/newsfirstlive-kannada/media/post_attachments/wp-content/uploads/2024/05/Swapnil-Singh1.jpg)
2ನೇ ದಿನದ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಮ್ ಅನ್ಕ್ಯಾಪ್ಟ್ ಆಲ್ರೌಂಡರ್ ಸ್ವಪ್ನಿಲ್ ಸಿಂಗ್ ಅವರನ್ನು ಖರೀದಿ ಮಾಡಿದೆ. ಆರ್ಟಿಎಂ ಕಾರ್ಡ್ ಬಳಸುವ ಮೂಲಕ 50 ಲಕ್ಷಕ್ಕೆ ಖರೀದಿ ಮಾಡಿರುವುದು ವಿಶೇಷ.
ಮೊದಲು ಆರ್ಸಿಬಿ ತಂಡವೇ ಸ್ವಪ್ನಿಲ್ ಸಿಂಗ್ ಅವರನ್ನು ಬೇಸ್ ಪ್ರೈಸ್ 30 ಲಕ್ಷಕ್ಕೆ ಬಿಡ್ ಮಾಡಿತು. ನಂತರ ಡೆಲ್ಲಿ ಕ್ಯಾಪಿಟಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಧ್ಯೆ ಸ್ವಪ್ನಿಲ್ ಸಿಂಗ್ಗಾಗಿ ಪೈಪೋಟಿ ನಡೆಯಿತು. ಕೊನೆಗೆ 50 ಲಕ್ಷಕ್ಕೆ ಸ್ವಪ್ನಿಲ್ ಸಿಂಗ್ ಆರ್ಸಿಬಿ ಸೇರಿದ್ರು.
ಆರ್ಸಿಬಿ ಪಾಲಿನ ಅದೃಷ್ಟವಂತ
ಈತ ಆರ್ಸಿಬಿ ಪಾಲಿನ ಅದೃಷ್ಟವಂತ.. ಈತ ತಂಡಕ್ಕೆ ಎಂಟ್ರಿಕೊಟ್ಟಿದ್ದೇ, ಕೊಟ್ಟಿದ್ದು ಆರ್ಸಿಬಿ ಸೋಲು ಅನ್ನೋದನ್ನೇ ನೋಡಿಲ್ಲ. ಕಳೆದ ಸೀಸನ್ನಲ್ಲಿ ಸತತ 7 ಪಂದ್ಯಗಳ ದಿಗ್ವಿಜಯದ ಹಿಂದೆ ಈ ಲಕ್ಕಿಮ್ಯಾನ್ ಶ್ರಮ ಅಪಾರ. ಇವರು ಯಾರು ಅಲ್ಲ RCBಯ ನಯಾ ಸೆನ್ಸೇಷನ್ ಸ್ವಪ್ನಿಲ್ ಸಿಂಗ್ ಬಗ್ಗೆ. ಆರ್ಸಿಬಿ ಪಾಲಿನ ಅದೃಷ್ಟವಂತನಾಗಿರೋ ಈತ ಬಹುತೇಕರಿಗೆ ಯಾರು ಅಂತಾನೇ ಗೊತ್ತಿಲ್ಲ. ಈತನ ಕ್ರಿಕೆಟ್ ಜರ್ನಿ ನಿಜಕ್ಕೂ ರೋಚಕ. ಯುವ ಕ್ರಿಕೆಟಿಗರ ಪಾಲಿಗಂತೂ ಈತನ ಕಥೆ ಸ್ಫೂರ್ತಿಯ ಚಿಲುಮೆ.
ಸ್ವಪ್ನಿಲ್ ಸಿಂಗ್.. ಐಪಿಎಲ್ ಮಿನಿ ಆಕ್ಷನ್ನಲ್ಲಿ ಈ ಸ್ಪಿನ್ನರ್ನ ಆರ್ಸಿಬಿ ಖರೀದಿಸಿದಾಗ ಹೆಚ್ಚು ಚರ್ಚೆಯಾಗದ ಹೆಸರಿದು. ಯಾರೋ ಒಬ್ಬ ಪ್ಲೇಯರ್ ಎಂದು NEGLECT ಮಾಡಿದವರೇ ಹೆಚ್ಚು. ಇಂದು ಈತನೇ ಸೆನ್ಸೇಷನ್. ಆರ್ಸಿಬಿ ಪಾಲಿನ ಅದೃಷ್ಟವಂತನಾಗಿದ್ದಾನೆ. ಈತ ಆಡಿದ ಎಲ್ಲಾ ಪಂದ್ಯಗಳಲ್ಲಿ ತಂಡವೂ ಜಯ ಸಾಧಿಸಿದೆ. ಸಿಕ್ಕ ಚಾನ್ಸ್ನಲ್ಲಿ ಸ್ವಪ್ನಿಲ್ ಕೂಡ ಭರ್ಜರಿ ಪರ್ಫಾಮೆನ್ಸ್ ನೀಡಿದ್ರು. ಹರಾಜಿಗೆ ಮುನ್ನ ಕೈ ಬಿಟ್ಟಿದ್ದ ಆರ್ಸಿಬಿ ಈಗ ಮಣೆ ಹಾಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ