/newsfirstlive-kannada/media/post_attachments/wp-content/uploads/2024/04/ATTACK.jpg)
ಆಸ್ಟ್ರೇಲಿಯಾ ಚೂರಿ ಇರಿಯುವಂತ ದುಷ್ಕರ್ಮಿಗಳ ಪಾಲಿನ ಸ್ವರ್ಗವಾಗುತ್ತಿದೆಯಾ ಅನ್ನೋ ಪ್ರಶ್ನೆ ಕಾಡುತ್ತಿದೆ. ಯಾಕಂದ್ರೆ ಅಲ್ಲಿ ಮೊನ್ನೆಯಷ್ಟೇ ಒಬ್ಬ ಸೈಕೋ 6 ಜನರ ಮೇಲೆ ಚೂರಿಯಿಂದ ಇರಿದು ಹತ್ಯೆಗೈದಿದ್ದ. ಈಗ ಮತ್ತೊಂದು ಬಾರಿ ಚೂರಿ ಇರಿತವಾಗಿದೆ.
ಆಸ್ಟ್ರೇಲಿಯಾದ ಸಿಡ್ನಿಯ ಪ್ರಮುಖ ನಗರ. ಆದ್ರೆ ಈ ನಗರ ಇತ್ತೀಚೆಗೆ ಕ್ರೈಮ್​ ಸ್ಟೋರಿಯ ತವರೂರು ಆಗೋಗಿದೆ. ಎಲ್ಲಿ ನೋಡಿದ್ರೂ ಹಂತಕರು ಕೈಯಲ್ಲಿ ಮಾರಕಾಸ್ತ್ರಗಳನ್ನು ಹಡಿದುಕೊಂಡು ಜನರ ಮೇಲೆ ಸಿಕ್ಕಸಿಕ್ಕಂತೆ ಅಟ್ಯಾಕ್ ಮಾಡ್ತಿದ್ದಾರೆ. ಮೊನ್ನೆಯಷ್ಟೇ ಆಗಂತುಕನೊಬ್ಬ ಶಾಪಿಂಗ್​ ಮಾಲ್​ನಲ್ಲಿ 6 ಜನರ ಮೇಲೆ ಚೂರಿಯಿಂದ ದಾಳಿ ಮಾಡಿ 6ಜನರನ್ನು ಹತ್ಯೆ ಮಾಡಿದ್ದ. ಈ ಬೆನ್ನಲ್ಲೇ ಮತ್ತೊಂದು ಭೀಕರ ದಾಳಿ ನಡೆದಿದೆ.
#BREAKING: The bishop is now reported to have non-life threatening injuries🚨
He will survive.
⚡️4 people have been injured in the mass stabbing attack at a church in Australia. https://t.co/KLN9okjchupic.twitter.com/IN8MiXKj7x— Global Dissident (@GlobalDiss) April 15, 2024
ಚರ್ಚ್‌ನಲ್ಲಿ ಧರ್ಮೋಪದೇಶ ವೇಳೆಯೇ ಬಿಷಪ್‌ಗೆ ಚೂರಿ ಇರಿದ ಪಾಪಿ
ಸಿಡ್ನಿಯ ವೆಸ್ಟ್‌ನಲ್ಲಿರುವ ವೇಕ್ಲಿಯಲ್ಲಿನ ಕ್ರೈಸ್ಟ್ ದಿ ಗುಡ್ ಶೆಫರ್ಡ್ ಚರ್ಚ್‌ನಲ್ಲಿ ಧರ್ಮೋಪದೇಶ ಮಾಡುತ್ತಿದ್ದ ಬಿಷಪ್ ಮರ್ ಮರಿ ಇಮ್ಯಾನುವೆಲ್ ಮೇಲೆಯೇ ದುಷ್ಕರ್ಮಿಯೊಬ್ಬ ಚೂರಿಯಿಂದ ದಾಳಿ ನಡೆಸಿದ್ದಾನೆ. ದಿಢೀರ್​ನೇ ನಡೆದ ಚೂರಿ ದಾಳಿಯಿಂದ ಎಲ್ಲರೂ ಬೆಚ್ಚಿಬಿದ್ದಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಇನ್ನೂ ಕೆಲವರ ಮೇಲೂ ದಾಳಿ ಮಾಡಿದ್ದಾನೆ.
ಓರ್ವ ಆರೋಪಿಯನ್ನು ಬಂಧಿಸಿ ತೀವ್ರ ವಿಚಾರಣೆ
ಇನ್ನು ಘಟನೆ ಸಂಬಂಧ ಓರ್ವನನ್ನು ಬಂಧಿಸಲಾಗಿದ್ದು, ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ಬಿಷಪ್ ತಮ್ಮ ಗಾಜಾ ಟೂರ್​ ಬಗ್ಗೆ ಮಾತಾಡಿದ್ದಕ್ಕೆ ಅವರ ಮೇಲೆ ದುಷ್ಕರ್ಮಿ ದಾಳಿ ಮಾಡಿದ್ದಾನೆ. ಸದ್ಯ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಇತರೆ ನಾಲ್ವರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಬಿಷಪ್ ಮೇಲೆ ಚೂರಿ ಇರಿತ ಖಂಡಿಸಿ ಕ್ರೈಸ್ತರ ಪ್ರತಿಭಟನೆ
ಇನ್ನು ಬಿಷಪ್ ಮೇಲೆ ಚೂರಿ ಇರಿತವನ್ನು ಖಂಡಿಸಿ ಸಾವಿರಾರು ಸಂಖ್ಯೆಯಲ್ಲಿ ಕ್ರೈಸ್ತರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ರು. ಪೊಲೀಸರು ಚರ್ಚ್​ನಲ್ಲಿ ಆರೋಪಿಯನ್ನು ಬಂಧಿಸಿದಾಗ ಅವನನ್ನು ನಮಗೊಪ್ಪಿಸಿ ಅಂತ 5 ಸಾವಿರಕ್ಕೂ ಅಧಿಕ ಜನರು ಆಕ್ರೋಶ ವ್ಯಕ್ತಪಡಿಸಿದ್ರು. ಮಾತ್ರವಲ್ಲದೇ ವಿವಿಧೆಡೆ ಪ್ರತಿಭಟನೆ ನಡೆಸಿದ್ರು. ಇದೇ ವೇಳೆ ಪೊಲೀಸ್ ಠಾಣೆ ಮೇಲೆ ಮುತ್ತಿಗೆ ಹಾಕಲು ಯತ್ನಿಸಿದ್ರು.
https://twitter.com/i/status/1779826707521786273
ಇದನ್ನೂ ಓದಿ: ಬಿಸಿಲಿನಲ್ಲಿ ಕಾಡುತ್ತಿವೆ ಸಾಲು ಸಾಲು ರೋಗಗಳು; ಬಿಬಿಎಂಪಿ ಆರೋಗ್ಯ ಇಲಾಖೆಯಿಂದ ಹೊಸ ಪ್ಲಾನ್​
ಸಿಡ್ನಿಯಲ್ಲಿ ಈ ಕೊಲೆ, ಚೂರಿ ಇರಿತ ಪ್ರಕರಣಗಳು ಹೆಚ್ಚಾಗುತ್ತಿವೆ. ಪೊಲೀಸರು ಈ ಬಗ್ಗೆ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us