/newsfirstlive-kannada/media/post_attachments/wp-content/uploads/2024/11/SWIGGY_1.jpg)
ನವದೆಹಲಿ: ಸ್ವಿಗ್ಗಿ ಡೆಲಿವರಿ ಬಾಯ್ಗಳು ಎಂದು ಯಾರನ್ನೂ ಕೇವಲವಾಗಿ ಕಾಣಬಾರದು. ಈಗಿನ ಕಾಲದಲ್ಲಿ ಯಾರು, ಯಾವಾಗ, ಹೇಗೆ ಹಣವಂತರಾಗುತ್ತಾರೆ ಎಂಬುದು ಊಹಿಸುವುದು ಅಸಾಧ್ಯ. ನಿತ್ಯ ನಮ್ಮ ಜೊತೆ ಇರುವ ಯುವಕನೇ ಶ್ರೀಮಂತನಾಗಿ ಮುಂದೆ ಬಂದರೆ ನಂಬಲು ಕೂಡ ಆಗುವುದಿಲ್ಲ. ಸದ್ಯ ಇಂತಹದ್ದೆ ಒಂದು ಸಂಗತಿ ನಡೆದಿದ್ದು, ಒಂದೇ ದಿನದಲ್ಲಿ ಒಬ್ಬರಲ್ಲ, ಇಬ್ಬರಲ್ಲ 500 ಸ್ವಿಗ್ಗಿ ಡೆಲಿವರಿ ಬಾಯ್ಗಳು ಕೋಟ್ಯಾಧಿಪತಿಗಳು ಆಗಿದ್ದಾರೆ.
ಸ್ವಿಗ್ಗಿ ಕಂಪನಿಯಲ್ಲಿ ಡೆಲಿವರಿ ಬಾಯ್ಗಳು ಆಗಿ ಕೆಲಸ ಮಾಡುತ್ತಿದ್ದ 500 ಡೆಲಿವರಿ ಬಾಯ್ಗಳಿಗೆ ತಲಾ 1 ಕೋಟಿ ರೂಪಾಯಿಗಳಂತೆ ಕಂಪನಿ ಷೇರುಗಳನ್ನು ನೀಡಿದೆ. ಇದರಿಂದಾಗಿ ಡೆಲಿವರಿ ಬಾಯ್ಸ್ ಒಂದೇ ದಿನದಲ್ಲಿ ಕೋಟ್ಯಾಧಿಪತಿಗಳು ಆಗಿದ್ದಾರೆ. ಎಂಪ್ಲಾಯ್ ಸ್ಟಾಕ್ ಆಪ್ಷನ್ ಯೋಜನೆ ಅಡಿ ಡೆಲಿವರಿ ಬಾಯ್ಸ್ಗೆ ತಲಾ 1 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನ ನೀಡಲಾಗಿದೆ. ಇದರಿಂದ ಡೆಲಿವರಿ ಬಾಯ್ಸ್ ಕೋಟ್ಯಾಧಿಪತಿಗಳಾಗಿದ್ದಾರೆ.
ಇದನ್ನೂ ಓದಿ:ನಗರದಲ್ಲಿ ಪೌರಕಾರ್ಮಿಕರ ನೇಮಕಾತಿಗೆ ಅರ್ಜಿ ಆಹ್ವಾನ.. ಇವರು ಮಾತ್ರ ಅಪ್ಲೇ ಮಾಡಬೇಕು
ಡೆಲಿವರಿ ಬಾಯ್ಸ್ಗೆ ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಷೇರು ನೀಡಲಾಗಿದೆ. ಇದರಿಂದ ಎಂಪ್ಲಾಯ್ ಸ್ಟಾಕ್ ಆಪ್ಷನ್ ಪ್ಲ್ಯಾನ್ ಪ್ರಕಾರ 500 ಡೆಲಿವರಿ ಬಾಯ್ಸ್ಗೆ 9,046 ಕೋಟಿ ರೂಪಾಯಿ ನೀಡಲಾಗಿದೆ. ಸ್ವಿಗ್ಗಿ ಕಂಪನಿ ಇಂದು ಷೇರುಪೇಟೆಯನ್ನು ಪ್ರವೇಶಿಸಿದ್ದು ಬಾಂಬೆ ಷೇರುಪೇಟೆಯಲ್ಲಿ ಸ್ವಿಗ್ಗಿ ಐಪಿಒ ಬಿಡುಗಡೆ ಮಾಡಲಾಗಿದೆ. ಸದ್ಯ ಬಿಎಸ್ಇ (ಬಾಂಬ್ ಸ್ಟಾಕ್ ಎಕ್ಸ್ಚೇಂಜ್) ನಲ್ಲಿ ಸ್ವಿಗ್ಗಿಯ ಐಪಿಒ ಷೇರುಗಳು 412 ರೂಪಾಯಿಗೆ ಮಾರಾಟ ಆಗುತ್ತಿವೆ.
ಇದನ್ನೂ ಓದಿ:ಚನ್ನಪಟ್ಟಣದಲ್ಲಿ ಅತಿ ಹೆಚ್ಚು ಮತದಾನ; ಗೆಲ್ಲೋ ಸಾಧ್ಯತೆ ಬಗ್ಗೆ ಯೋಗೇಶ್ವರ್, ನಿಖಿಲ್ ಕುಮಾರಸ್ವಾಮಿ ಏನಂದ್ರು?
1 ತಿಂಗಳ ಬಳಿಕ ಸ್ವಿಗ್ಗಿ ಉದ್ಯೋಗಿಗಳು ತಮ್ಮ ಪಾಲಿನ ಷೇರು ಮಾರಾಟ ಮಾಡಬಹುದಾಗಿದೆ. ಸ್ವಿಗ್ಗಿ ಕಂಪನಿಯಲ್ಲಿ 5 ಸಾವಿರ ಉದ್ಯೋಗಿಗಳಿದ್ದು ಇವರ ಪೈಕಿ ಶೇಕಡಾ 10ರಷ್ಟು ಜನರಿಗೆ ಷೇರುಗಳನ್ನು ನೀಡಲಾಗಿದೆ. ಮುಂದಿನ ದಿನಗಳಲ್ಲಿ 5,000 ಉದ್ಯೋಗಿಗಳು ಕೋಟ್ಯಾಧಿಪತಿಗಳಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಈ ಹಿಂದೆ ಅಂದರೆ 2021ರಲ್ಲಿ ಜೋಮೋಟೋ ಐಪಿಓ ಬಿಡುಗಡೆ ಮಾಡಿ 350 ಡೆಲಿವರಿ ಬಾಯ್ಸ್ಗೆ ಕೋಟಿ ಮೌಲ್ಯದ ಷೇರುಗಳನ್ನ ಹಂಚಿಕೆ ಮಾಡಿತ್ತು. ಇದೀಗ ಸ್ವಿಗ್ಗಿ ಕೂಡ ತಮ್ಮ ಸಿಬ್ಬಂದಿಗೆ ಷೇರುಗಳನ್ನ ಹಂಚಿಕೆ ಮಾಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ