/newsfirstlive-kannada/media/post_attachments/wp-content/uploads/2024/07/Sathyananda-swamiji.jpg)
ಮಾಜಿ ಒಲಿಂಪಿಯನ್​ ಮತ್ತು ಭಾರತೀಯ ಬ್ಯಾಸ್ಕೆಟ್ ಬಾಲ್​​ ದಿಗ್ಗಜ ಅಮರನಾಥ್​ ನಾಗರಾಜನ್​​ ಆಧ್ಯಾತ್ಮಿಕದ ಕಡೆಗೆ ವಾಲಿ ಸ್ವಾಮಿ ಸತ್ಯಾನಂದ ಸರಸ್ವತಿಯಾಗಿದ್ದಾರೆ. ಕ್ರೀಡೆಯಲ್ಲಿ ಗುರುತಿಸಿಕೊಂಡಿದ್ದ ಇವರು ಸನ್ಯಾಸಿ ಜೀವನಕ್ಕೆ ತಮ್ಮ ಜೀವನವನ್ನು ಅರ್ಪಿಸಿದ್ದಾರೆ.
ಇದನ್ನೂ ಓದಿ: 3ನೇ ಮಗುವನ್ನು ಬರಮಾಡಿಕೊಂಡ ನಟ ಶಿವಕಾರ್ತಿಕೇಯನ್.. ಮಗನಿಗೆ ಇಟ್ಟ ಹೆಸರೇನು ಗೊತ್ತಾ?
ಅಂದಹಾಗೆಯೇ, ಅಮರನಾಥ್​ ನಾಗರಾಜನ್ ತಮಿಳುನಾಡಿದ ಪೆರಿಯಾಕುಲಂನಲ್ಲಿ ಜನಿಸಿದರು. ಪ್ರತಿಭಾವಂತ ಕ್ರೀಡಾಪಡುವಾಗಿದ್ದ ಇವರು ಹಾಕಿ ಮತ್ತು ಅಥ್ಲೆಟಿಕ್ಸ್​ ಎರಡರಲ್ಲೂ ಮಿಂಚಿದ್ದರು. ಬಳಿಕ ಬ್ಯಾಸ್ಕೆಟ್ ಬಾಲ್​​ನಲ್ಲಿ ತಮ್ಮ ಖ್ಯಾತಿ ಗಳಿಸಿದರು.
ಇದನ್ನೂ ಓದಿ: ಸೇತುವೆ ಮೇಲಿಂದ ನದಿಗೆ ಹಾರಿ ಇಬ್ಬರು ಆತ್ಮಹತ್ಯೆ.. ಯುವಕನ ಮೃತದೇಹ ಪತ್ತೆ, ಯುವತಿಗಾಗಿ ಮುಂದುವರೆದ ಶೋಧ
1980ರಲ್ಲಿ ಮಾಸ್ಕೋದಲ್ಲಿ ನಡೆದ ಒಲಿಪಿಂಕ್ಸ್​ನಲ್ಲಿ ಭಾರತ ತಂಡದ ಪರ ಪ್ರತಿನಿಧಿಸಿದರು. ಬಳಿಕ ಸ್ಟೇಟ್​​ ಬ್ಯಾಂಕ್​ ಆಫ್​ ಇಂಡಿಯಾದಲ್ಲಿ ಅಸಿಸ್ಟೆಂಟ್​​ ಜನರಲ್​ ಮ್ಯಾನೇಜರ್​​ ಆಗಿ ನಿವೃತ್ತಿ ಹೊಂದಿದರು. 2019ರಲ್ಲಿ ತಮ್ಮ ಪತ್ನಿಯ ಸಾವಿನ ಬಳಿಕ ಸನ್ಯಾಸಿ ಜೀವನದತ್ತ ಸಾಗಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us