/newsfirstlive-kannada/media/post_attachments/wp-content/uploads/2025/07/SWEET_CORN.jpg)
ಮೆಕ್ಕೆಜೋಳ ಅಥವಾ ಸ್ವೀಟ್ ಕಾರ್ನ್​ ಹೆಸರಿಗೆ ತಕ್ಕಂತೆ ಸಿಹಿಯಾಗಿ, ರುಚಿಕರವಾಗಿರುತ್ತದೆ. ಇದು ರುಚಿಕರವಾಗಿರುವುದು ಅಲ್ಲದೇ ಇದು ನಮ್ಮ ಆರೋಗ್ಯಕ್ಕೆ ಎಷ್ಟೋ ಅದ್ಭುತವಾದ ಪ್ರಯೋಜನಾವಾಗಿದೆ. ಒಂದು ಮಾತಲ್ಲಿ ಹೇಳಬೇಕು ಎಂದರೆ ಮೆಕ್ಕೆಜೋಳ ಪೋಷಕಾಂಶಗಳ ಗಣಿ ಎಂದೇ ಹೇಳಬಹುದು. ಇದರಲ್ಲಿ ಇರುವ ಜೋಳ ನಮ್ಮ ಜೀರ್ಣಕ್ರಿಯೆಯಿಂದ ಕ್ಯಾನ್ಸರ್​ ನಿವಾರಣೆ ಸೇರಿದಂತೆ ಅನೇಕ ಕಾಯಿಲೆಗಳನ್ನ ದೂರ ಮಾಡುತ್ತದೆ.
/newsfirstlive-kannada/media/post_attachments/wp-content/uploads/2025/07/SWEET_CORNS.jpg)
ರುಚಿಕರವಾಗಿರುವ ಮೆಕ್ಕೆಜೋಳದಲ್ಲಿ ಮೆಗ್ನೀಷಿಯಂ, ಐರನ್, ಕಾಪರ್, ಜಿಂಕ್​​ನಂತಹ ಅತ್ಯುತ್ತಮವಾದ ಪೋಷಕಾಂಶಗಳು ಹೇರಳವಾಗಿ ಇರುತ್ತವೆ. ಇವು ದೇಹದಲ್ಲಿ ಚಯಾಪಚಯ (Metabolism) ಕ್ರಿಯೆಯನ್ನ ಸರಾಗವಾಗಿ ನಡೆಯುವಂತೆ ಸಹಾಯ ಮಾಡುತ್ತವೆ. ಸ್ವೀಟ್​ ಕಾರ್ನ್​ನಲ್ಲಿ ಅತಿ ಹೆಚ್ಚು ಫೈಬರ್​ ಅಂಶ ಇರುವುದರಿಂದ ಜೀರ್ಣಕ್ರಿಯೆಯನ್ನು ವೇಗಗೊಳಿಸುತ್ತದೆ. ಇದರಿಂದ ಮಲಬದ್ಧತೆ ಸಮಸ್ಯೆ ನಿವಾರಣೆ ಆಗುತ್ತದೆ.
ಮೆಕ್ಕೆಜೋಳದಲ್ಲಿರುವ ಪೋಷಕಾಂಶಗಳು ನಮ್ಮ ರೋಗನಿರೋಧಕ ಶಕ್ತಿಯನ್ನು ಇನ್ನಷ್ಟು ಬಲಗೊಳಿಸಿ ಅನೇಕ ರೋಗಗಳಿಂದ ದೇಹವನ್ನು ರಕ್ಷಣೆ ಮಾಡುತ್ತದೆ. ಮೂಳೆ ಬಲವಾಗಲು, ಕಿಡ್ನಿ ಆರೋಗ್ಯಕ್ಕೆ ಹಾಗೂ ಹೃದಯ ಯಾವುದೇ ಸಮಸ್ಯೆ ಇಲ್ಲದೇ ಕೆಲಸ ಮಾಡಲು ಮೆಕ್ಕೆಜೋಳದಲ್ಲಿನ ಅಂಶಗಳು ಅತ್ಯಂತ ಸಹಾಯಕವಾಗಿವೆ. ಇನ್ನು ದೇಹ ಸ್ವಲ್ಪ ದಪ್ಪವಾಗಲಿ ಎನ್ನುವವರಿಗೆ ಮೆಕ್ಕೆಜೋಳ ಅದ್ಭುತವಾದ ಆಯ್ಕೆ ಎಂದು ಹೇಳಬಹುದು.
ಒಂದು ಕಪ್ ಸ್ವೀಟ್​ಕಾರ್ನ್​ನಲ್ಲಿ ಸುಮಾರು 342 ಕ್ಯಾಲರಿ ಇರುತ್ತದೆ. ಇದು ಆರೋಗ್ಯಕರವಾಗಿ ದೇಹದ ತೂಕ ಹೆಚ್ಚಾಗಲು ಸಹಾಯ ಮಾಡುತ್ತದೆ. ಇದರಲ್ಲಿನ ಆಂಟಿಆಕ್ಸಿಡೆಂಟ್​ಗಳು (Antioxidants) ಕೆಲವು ರೀತಿಯ ಕ್ಯಾನ್ಸರ್​ಗಳನ್ನ ತಡೆಯಲು ಸಹಾಯ ಮಾಡುತ್ತವೆ. ಮುಖ್ಯವಾಗಿ ಕರುಳಿನ ಕ್ಯಾನ್ಸರ್​ ತಡೆಯುವಲ್ಲಿ ಮೆಕ್ಕೆಜೋಳ ಮುಖ್ಯವಾದ ಪಾತ್ರವಹಿಸುತ್ತದೆ.
/newsfirstlive-kannada/media/post_attachments/wp-content/uploads/2025/07/SWEET_CORN_New.jpg)
ಡಯಾಬಿಟಿಸ್ ಅಥವಾ ಮಧುಮೇಹ ಇರುವಂತವರು ಮೆಕ್ಕೆಜೋಳವನ್ನು ಮಿತವಾಗಿ ತಿನ್ನುವುದರಿಂದ ಆರೋಗ್ಯ ಪ್ರಯೋಜನ ಪಡೆಯಬಹುದು. ಇದರಲ್ಲಿರುವ ಫೈಟೋಕೆಮಿಕಲ್ಸ್​ (Phytochemicals) ರಕ್ತದಲ್ಲಿರುವ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ. ಇದರಿಂದ ಆಗಾಗ ಮೆಕ್ಕೆಜೋಳ ತಿನ್ನುವುದರಿಂದ ಆರೋಗ್ಯವನ್ನ ವೃದ್ಧಿಸಿಕೊಳ್ಳಬಹುದು. ಕಾಯಿಲೆಗಳಿಂದ ದೂರ ಇರಬಹುದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us