newsfirstkannada.com

ಬೆಂಗಳೂರಿಗರೇ ಹುಷಾರ್, ಹುಷಾರ್​! ಹಗಲಲ್ಲಿ ಸ್ವಿಗ್ಗಿ ಡೆಲಿವರಿ, ರಾತ್ರಿ..

Share :

Published April 16, 2024 at 11:01am

    ಒಟ್ಟು 14 ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿ ಅರೆಸ್ಟ್

    ಸ್ವಿಗ್ಗಿ ಡೆಲಿವರಿ ವೇಳೆ ವಾಸ್ತವ ನೋಡಿಕೊಂಡು ಹೋಗ್ತಿದ್ದ

    ಬೈಯ್ಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬೆಂಗಳೂರು: ಹಗಲಿನಲ್ಲಿ ಸ್ವಿಗ್ಗಿ ಡೆಲಿವರಿ, ರಾತ್ರಿ ವೇಳೆ ಬೈಕ್ ಕಳ್ಳತನ ಮಾಡುತ್ತಿದ್ದ ನಟೋರಿಯಸ್ ಬೈಕ್ ಕಳ್ಳನನ್ನು ಭೈಯಪ್ಪನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ದೀಪಕ್ ಅಲಿಯಾಸ್ ದೀಪು ಬಂಧಿತ ಆರೋಪಿ.

ಇದನ್ನೂ ಓದಿ: ಸಲ್ಮಾನ್ ಖಾನ್ ಮನೆ ಮೇಲೆ ಗುಂಡಿನ ದಾಳಿ; ಭಯಾನಕ ಕ್ರಿಮಿನಲ್​​, ಶೂಟರ್​ ವಿಶಾಲ್ ಅಲಿಯಾಸ್ ಕಾಲು ಯಾರು?

ಸ್ವಿಗ್ಗಿ ಡೆಲಿವರಿ ಬಾಯ್ ಮೇಲೆ ವಿವಿಧ ಪೊಲೀಸ್ ಠಾಣೆಯಲ್ಲಿ ಒಟ್ಟು 14 ಪ್ರಕರಣ ದಾಖಲಾಗಿವೆ. ಮೂರು ಲಕ್ಷ ಮೌಲ್ಯದ ಐದು ಬೈಕ್ ಗಳನ್ನೂ ವಶಕ್ಕೆ ಪಡೆದಿದ್ದಾರೆ. ಬೆಳಗಿನಿಂದ ಸಂಜೆವರೆಗೂ ಸ್ವಿಗ್ಗಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಈತ, ರಾತ್ರಿ ವೇಳೆ ಮನೆ ಮುಂದೆ ನಿಲ್ಲಿಸಿದ ಬೈಕ್​ಗಳನ್ನು ಕದಿಯುತ್ತಿದ್ದ ಎಂದು ತಿಳಿದುಬಂದಿದೆ.

ಇದನ್ನೂ ಓದಿ:ಅಯ್ಯೋ ಪಾಪ.. 25 ದಿನಗಳಿಂದ ಅಮ್ಮನಿಗಾಗಿ ದುಃಖಿಸಿ, ದುಃಖಿಸಿ ಪ್ರಾಣಬಿಟ್ಟ ಮರಿಯಾನೆ

ಹಗಲಲ್ಲಿ ಬೈಕ್​ಗಳನ್ನು ನಿಲ್ಲಿಸಿರೋದನ್ನು ನೋಡಿಕೊಂಡು ಹೋಗುತ್ತಿದ್ದ. ಎಲ್ಲಿ ಸಿಸಿಟಿವಿ, ಜನ ಸಾಮಾನ್ಯರು ಹೆಚ್ಚಾಗಿ ಇರದ ಸ್ಥಳಗಳಲ್ಲಿ ನಿಲ್ಲಿಸಿಟ್ಟಿದ್ದ ಬೈಕ್​ಗಳನ್ನು ಎಗರಿಸುತ್ತಿದ್ದ. ಇನ್ನು ಕದ್ದಿರುವ ಬೈಕ್​ಗಳನ್ನು ಕೊನೆಗೆ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ. ಬೈಕ್​ಗೆ ಸಂಬಂಧಿಸಿದ ದಾಖಲಾತಿಗಳನ್ನು ಕೇಳಿದ್ರೆ, ಮುಂದೆ ಕೊಡ್ತೀನಿ ಎಂದು ಕಾಗೆ ಹಾರಿಸುತ್ತಿದ್ದ. ಆರೋಪಿ ವಿರುದ್ಧ ಬೈಯ್ಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ:ಆರ್​ಸಿಬಿಗೆ ಬಿಗ್ ಶಾಕ್; 2024ರ ಟೂರ್ನಿಯಿಂದಲೇ ಬ್ರೇಕ್ ತೆಗೆದುಕೊಂಡ ಸ್ಟಾರ್​​ ಆಲ್​​ರೌಂಡರ್​..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರಿಗರೇ ಹುಷಾರ್, ಹುಷಾರ್​! ಹಗಲಲ್ಲಿ ಸ್ವಿಗ್ಗಿ ಡೆಲಿವರಿ, ರಾತ್ರಿ..

https://newsfirstlive.com/wp-content/uploads/2024/04/BNG-TWO-WHEELER.jpg

Load More