newsfirstkannada.com

ನೇಹಾ ಹಿರೇಮಠ್ ಹತ್ಯೆಗೆ ಭಾರೀ ಆಕ್ರೋಶ, ನ್ಯಾಯಕ್ಕಾಗಿ ಆಗ್ರಹಿಸಿದ ನಟ ಧ್ರುವ ಸರ್ಜಾ

Share :

Published April 20, 2024 at 9:09am

  ನಟ ಧ್ರುವ ಸರ್ಜಾ ಸೇರಿ ಸ್ವಾಮೀಜಿಗಳು ಹೋರಾಟಕ್ಕೆ ಬೆಂಬಲ

  ಕಾಲೇಜಿನಲ್ಲಿ ಒನ್ ಸೈಡ್ ಲವ್​​ಗೆ ನೇಹಾ ಜೀವ ಬಲಿಯಾಯಿತಾ?

  ಪೈಶಾಚಿಕ ಕೃತ್ಯಕ್ಕೆ ವಾಣಿಜ್ಯ ನಗರಿ ಹುಬ್ಬಳ್ಳಿ ಅಕ್ಷರಶಃ ಬೆಚ್ಚಿಬಿದ್ದಿದೆ

ಹುಬ್ಬಳ್ಳಿಯ ಬಿವಿಬಿ ಕಾಲೇಜು ಕ್ಯಾಂಪಸ್​​ನಲ್ಲಿ ಪ್ರೇಮಿಯ ಹುಚ್ಚಾಟಕ್ಕೆ ಕಾರ್ಪೋರೇಟರ್ ಪುತ್ರಿ ಬಲಿಯಾಗಿದ್ದಾಳೆ. ಚೂರಿ ಇರಿದ ಕಿರಾತಕನನ್ನು ಪೊಲೀಸರು ಬಂಧಿಸಿದ್ದು ತನಿಖೆ ನಡೆಸ್ತಿದ್ದಾರೆ. ಯುವತಿಯ ಸಾವು ಖಂಡಿಸಿ ಎಲ್ಲೆಡೆ ನ್ಯಾಯಕ್ಕಾಗಿ ಕೂಗು ಎದ್ದಿದೆ. ನಟ ಧ್ರುವ ಸರ್ಜಾ ಸೇರಿ ಸ್ವಾಮೀಜಿಗಳು ಹೋರಾಟಕ್ಕೆ ಬೆಂಬಲ ನೀಡಿದ್ದಾರೆ.

ಇಷ್ಟು ದಿನ ಶಾಂತವಾಗಿದ್ದ ಹುಬ್ಬಳ್ಳಿಯಲ್ಲಿ‌ ನೆತ್ತರು ಹರಿದಿದೆ. ಭಗ್ನಪ್ರೇಮಿಯೊಬ್ಬ ಯುವತಿಯ ಜೀವ ತೆಗೆದಿದ್ದಾನೆ. ​​ಪ್ರೇಮಿಯ ಪೈಶಾಚಿಕ ಕೃತ್ಯಕ್ಕೆ ವಾಣಿಜ್ಯ ನಗರಿ ಹುಬ್ಬಳ್ಳಿ ಅಕ್ಷರಶಃ ಬೆಚ್ಚಿಬಿದ್ದಿದೆ.

ಪ್ರೀತಿ ಸಿಗಲಿಲ್ಲ ಅಂತ ಚುಚ್ಚಿ ಚುಚ್ಚಿ ಕೊಂದ ಭಗ್ನಪ್ರೇಮಿ

ಪ್ರೇಮಿ ಫಯಾಜನ ಕ್ರೌರ್ಯಕ್ಕೆ ಒಂದಿಡೀ ಕುಟುಂಬ ದುಃಖದಲ್ಲಿ ಕೈ ತೊಳೆಯುವಂತಾಗಿದೆ. ಹುಬ್ಬಳ್ಳಿ ಮಹಾನಗರ ಪಾಲಿಕೆ ಕಾಂಗ್ರೆಸ್ ಸದಸ್ಯ ನಿರಂಜನ್ ಹಿರೇಮಠ ಪುತ್ರಿ ನೇಹಾ ಬದುಕು ಒನ್ ಸೈಡ್ ಲವ್​​ಗೆ ಬಲಿಯಾಗಿದೆ. ನೇಹಾ ಬರ್ಬರ ಹತ್ಯೆ ಖಂಡಿಸಿ ಬಿವಿಬಿ ಕ್ಯಾಂಪಸ್ ಎದುರು ಕ್ಯಾಂಡಲ್ ಮಾರ್ಚ್ ನಡೆಸಲಾಯ್ತು. ಎಬಿವಿಪಿ, ಎನ್​ಎಸ್​ಯುಐ ಕಾರ್ಯಕರ್ತರು, ಹಾಗೂ ನೂರಾರು ವಿದ್ಯಾರ್ಥಿಗಳು ಕ್ಯಾಂಡಲ್ ಮಾರ್ಚ್​ನಲ್ಲಿ ಭಾಗಿಯಾಗಿದ್ದರು. ನೇಹಾ ಭಾವಚಿತ್ರ ಪ್ರದರ್ಶಿಸಿ ಜಸ್ಟಿಸ್ ಫಾರ್ ನೇಹಾ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ರು. ಹುಬ್ಬಳ್ಳಿ-ಧಾರವಾಡ ರಸ್ತೆ ಬಂದ್ ಮಾಡಿ ನೇಹಾ ಭಾವಚಿತ್ರಕ್ಕೆ ಶ್ರದ್ಧಾಂಜಲಿ ಸಲ್ಲಿಸಿದ್ರು.

ನೇಹಾ ಹತ್ಯೆ ಖಂಡಿಸಿ ಬಳ್ಳಾರಿಯಲ್ಲಿ ಪ್ರತಿಭಟನೆ!

ವಿದ್ಯಾರ್ಥಿನಿ ನೇಹಾ ಹತ್ಯೆಗೆ ಎಲ್ಲೆಡೆ ವ್ಯಾಪಕ ಖಂಡನೆ ವ್ಯಕ್ತವಾಗ್ತಿದೆ. ಬಳ್ಳಾರಿಯ ರೈಲ್ವೇ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಿದ ಸಂಘಟನೆಗಳು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು ಕೂಡಲೇ ಆರೋಪಿ ಫಯಾಜ್​​ನನ್ನ ಎನ್​ಕೌಂಟರ್ ಮಾಡುವಂತೆ ಆಗ್ರಹಿಸಿದ್ದಾರೆ. ಮತ್ತೊಂದೆಡೆ ಬಿಜೆಪಿ ಹಾಗೂ ಹಿಂದೂಪರ ಸದಸ್ಯರು ಕ್ಯಾಂಡಲ್ ಹಿಡಿದು ಪ್ರತಿಭಟನಾ ಮೆರವಣಿಗೆ ನಡೆಸಿದ್ರು. ಆರೋಪಿಗೆ ಗಲ್ಲುಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದ್ರು

ಮಂಡ್ಯದಲ್ಲಿ ಜೆಡಿಎಸ್, ಹಿಂದೂ ಸಂಘಟನೆಗಳ ಪ್ರತಿಭಟನೆ

ಇತ್ತ ಮಂಡ್ಯದ ಕೆರಗೋಡಿನಲ್ಲಿ ನೇಹಾ ಹತ್ಯೆ ಖಂಡಿಸಿ ಜೆಡಿಎಸ್ ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದ್ರು..

ನ್ಯಾಯಕ್ಕಾಗಿ ಆಗ್ರಹಿಸಿ ನಟ ಧ್ರುವ ಸರ್ಜಾ ಟ್ವೀಟ್!

ನೇಹಾ ಹತ್ಯೆಗೆ ನಟ ಧ್ರುವ ಸರ್ಜಾರ ಕಂಬನಿ ಮಿಡಿದಿದ್ದಾರೆ. ಕಾಲೇಜು ಕ್ಯಾಂಪಸ್​​ನಲ್ಲಿ ನಡೆದಿರೋದು ಹೀನ ಕೃತ್ಯ, ಆತಂಕಕಾರಿಯಾಗಿದೆ. ಎಲ್ಲ ಆಯಾಮದಲ್ಲೂ ತನಿಖೆ ನಡೆಸಿ ಆರೋಪಿಗೆ ಅತ್ಯುಗ್ರ ಶಿಕ್ಷೆ ನೀಡಬೇಕು ಅಂತ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ನೇಹಾ ಹತ್ಯೆಗೆ ಜೈನಮುನಿ ಗುಣಧರನಂದಿ ಸ್ವಾಮೀಜಿ ಖಂಡನೆ

ಜೀವ ತೆಗೆಯೋದು ಕರ್ನಾಟಕದ ಸಂಸ್ಕೃತಿಯಲ್ಲ. ಇದು ವಿದ್ಯಾರ್ಥಿನಿ ಹತ್ಯೆಯಲ್ಲ. ಸನ್ಯಾಸಿಗಳ ಮರ್ಡರ್ ಅಗಿದೆ. ನೇಹಾಗೆ ಶಾಂತಿ ಸಿಗಬೇಕು ಅಂದ್ರೆ, ಕೂಡಲೇ ಸರ್ಕಾರ ಕಠಿಣ ಕಾನೂನು ಜಾರಿ ಮಾಡ್ಬೇಕು. ಸರ್ಕಾರ ಇದನ್ನ ಹಗುರವಾಗಿ ತಗೆದುಕೊಳ್ಳಬಾರದು ಅಂತ ಜೈನ ಸ್ವಾಮೀಜಿ ಆಗ್ರಹಿಸಿದ್ದಾರೆ.

ಇಂಥಹ ದುಷ್ಟ, ದುರಾಚಾರಿ ಪಾಪಿ ಜನನದಿಂದ ಆಶಕ್ತಿಯನ್ನು ನಾವು ಕಳೆದುಕೊಳ್ಳಬಾರದು. ಸರ್ಕಾರ ಏನುಮಾಡೋಕೆ ಆಗುತ್ತೋ ಅದನ್ನು ಕೂಡಲೇ ಮಾಡಬೇಕು. ಸಿಎಂ ಹಾಗೂ ಗೃಹಮಂತ್ರಿಯವರಿಗೆ ಮನವಿ ಮಾಡುತ್ತಿದ್ದೇನೆ. ಇಂತಹವು ಮತ್ತೆ ಮರುಕಳಿಸಲಾಬಾರದು.

ಗುಣಧರನಂದಿ, ಜೈನಸ್ವಾಮೀಜಿ

ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ಇಂದು ಮೋದಿ ಮೇನಿಯಾ.. ಈ ರಸ್ತೆಗಳಲ್ಲಿ ವಾಹನ ಸವಾರರಿಗೆ ನೋ ಎಂಟ್ರಿ

ಇನ್ನೂ ಇವತ್ತೂ ಕೂಡ ಹುಬ್ಬಳ್ಳಿ ಚೆನ್ನಮ್ಮ ವೃತ್ತದಲ್ಲಿ 150ಕ್ಕೂ ಹೆಚ್ಚು ಸ್ವಾಮೀಜಿಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಮತ್ತೊಂದೆಡೆ ಫಯಾಜ್​ ಜೊತೆ ನೇಹಾ ಮಾಡಿರುವ ರೀಲ್ಸ್ ವಿಡಿಯೋ ಲಭ್ಯ ಆಗಿದ್ದು ಇಬ್ಬರ ನಡುವೆ ಸಲುಗೆ ಇರೋದು ಸ್ಪಷ್ಟ ಆಗಿದೆ. ಅದೇನೇ ಇರಲಿ ಫಯಾಜ್​ ಹುಚ್ಚಾಟಕ್ಕೆ ಅಮಾಯಕ ಜೀವ ಬಲಿಯಾಗಿದೆ. ನೇಹಾಳ ಸಾವಿಗೆ ನ್ಯಾಯ ಸಿಗಲಿ ಅನ್ನೋದು ಎಲ್ಲರ ಆಶಯವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನೇಹಾ ಹಿರೇಮಠ್ ಹತ್ಯೆಗೆ ಭಾರೀ ಆಕ್ರೋಶ, ನ್ಯಾಯಕ್ಕಾಗಿ ಆಗ್ರಹಿಸಿದ ನಟ ಧ್ರುವ ಸರ್ಜಾ

https://newsfirstlive.com/wp-content/uploads/2024/04/HBL_NEHA_1.jpg

Load More