ರೋಹಿತ್ ಇಲ್ಲದಿದ್ದರೂ ಬದಲಾಗಲಿಲ್ಲ ಹಣೆಬರಹ.. ಸಿಡ್ನಿ ಟೆಸ್ಟ್​ನಲ್ಲಿ ಭಾರತಕ್ಕೆ ಭಾರೀ ಹಿನ್ನೆಡೆ..!

author-image
Ganesh
Updated On
ರೋಹಿತ್ ಇಲ್ಲದಿದ್ದರೂ ಬದಲಾಗಲಿಲ್ಲ ಹಣೆಬರಹ.. ಸಿಡ್ನಿ ಟೆಸ್ಟ್​ನಲ್ಲಿ ಭಾರತಕ್ಕೆ ಭಾರೀ ಹಿನ್ನೆಡೆ..!
Advertisment
  • ಸಿಡ್ನಿಯಲ್ಲಿ ಆಸ್ಟ್ರೇಲಿಯಾ ಅಂತಿಮ ಟೆಸ್ಟ್ ಪಂದ್ಯ
  • ಟಾಸ್​ ಗೆದ್ದು ಬ್ಯಾಟ್​ ಆಯ್ಕೆ ಮಾಡಿರುವ ಭಾರತ
  • 72 ರನ್​ಗಳಿಗೆ 4 ವಿಕೆಟ್ ಕಳೆದುಕೊಂಡಿರುವ ಟೀಂ ಇಂಡಿಯಾ

ಮೆಲ್ಬೋರ್ನ್​ ಟೆಸ್ಟ್ ಸೋತ ನೋವಿನಲ್ಲಿರುವ ಟೀಂ ಇಂಡಿಯಾಗೆ ಸಿಡ್ನಿ ಪಂದ್ಯದಲ್ಲೂ ಹಿನ್ನೆಡೆ ಆಗಿದೆ. ಕ್ಯಾಪ್ಟನ್ ರೋಹಿತ್ ಶರ್ಮಾ ವಿಶ್ರಾಂತಿ ಪಡೆದಿರುವ ಹಿನ್ನೆಲೆಯಲ್ಲಿ ಬುಮ್ರಾ ತಂಡವನ್ನು ಮುನ್ನಡೆಸ್ತಿದ್ದಾರೆ. ಟಾಸ್​ ಗೆದ್ದ ಭಾರತ, ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.

72ಕ್ಕೆ 4 ವಿಕೆಟ್ ಡಮಾರ್..!

ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಟೀಂ ಇಂಡಿಯಾಗೆ ಆರಂಭಿಕ ಜೋಡಿ ಶಾಕ್ ಮೇಲೆ ಶಾಕ್ ನೀಡಿತು. ಕೆಎಲ್ ರಾಹುಲ್ ನಾಲ್ಕು ರನ್​ಗಳಿಸಿ ಪೆವಿಲಿಯನ್ ಸೇರಿದ್ರೆ, ಜೈಸ್ವಾಲ್ 10 ರನ್​ಗಳಿಸಿ ಆಟ ಮುಗಿಸಿದರು. ಈ ನಡುವೆ ಕೊಹ್ಲಿ ಹಾಗೂ ಗಿಲ್ ಕೊಂಚ ಚೇತರಿಕೆ ಆಟವಾಡಿದರು. ಆದರೆ ಅವರಿಬ್ಬರ ಆಟ ಹೆಚ್ಚು ಹೊತ್ತು ನಡೆಯಲಿಲ್ಲ. 64 ಬಾಲ್ ಎದುರಿಸಿ 20 ರನ್​ಗಳಿಸಿದ್ದ ಗಿಲ್, ಸ್ಮಿತ್​ಗೆ ಕ್ಯಾಚ್​ ನೀಡಿ ಹೊರ ಹೋದರು. ಬೆನ್ನಲ್ಲೇ ವಿರಾಟ್ ಕೊಹ್ಲಿ 17 ರನ್​ಗಳಿಸಿ ಪೆವಿಲಿಯನ್ ಸೇರಿದರು.

ಇದನ್ನೂ ಓದಿ:ಪ್ರೀತಿಯ ಅಪ್ಪ ತೀರಿಹೋದ.. ಕಣ್ಣೀರು ಹಾಕಲಿಲ್ಲ ಮುದ್ದಿನ ಮಗ.. ಸ್ಮಶಾನದಲ್ಲಿ DJ ಮ್ಯೂಸಿಕ್​ಗೆ ಡ್ಯಾನ್ಸ್..!

ಸದ್ಯ ಪಂತ್ ಹಾಗೂ ಜಡೇಜಾ ಬ್ಯಾಟಿಂಗ್ ಮಾಡ್ತಿದ್ದಾರೆ. ಈಗಾಗಲೇ ಎರಡು ಟೆಸ್ಟ್​ ಸರಣಿ ಗೆದ್ದುಕೊಂಡಿರುವ ಆಸ್ಟ್ರೇಲಿಯಾ, ಸರಣಿ ಮೇಲೆ ಕಣ್ಣಿಟ್ಟಿದೆ. ಟೆಸ್ಟ್​​ ಸರಣಿ ಸಮಬಲ ಮಾಡಿಕೊಳ್ಳಬೇಕು ಎಂದರೆ ಸಿಡ್ನಿ ಟೆಸ್ಟ್ ಗೆಲ್ಲೋದು ಭಾರತಕ್ಕೆ ಅನಿವಾರ್ಯವಾಗಿದೆ. ಆಸಿಸ್ ಸರಣಿಯಲ್ಲಿ ಸತತ ವೈಫಲ್ಯ ಎದುರಿಸಿದ್ದ ರೋಹಿತ್​ರನ್ನು ಗಂಭೀರ್ ಹೊರಗಿಟ್ಟಿದ್ದರು. ಆ ಮೂಲಕ ಟೀಂ ಇಂಡಿಯಾದಲ್ಲಿ ಪ್ರಮುಖ ಬದಲಾವಣೆ ಮಾಡಿದ್ದರು. ರೋಹಿತ್ ಅನುಪಸ್ಥಿತಿಯಲ್ಲೂ ಟೀಂ ಇಂಡಿಯಾಗೆ ಪುಟಿದೇಳಲು ಸಾಧ್ಯವಾಗಲಿಲ್ಲ. ಆ ಮೂಲಕ ಟೀಂ ಇಂಡಿಯಾ ಮ್ಯಾನೇಜ್ಮೆಂಟ್ ಪ್ಲಾನ್ ಫೇಲ್ ಆಗಿದೆ.

ಇದನ್ನೂ ಓದಿ:ಕೋಟೆನಾಡಲ್ಲಿ ಸಿನಿಮಾವನ್ನೂ ಮೀರಿಸೋ ಅಪಹರಣ ಕತೆ.. ಇಬ್ಬರು ಮಕ್ಕಳ ಯಡವಟ್ಟು ಕಿಡ್ನಾಪ್

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment