/newsfirstlive-kannada/media/post_attachments/wp-content/uploads/2024/09/Chris-Gayle_Kohli.jpg)
ಬಹುನಿರೀಕ್ಷಿತ 2025ರ ಇಂಡಿಯನ್​ ಪ್ರೀಮಿಯರ್​​ 18ನೇ ಸೀಸನ್​ ಶುರುವಾಗಲು ಇನ್ನೇನು ಕೇವಲ 2 ದಿನಗಳು ಮಾತ್ರ ಬಾಕಿ ಇವೆ. ಹೇಗಾದ್ರೂ ಮಾಡಿ ಈ ಸಲ ಕಪ್​ ಗೆಲ್ಲಲೇಬೇಕು ಎಂದು ರಾಯಲ್​​ ಚಾಲೆಂಜರ್ಸ್​ ಬೆಂಗಳೂರು ತಂಡ ಮುಂದಾಗಿದೆ. ಇದರ ಮಧ್ಯೆ ಕ್ರಿಸ್​​ ಗೇಲ್​ ಅವರನ್ನೇ ಮೀರಿಸೋ ಅಪಾಯಕಾರಿ ಬ್ಯಾಟರ್​ ಆರ್​​ಸಿಬಿಗೆ ಎಂಟ್ರಿ ನೀಡಿದ್ದಾರೆ.
ಆರ್​​​ಸಿಬಿ ತಂಡದ ಯುವ ಬ್ಯಾಟರ್​​. ಇವರು ದ್ವಿಶತಕ ಹೊಡೆಯಲಿಲ್ಲ, ತ್ರಿಶತಕ ಗಳಿಸಲಿಲ್ಲ. ಆದರೆ, ಕೇವಲ ಒಂದೇ ಇನ್ನಿಂಗ್ಸ್​ನಲ್ಲಿ 585 ರನ್ ಗಳಿಸಿ ಎಲ್ಲಾ ದಾಖಲೆ ಬ್ರೇಕ್​ ಮಾಡಿದ್ದಾರೆ. ಇವರು ವೆಸ್ಟ್​ ಇಂಡೀಸ್​​ ದಿಗ್ಗಜ ಕ್ರಿಸ್​ ಗೇಲ್​ ಅವರನ್ನೇ ಮೀರಿಸೋ ಡೇಂಜರಸ್​ ಬ್ಯಾಟರ್​​ ಆಗಿದ್ದಾರೆ.
ಯಾರು ಈ ಯುವ ಬ್ಯಾಟರ್​​?
ಇನ್ನು, ಬೆಂಗಳೂರು ತಂಡದಲ್ಲಿರೋ ಈ ಯುವ ಬ್ಯಾಟರ್​ ಮತ್ಯಾರು ಅಲ್ಲ, ಬದಲಿಗೆ 19 ವರ್ಷದ ಸ್ವಸ್ತಿಕ್ ಚಿಕಾರ. ಐಪಿಎಲ್ ಮೆಗಾ ಹರಾಜಿನಲ್ಲಿ RCB ಫ್ರಾಂಚೈಸಿ ಸ್ವಸ್ತಿಕ್ ಚಿಕಾರ ಅವರನ್ನು 30 ಲಕ್ಷ ರೂ. ಬೇಸ್​ ಪ್ರೈಸ್​ ನೀಡಿ ಖರೀದಿಸಿತ್ತು.
/newsfirstlive-kannada/media/post_attachments/wp-content/uploads/2025/03/Swastik-Chikara.jpg)
585 ರನ್​ಗಳ ದೊಡ್ಡ ಇನ್ನಿಂಗ್ಸ್​​
ಸ್ವಸ್ತಿಕ್ ಚಿಕಾರ ತನ್ನ 14ನೇ ವಯಸ್ಸಿನಲ್ಲೇ 585 ರನ್‌ಗಳ ದೊಡ್ಡ ಇನ್ನಿಂಗ್ಸ್​ ಆಡಿ ಭಾರೀ ಸದ್ದು ಮಾಡಿದ್ದರು. 2019 ರಲ್ಲಿ ಗೋರಖ್‌ಪುರದ ಮಹಿ ಕ್ರಿಕೆಟ್ ಅಕಾಡೆಮಿ ಮತ್ತು ಎಸಿಇ ಕ್ರಿಕೆಟ್ ಅಕಾಡೆಮಿ ನಡೆದ 40 ಓವರ್​ಗಳ ಪಂದ್ಯದಲ್ಲಿ ಸ್ವಸ್ತಿಕ್ ಅಮೋಘ ಬ್ಯಾಟಿಂಗ್ ಮಾಡಿದ್ರು. ಮಹಿ ಕ್ರಿಕೆಟ್ ಅಕಾಡೆಮಿ ಪರ ಕಣಕ್ಕಿಳಿದಿದ್ದ ಇವರು ಕೇವಲ 167 ಎಸೆತಗಳಲ್ಲಿ 52 ಸಿಕ್ಸರ್ ಮತ್ತು 55 ಫೋರ್​ ಚಚ್ಚಿ 585 ರನ್​​​ ಬಾರಿಸಿದ್ದರು.
ಇದನ್ನೂ ಓದಿ:ಅಯ್ಯೋ! ಇದೇನಿದು ಬಾಂಬೆ ಬ್ಲಡ್​ ಗ್ರೂಪ್; ಈ ಅಪರೂಪದ ರಕ್ತ ಯಾರಲ್ಲಿ ಇರುತ್ತೆ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us