/newsfirstlive-kannada/media/post_attachments/wp-content/uploads/2025/06/KLR_ACCIDENT_2.jpg)
ಕೋಲಾರ: ಕೆಜಿಎಫ್​ ತಾಲೂಕಿನ ಕೃಷ್ಣಾವರಂ ಬಳಿ ಚೆನ್ನೈ- ಬೆಂಗಳೂರು ಎಕ್ಸ್​ಪ್ರೆಸ್​​ ಕಾರಿಡಾರ್​ ಹೈವೇ ಸಂಪರ್ಕ ರಸ್ತೆಯಲ್ಲಿ ಅಪಘಾತ ಸಂಭವಿಸಿದ್ದು ಸ್ಥಳದಲ್ಲೇ ಇಬ್ಬರು ಜೀವ ಕಳೆದುಕೊಂಡಿದ್ದಾರೆ.
/newsfirstlive-kannada/media/post_attachments/wp-content/uploads/2025/06/KLR_ACCIDENT.jpg)
ಕೃಷ್ಣಾವರಂ ಗ್ರಾಮದ ಆಕಾಶ್​ (33) ಹಾಗೂ ಜಾನ್ ​(32) ಮೃತಪಟ್ಟವರು. ಕಾರಿನಲ್ಲಿ ಇದ್ದ ಇನ್ನು ಮೂವರು ಅಪ್ಪು, ತಮಿಳರಸನ್​ ಹಾಗೂ ನಾಗರಾಜು ಎಂಬುವರಿಗೆ ಗಂಭೀರವಾದ ಗಾಯಗಳು ಆಗಿವೆ. ಗಾಯಾಳುಗಳನ್ನು ತಕ್ಷಣ ಬೆಮೆಲ್​ ನಗರದ ಸಂಭ್ರಮ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
/newsfirstlive-kannada/media/post_attachments/wp-content/uploads/2025/06/KLR_ACCIDENT_1.jpg)
ಚೆನೈ ಬೆಂಗಳೂರು ಎಕ್ಸ್​ಪ್ರೆಸ್​​ ಕಾರಿಡಾರ್​ ಹೈವೇ ಸಂಪರ್ಕ ರಸ್ತೆ ಬಳಿ ಸ್ವಿಪ್ಟ್​ ಕಾರು ಡಿವೈಡರ್​ಗೆ ಭಯಾನಕವಾಗಿ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಕಾರಿನಲ್ಲಿದ್ದ ಐವರ ಪೈಕಿ ಇಬ್ಬರು ಸ್ಥಳದಲ್ಲೇ ಕಣ್ಮುಚ್ಚಿದ್ದಾರೆ. ಉಳಿದ ಮೂವರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಗುದ್ದಿದ ರಭಸಕ್ಕೆ ಕಾರು ಎಲ್ಲ ನಜ್ಜುಗುಜ್ಜಾಗಿದೆ. ಬೆಮೆಲ್​ ನಗರದ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us