ರಾಣ ಬಿಟ್ಟಿದ್ದಾರೆ.
ಮದುವೆಗೆ ಒಪ್ಪದ ಶ್ರಾವಣಿ!
ಬಾಗಲುಗುಂಟೆ ಪೊಲೀಸ್ ಠಾಣೆಯಲ್ಲಿ ಯುವತಿ ಅನುಮಾನಾಸ್ಪದ ಸಾವಿನ ಹಿನ್ನೆಲೆಯಲ್ಲಿ ಯುಡಿಆರ್ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದಾಗ ಯುವತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ದಾವಣಗೆರೆ ಮೂಲದವರಾದ ಮೃತ ಶ್ರಾವಣಿ ದಾಸರಹಳ್ಳಿಯ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಮಲ್ಲನಗೌಡ ಮತ್ತು ಜ್ಯೋತಿ ದಂಪತಿಯ ಪುತ್ರಿ ಶ್ರಾವಣಿ. ಇತ್ತೀಚೆಗೆ ಶ್ರಾವಣಿ ಪೋಷಕರು ಈಕೆಗೆ ಮದುವೆ ಮಾಡಲು ಮುಂದಾಗಿದ್ದಾರೆ. ಪೋಷಕರು ಒಪ್ಪಿದ ಹುಡುಗನನ್ನು ಮದುವೆ ಆಗಲು ಶ್ರಾವಣಿ ನಿರಾಕರಿಸಿದ್ದರು. ಹೀಗಾಗಿ ಕೆಲಸ ಮಾಡುತ್ತಿದ್ದ ಜಿಮ್‌ನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಆಕೆಗೆ 20, ಆತನಿಗೆ 25 ವರ್ಷ.. ಇವರಿಬ್ಬರ ಲವ್ಗೆ ಪೋಷಕರ ವಿರೋಧ.. ನಾಪತ್ತೆಯಾದ ಜೋಡಿ ಕೆರೆಯಲ್ಲಿ ಪತ್ತೆ
ಮಗಳ ಮನವೊಲಿಸಲು ದಾವಣಗೆರೆಯಿಂದ ದಾಸರಹಳ್ಳಿಯ ಮಗಳ ಮನೆಗೆ ತಾಯಿ ಜ್ಯೋತಿ ಬಂದಿದ್ದರು. ಮೊನ್ನೆ ಮದುವೆ ನಿರಾಕರಿಸಿ ಶ್ರಾವಣಿ ಗೋಲ್ಡನ್ ಜಿಮ್‌ಗೆ ಕೆಲಸಕ್ಕೆ ಹೋಗಿದ್ದರು. ಮಧ್ಯಾಹ್ನ 2 ಗಂಟೆ ವೇಳೆಗೆ ವಿಷ ಸೇವಿಸಿ ಶ್ರಾವಣಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅತಿಯಾದ ವಾಂತಿಯಿಂದ ಚಿಕಿತ್ಸೆ ಫಲಿಸದೆ ಶ್ರಾವಣಿ ಸಾವನ್ನಪ್ಪಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ