/newsfirstlive-kannada/media/post_attachments/wp-content/uploads/2024/08/Ramnagar-Death-1.jpg)
ರಾಮನಗರ: ಮಾಗಡಿ ಪಟ್ಟಣದ ತಿರುಮಲೆ ಶ್ರೀರಂಗ ಬಡಾವಣೆಯಲ್ಲಿ ವಕೀಲೆಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ವಾಸುಕಿ (25) ಮೃತ ದುರ್ದೈವಿ.
ಇದನ್ನೂ ಓದಿ: ಚಿಕ್ಕಪ್ಪನನ್ನೇ ಪ್ರೀತಿಸಿ ಮದುವೆಯಾದ ಯುವತಿ ಕೇಸ್ಗೆ ಬಿಗ್ ಟ್ವಿಸ್ಟ್.. ಆಮೇಲೇನಾಯ್ತು ಗೊತ್ತಾ?
ಇದನ್ನೂ ಓದಿ: ಯೂಟ್ಯೂಬ್ ಇತಿಹಾಸದಲ್ಲೇ ಕ್ರಿಸ್ಟಿಯಾನೋ ರೊನಾಲ್ಡೊ ರೆಕಾರ್ಡ್ ಬ್ರೇಕ್; 24 ಗಂಟೆಯಲ್ಲೇ ಡೈಮಂಡ್ ಬಟನ್!
ವಾಸುಕಿ ಅವರು ಅವಿವಾಹಿತೆಯಾಗಿದ್ದು ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ವಕೀಲೆ ವಾಸುಕಿ ಅವರು ತಿರುಮಲೆ ಶ್ರೀರಂಗ ಬಡಾವಣೆಯಲ್ಲಿ ನೆಲೆಸಿದ್ದರು. ಮೃತ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ವಕೀಲೆ ವಾಸುಕಿ ಅವರ ಸಾವಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಅವಿವಾಹಿತೆ ಯಾಗಿರೋ ವಕೀಲೆ ಸಾವು ಹಲವು ಅನುಮಾನಗಳಿಗೆ ಕಾರಣವಾಗಿದೆ. ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಾಗಡಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ