Paris Olympics: ಭಾರತಕ್ಕೆ ಮತ್ತೊಂದು ಪದಕ.. ಶೂಟಿಂಗ್‌ನಲ್ಲಿ ಸ್ವಪ್ನಿಲ್ ಕುಸಾಲೆಗೆ ಕಂಚು

author-image
Gopal Kulkarni
Updated On
Paris Olympics: ಭಾರತಕ್ಕೆ ಮತ್ತೊಂದು ಪದಕ.. ಶೂಟಿಂಗ್‌ನಲ್ಲಿ ಸ್ವಪ್ನಿಲ್ ಕುಸಾಲೆಗೆ ಕಂಚು
Advertisment
  • ಪ್ಯಾರಿಸ್ ಒಲಿಂಪಿಕ್ಸ್​​ನಲ್ಲಿ ಭಾರತಕ್ಕೆ ಮುಕುಟಕ್ಕೆ ಮತ್ತೊಂದು ಗರಿ
  • 50 ಮೀಟರ್​ ರೈಫಲ್​ ಶೂಟಿಂಗ್​​ನಲ್ಲಿ ಕಂಚಿನ ಪದಕ ಗೆದ್ದ ಸ್ವಪ್ನಿಲ್
  • ಭಾರತಕ್ಕೆ ಒಟ್ಟು ಮೂರು ಕಂಚಿನ ಪದಕ ತಂದು ಕೊಟ್ಟ ಕ್ರೀಡಾಪಟುಗಳು

ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಭಾರತೀಯ ಕ್ರೀಡಾಪಟುಗಳ ಪದಕ ಬೇಟೆ ಮುಂದುವರಿದಿದೆ. ಈಗಾಗಲೇ 10 ಮೀಟರ್ ಪಿಸ್ತೂಲ್​ ಶೂಟಿಂಗ್​ನಲ್ಲಿ ಎರಡು ಕಂಚು ಗೆದ್ದಿರುವ ಭಾರತ, ಈಗ 50 ಮೀಟರ್ ರೈಫಲ್ ಶೂಟಿಂಗ್​ ಸ್ಪರ್ಧೆಯಲ್ಲಿ ಕಂಚನ್ನು ಗೆದ್ದು ಇತಿಹಾಸ ನಿರ್ಮಿಸಿದೆ.ಈ ಮೂಲಕ 50 ಮೀಟರ್​ ರೈಫಲ್ ವಿಭಾಗದಲ್ಲಿ ಪದಕ ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಕುಸಾಲೆ ಪಾತ್ರರಾಗಿದ್ದಾರೆ. ಈ ಪಂದ್ಯದಲ್ಲಿ ಕುಸಾಲೆ ಮಾಡಿದ ಒಟ್ಟು ಸ್ಕೋರ್​ 451.4. ಈ ಮೊದಲು ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಮನು ಬಾಕರ್ 10 ಮೀಟರ್ ಪಿಸ್ತೂಲ್ ವಿಭಾಗದಲ್ಲಿ ಕಂಚು ಗೆದ್ದಿದ್ದರು. ಟೀಮ್ ಇವೆಂಟ್​ನಲ್ಲಿ ಸರಜೋತ್ ಸಿಂಗ್ ಜೊತೆ ಸೇರಿ ಇದೇ ಮನು ಬಾಕರ್ ಮತ್ತೊಂದು ಕಂಚನ್ನು ಭಾರತದ ಮುಡಿಗೇರಿಸಿದ್ದರು. ಈಗ ರೈಫಲ್ ಶೂಟಿಂಗ್ ವಿಭಾಗದಲ್ಲಿ ಸ್ವಪ್ನಿಲ್ ಕುಸಾಲೆ ಮತ್ತೊಂದು ಕಂಚಿನ ಪದಕ ಗೆಲ್ಲುವುದರ ಮೂಲಕ ಭಾರತಕ್ಕೆ ಒಟ್ಟು ಮೂರು ಕಂಚಿನ ಪದಕ ಬರುವಂತೆ ಮಾಡಿದ್ದಾರೆ

ಸ್ವಪ್ನಿಲ್ ಕುಸಾಲೆ ಆಗಸ್ಟ್​ 6 1995ರಲ್ಲಿ ಪುಣೆಯಲ್ಲಿ ಜನಿಸಿದರು. ಪ್ಯಾರಿಸ್ ಒಲಿಂಪಿಕ್ಸ್​ ಮೂಲಕವೇ ಶೂಟಿಂಗ್​ ವಿಭಾಗದಲ್ಲಿ ಒಲಿಂಪಿಕ್ಸ್ ಅಂಗಳಕ್ಕೆ ಎಂಟ್ರಿಯಾಗಿದೆ. 2022ರಲ್ಲಿ ನಡೆದ ವಿಶ್ವ ಚಾಂಪಿಯನ್​ಶಿಪ್​​ನ 50 ಮೀಟರ್​ ರೈಫಲ್​ ನಲ್ಲಿ ಮೂರನೇ ಸ್ಥಾನ ಪಡೆಯುವ ಮೂಲಕ ಎಲ್ಲರ ಗಮನ ಸೆಳೆದಿದ್ರು. 2023ರಲ್ಲಿ ನಡೆದ ಏಷಿಯನ್ ಗೇಮ್ಸ್​ನಲ್ಲಿ ಟೀಮ್ ಇವೆಂಟ್​​ನಲ್ಲಿ ಕುಸಾಲೆ 50 ಮೀಟರ್ ರೈಫಲ್​ನಲ್ಲಿ 3ನೇ ಸ್ಥಾನ ಪಡಿದಿದ್ದರು. ಇಷ್ಟು ಮಾತ್ರವಲ್ಲ ಕುಸಾಲೆ 2023ರಲ್ಲಿ ನಡೆದ ವಲ್ಡ್​​ಕಪ್​ನಲ್ಲಿ ಮೂರು ಬಾರಿ ಪದಕಗಳನ್ನು ಗೆದ್ದಿದ್ದಾರೆ. ಒಂದು ಚಿನ್ನದ ಪದಕ ಹಾಗೂ ಎರಡು ಬೆಳ್ಳಿಯ ಪದಕ ಗೆದ್ದುಕೊಂಡಿದ್ದಾರೆ. ಬಾಕು, ಅಜೆರ್ಬೈಜನ್ ನಲ್ಲಿ ನಡೆದ ವಿಶ್ವಕಪ್​ನ್ಲಿ ಒಂದು ಚಿನ್ನ ಹಾಗೂ ಎರಡು ಬೆಳ್ಳಿ ಪದಕ ಗೆದ್ದುಕೊಂಡಿದ್ದರು.

ಇದನ್ನೂ ಓದಿ:ಕೊಲಂಬೋದಲ್ಲಿ ಕೊಹ್ಲಿಗೆ ಮತ್ತೆ ಅವಮಾನ.. ಅಭ್ಯಾಸದ ವೇಳೆ ಕೆಣಕಿದ ಫ್ಯಾನ್; ವಿರಾಟ ದರ್ಶನ ಫಿಕ್ಸ್‌!

ಪ್ಯಾರಿಸ್​ನಲ್ಲಿ ಭಾರತವನ್ನು ಪ್ರತಿನಿಧಿಸಿದ ಸ್ವಪ್ನಿಲ್ ಕುಸಾಲೆ 451.4 ಪಾಯಿಂಟ್​ಗಳೊಂದಿಗೆ ಕಂಚಿನ ಪದಕ ತಮ್ಮ ಕೊರಳಿಗೇರಿಸಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment