newsfirstkannada.com

ಜೇನಿಗೆ ತೊಂದ್ರೆ ಕೊಟ್ಟ ಮದುವೆ ಸಮಾರಂಭ.. ರೊಚ್ಚಿಗೆದ್ದ ಹುಳಗಳಿಂದ 12 ಮಂದಿ ಗಂಭೀರ

Share :

Published February 20, 2024 at 8:27am

    ಕೆಲವು ಅತಿಥಿಗಳಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗ್ತಿದೆ

    ಕ್ಷಣಾರ್ಧದಲ್ಲೇ ಮದ್ವೆ ಸಂಭ್ರಮ ಖುಷಿ ಮಂಗಮಾಯ

    ಡೆಡ್ಲಿ ಅಟ್ಯಾಕ್​ಗೆ ಮದುವೆ ಮಂಟಪ ಅಸ್ತವ್ಯಸ್ತ

ಅದ್ದೂರಿಯಾಗಿ ನಡೆಯುತ್ತಿದ್ದ ಮದುವೆ ಸಮಾರಂಭಕ್ಕೆ ಕರೆಯದೇ ಬಂದ ಅತಿಥಿಗಳಿಂದ ಸಂಭ್ರಮವೇ ಮಾಯವಾಗಿದೆ. ವಧು ವರರು ಸೇರಿದಂತೆ ಕುಟುಂಬಸ್ಥರು ಕಲ್ಯಾಣೋತ್ಸವದಲ್ಲಿ ಮುಳುಗಿದ್ದಾಗ ಎಂಟ್ರಿ ಕೊಟ್ಟ ಜೇನುನೊಣಗಳು ಎಲ್ಲವನ್ನೂ ಅದ್ವಾನ ಮಾಡಿವೆ. ಹೌದು, ಮದುವೆ ಸಮಾರಂಭದ ಸಂಭ್ರಮ ಕ್ಷಣದಲ್ಲಿ ಮಾಯವಾದ ಘಟನೆ ಮಧ್ಯಪ್ರದೇಶ ಗುನಾದಲ್ಲಿ ನಡೆದಿದೆ. ಮದುವೆಗಾಗಿ ಆಗಮಿಸಿದ್ದ ಅತಿಥಿಗಳು ದಿಢೀರ್​ ಅಂತ ದಿಕ್ಕಾಪಾಲಾಗಿ ಓಡಲು ಆರಂಭಿಸಿದ್ದಾರೆ.

ಮದುವೆ ಮನೆಗೆ ಜೇನುನೊಣಗಳು
ಗುನಾ ನಿವಾಸಿಗಳಾದ ವಧು ಹಾಗೂ ವರ ಕುಟುಂಬಸ್ಥರು ಮದುವೆಗಾಗಿ ಮಂಟಪ ಬುಕ್ ಮಾಡಿದ್ದಾರೆ. ಮಂಟಪ ಪರಿಶೀಲಿಸಿದ ಬಳಿಕ ಕುಟುಂಬಸ್ಥರು ಚೌಲ್ಟ್ರಿ ಸಿಬ್ಬಂದಿ ಬಳಿ ಜೇನು ನೊಣ ಗೂಡು ಕಟ್ಟಿರುವ ಕುರಿತು ಮಾಹಿತಿ ನೀಡಿದ್ದಾರೆ. ಆದ್ರೆ ಮಂಟಪ ಸಿಬ್ಬಂದಿ ಹಾಗೂ ಮಾಲೀಕರು ಜೇನು ಗೂಡಿನ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ. ಮದುವೆ ದಿನ ಬಂದ ಅತಿಥಿಗಳ ಮೇಲೆ ಜೇನು ನೊಣಗಳು ದಾಳಿ ನಡೆಸಿವೆ. ಹೀಗೆ ಜೇನು ನೊಣ ದಾಳಿ ನಡೆಸುತ್ತಿದ್ದಂತೆ ಅತಿಥಿಗಳು ದಿಕ್ಕಾಪಾಲಾಗಿ ಓಡಿದ್ದಾರೆ.

ನವ ಜೋಡಿಗಳಿಗೆ ಏನಾಗುತ್ತಿದೆ ಎಂದು ಅರಿವಾಗುವಷ್ಟರಲ್ಲೇ ಜೇನು ನೊಣಗಳು ದಾಳಿ ನಡೆಸಿದ್ದವು. ದಾಳಿಯಿಂದ ಹಲವರಿಗೆ ಗಾಯವಾಗಿದ್ದು ಇಬ್ಬರ ಪರಿಸ್ಥಿತಿ ಗಂಭೀರವಾಗಿದ್ದು ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಕೆಲವರು ಓಡುವ ಭರದಲ್ಲಿ ಬಿದ್ದು ಗಾಯ ಮಾಡಿಕೊಂಡಿದ್ದು 12 ಮಂದಿಯನ್ನು ಆಸ್ಪತ್ರೆ ದಾಖಲಿಸಲಾಗಿದೆ.

ಒಟ್ಟಾರೆ ಮದುವೆ ಸಂಭ್ರಮದಲ್ಲಿದ್ದವರ ಮೇಲೆ ಜೇನುನೊಣ ದಾಳಿ ನಡೆಸಿ ಸಂಭ್ರಮವನ್ನು ಕಸಿದುಕೊಂಡಿವೆ. ಸದ್ಯ ಜೇನುನೊಣಗಳಿಂದ ಗಂಭೀರವಾಗಿ ಕಡಿತಕ್ಕೊಳಗಾದ 12 ಮಂದಿಯನ್ನು ಆಸ್ಪತ್ರೆ ದಾಖಲಿಸಲಾಗಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜೇನಿಗೆ ತೊಂದ್ರೆ ಕೊಟ್ಟ ಮದುವೆ ಸಮಾರಂಭ.. ರೊಚ್ಚಿಗೆದ್ದ ಹುಳಗಳಿಂದ 12 ಮಂದಿ ಗಂಭೀರ

https://newsfirstlive.com/wp-content/uploads/2024/02/HONEY.jpg

Load More