/newsfirstlive-kannada/media/post_attachments/wp-content/uploads/2024/10/Hrutik-Roshan.jpg)
ಹೃತಿಕ್ ರೋಷನ್ ಮಾಜಿ ಪತ್ನಿ ಸುಸ್ಸಾನ್ನೆ ಖಾನ್ ತನ್ನ ಪ್ರಿಯಕರ ಆರ್ಸಲಾಗ್ ಗೋನಿ ಜೊತೆ ನಿನ್ನೆ 49ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ತನ್ನ ಬರ್ತ್ಡೇ ಪಾರ್ಟಿಗೆ ಹೃತಿಕ್ ರೋಷನ್ ಮತ್ತು ಗೆಳತಿ ಸಬಾ ಆಜಾದ್ ಅವರನ್ನು ಈ ಜೋಡಿ ಆಹ್ವಾನಿಸಿದ್ದರು. ಆದರೆ ಪಾರ್ಟಿಯ ವೇಳೆ ಸುಸ್ಸಾನ್ನೆ ಮಾಜಿ ಪತಿ ಹೃತಿಕ್ ರೋಷನ್ ಮುಂದೆಯೇ ಅರ್ಸಲನ್ ಗೋನಿ ಜೊತೆ ಲಿಪ್ಲಾಕ್ ಮಾಡಿದ್ದಾರೆ.
ಸುಸ್ಸಾನ್ನೆ ಬರ್ತ್ ಡೇ ಪಾರ್ಟಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಈ ಪಾರ್ಟಿಯಲ್ಲಿ ಮಕ್ಕಳಾದ ಸುಸ್ಸಾನೆ ಮತ್ತು ಹೃತಿಕ್ ಮಕ್ಕಳಾದ ಹ್ರೇಹಾನ್ ಮತ್ತು ಹರಿದಾನ್ ಕಾಣಿಸಿಕೊಂಡಿದ್ದಾರೆ. ಜೊತೆಗೆ ಸ್ನೇಹಿತರು ಕೂಡ ಭಾಗಿಯಾಗಿದ್ದರು.
ಬರ್ತ್ಡೇ ಬೆಡಗಿ ದೃಶ್ಯದಲ್ಲಿ ಕಪ್ಪು ಬಣ್ಣದ ಮಿನಿ-ಡ್ರೆಸ್ನಲ್ಲಿ ಕಾಣಿಸಿಕೊಂಡಿದ್ದರು. ಬ್ಲಾಕ್ ಶೂ ಜೊತೆಗೆ ಗೋಲ್ಡ್ ನೆಕ್ಲೇಸ್ ಧರಿಸಿದ್ದರು. ಅರ್ಸಲನ್ ಕ್ಯಾಶುವಲ್ ಕಪ್ಪು ಬಣ್ಣ ಟೀ ಶರ್ಟ್ ಮತ್ತು ಡೆನಿಮ್ ಜೀನ್ಸ್ ಜಾಕೆಟ್ ಧರಿಸಿದ್ದರು.
ಪಾರ್ಟಿಯಲ್ಲಿ ಕರಿಷ್ಮಾ ತನ್ನಾ, ಅನುಷ್ಕಾ ರಂಜನ್, ಜಾಯೆದ್ ಖಾನ್, ಫರ್ದೀನ್ ಖಾನ್, ಫರಾ ಖಾನ್ ಅಲಿ, ಭಾವನಾ ಪಾಂಡೆ, ಮಹೀಪ್ ಕಪೂರ್ ಮತ್ತು ಆದಿತ್ಯ ಸೀಲ್ ಸೇರಿದಂತೆ ಬಾಲಿವುಡ್ ತಾರೆಯರು ಕಾಣಿಸಿಕೊಂಡಿದ್ದಾರೆ.
ಸುಸ್ಸಾನ್ನೆ ಬರ್ತ್ಡೇ ಸಂಭ್ರಮವನ್ನು ಈ ತಾರೆಯರು ಇನ್ಸ್ಟಾಗ್ರಾಂನಲ್ಲೂ ಹಂಚಿಕೊಂಡಿದ್ದಾರೆ. ಇನ್ನು ಸುಸ್ಸಾನ್ನೆ ಹುಟ್ಟುಹಬ್ಬದ ಸಂಭ್ರಮದ ಕ್ಷಣಗಳನ್ನು ನೋಡಿ ಅನೇಕರು ಶುಭಾಶಯ ಕೋರಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ