/newsfirstlive-kannada/media/post_attachments/wp-content/uploads/2023/12/Swiggy.jpg)
ಜನಪ್ರಿಯ ಆನ್‌ಲೈನ್ ಡೆಲಿವರಿ ಅಪ್ಲಿಕೇಶನ್ ಸ್ವಿಗ್ಗಿ ಮಾರ್ಟ್ (Swiggy mart) ತನ್ನ ವಾರ್ಷಿಕ ವರದಿ ಬಿಡುಗಡೆ ಮಾಡಿದೆ. ಹೈದಾರಾಬಾದ್ ನಗರದಲ್ಲಿ ನಡೆದ ವಹಿವಾಟಿಗೆ ಸಂಬಂಧಿಸಿದ ವರದಿ ಇದಾಗಿದೆ.
ಹೈದರಾಬಾದ್ ನಗರದಲ್ಲಿ ವರ್ಷವಿಡೀ ಯಾವ ಆಹಾರ ಪದಾರ್ಥಗಳು ಮತ್ತು ಯಾವ ಉತ್ಪನ್ನಗಳನ್ನ ಹೆಚ್ಚು ಆರ್ಡರ್ ಮಾಡಿದ್ದಾರೆ ಎಂಬ ವಿವರಗಳು ಬಹಿರಂಗಗೊಂಡಿದೆ. ಮ್ಯಾಗಿಯಿಂದ ಹಾಲಿನ ಪ್ಯಾಕೆಟ್ ವರೆಗೆ.. ಕೊತ್ತಂಬರಿ ಸೊಪ್ಪಿನಿಂದ ಕಾಂಡೋಮ್ ವರೆಗೆ.. ಐಸ್ ಕ್ರೀಂನಿಂದ ಹಿಡಿದು ಒಳ ಉಡುಪು ಖರೀದಿಗೂ ಜನ ಸ್ವಿಗ್ಗಿಯನ್ನೇ ನೆಚ್ಚಿಕೊಂಡಿದ್ದಾರೆ ಅನ್ನೋದು ಸಾಬೀತಾಗಿದೆ.
ಇದನ್ನೂ ಓದಿ:IND vs AUS: ಸೇಡು ತೀರಿಸಿಕೊಂಡ ಬುಮ್ರಾ.. ಇವರ ಕೆಣಕಿ ಉಳಿದವರಿಲ್ಲ..
25 ಮಿಲಿಯನ್ ಮ್ಯಾಗಿ ಪ್ಯಾಕೆಟ್‌ಗಳಿಗೆ ಆರ್ಡರ್ ಮಾಡಿದ್ದಾರೆ. 2 ಕೋಟಿ ಚಿಪ್ಸ್ ಪ್ಯಾಕೆಟ್‌ಗಳಿಗೆ ಆರ್ಡರ್ ಮಾಡಿದ್ರೆ, 19 ಲಕ್ಷಕ್ಕೂ ಹೆಚ್ಚು ಹಾಲಿನ ಉತ್ಪನ್ನಗಳು ಆರ್ಡರ್ ಆಗಿದೆ. ಜೊತೆಗೆ ಟೊಮ್ಯಾಟೋ, ಈರುಳ್ಳಿ, ಕೊತ್ತಂಬರಿ ಸೊಪ್ಪು, ಹಸಿರು ಮೆಣಸಿನಕಾಯಿ ತರಕಾರಿಗಳನ್ನು ಆರ್ಡರ್ ಮಾಡಿದ್ದಾರೆ. ಕಾಂಡೋಮ್ಗಳಿಗಾಗಿ 2 ಲಕ್ಷ ಆರ್ಡರ್ ಬುಕ್ ಆಗಿದೆ. 18 ಸಾವಿರ ಒಳಉಡುಪಿಗಾಗಿ ಆರ್ಡರ್ ಬಂದಿದೆ ಎಂದು ಸ್ವಿಗ್ಗಿ ತಿಳಿಸಿದೆ.
ಇದನ್ನೂ ಓದಿ:BIGG BOSS; ಮನೆಯಲ್ಲಿ ಭಾವನಾತ್ಮಕ ಸಂಬಂಧ.. ಗಿಫ್ಟ್ ಕೊಡುವಾಗ ಕಣ್ಣೀರು ಹಾಕಿದ ಐಶ್ವರ್ಯ, ಚೈತ್ರಾ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ