ಮಧ್ಯಪ್ರದೇಶಕ್ಕೆ ನಿರಾಸೆ.. ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಎತ್ತಿ ಹಿಡಿದ ಶ್ರೇಯಸ್ ಅಯ್ಯರ್

author-image
Bheemappa
Updated On
ಮಧ್ಯಪ್ರದೇಶಕ್ಕೆ ನಿರಾಸೆ.. ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಎತ್ತಿ ಹಿಡಿದ ಶ್ರೇಯಸ್ ಅಯ್ಯರ್
Advertisment
  • ಬಲಿಷ್ಠ ಬ್ಯಾಟಿಂಗ್ ಪ್ರದರ್ಶನ ಮಾಡಿದ RCB ಯುವ ಬ್ಯಾಟರ್
  • ಮಧ್ಯಪ್ರದೇಶಕ್ಕೆ ನಿರಾಸೆ, ಗೆಲುವು ಸಾಧಿಸಿದ ಮುಂಬೈ ಆಟಗಾರರು
  • ​ಸೂರ್ಯಕುಮಾರ್, ಅಜಿಂಕ್ಯಾ ರಹಾನೆ ಮಿಂಚಿನ ಬ್ಯಾಟಿಂಗ್​

ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಮುಂಬೈ ಟೀಮ್ ಜಯಬೇರಿ ಬಾರಿಸಿದೆ. ಶ್ರೇಯಸ್ ಅಯ್ಯರ್ ನೇತೃತ್ವದ ಮುಂಬೈ ತಂಡ 2024ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಚಾಂಪಿಯನ್ ಆಗಿ ಹೊರ ಹೊಮ್ಮಿದೆ.

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಟಿ20 ಫೈನಲ್ ಪಂದ್ಯದಲ್ಲಿ ಮುಂಬೈ ನಾಯಕ ಶ್ರೇಯಸ್ ಅಯ್ಯರ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಇದುರಾಳಿ ಮಧ್ಯಪ್ರದೇಶ ತಂಡದವರು ಬ್ಯಾಟಿಂಗ್​ಗೆ ಆಗಮಿಸಿದರು. ಆರಂಭಿಕ ಆಘಾತ ಅನುಭವಿಸಿದ್ದ ಮಧ್ಯಪ್ರದೇಶ ತಂಡಕ್ಕೆ ಆರ್​​ಸಿಬಿ ಬ್ಯಾಟರ್ ರಜತ್ ಪಾಟೀದಾರ್ ನೆರವಾದರು.

ಬಿರುಸಿನ ಬ್ಯಾಟಿಂಗ್ ಪ್ರದರ್ಶನ ಮಾಡಿದ ರಜತ್ ಪಾಟೀದಾರ್ 6 ಬೌಂಡರಿ, 6 ಸಿಕ್ಸರ್ ಸಮೇತ 40 ಎಸೆತಗಳಲ್ಲಿ 81 ರನ್ ಸಿಡಿಸಿದರು. ತವರಲ್ಲಿ ಬ್ಯಾಟಿಂಗ್ ಅನ್ನು ಮತ್ತೊಮ್ಮೆ ಸಾಬೀತು ಪಡಿಸಿದರು. ಶುಭ್ರಾಂಶು ಸೇನಾಪತಿ 23, ವೆಂಕಟೇಶ್ ಐಯ್ಯರ್ 17 ಹಾಗೂ ರಾಹುಲ್ ಬಾಥಮ್ 19 ರನ್ ಗಳಿಸಿದರು. ಹೀಗಾಗಿ ಮಧ್ಯಪ್ರದೇಶ ನಿಗದಿತ 20 ಓವರ್​ಗಳಲ್ಲಿ 174 ರನ್​ಗಳ ಟಾರ್ಗೆಟ್ ನೀಡಿತು.

publive-image

ಇದನ್ನೂ ಓದಿ:ಶಬರಿಮಲೆ ಅಯ್ಯಪ್ಪ; ಕೇವಲ 29 ದಿನದಲ್ಲಿ 163.89 ಕೋಟಿ ರೂ ಆದಾಯ.. ಪ್ರಸಾದದಿಂದ ಎಷ್ಟು ಕೋಟಿ ಬಂದಿದೆ?

ಈ ಗುರಿ ಬೆನ್ನತ್ತಿದ್ದ ಮುಂಬೈ ತಂಡ ಕೂಡ ಆರಂಭದಲ್ಲೇ ಸಂಕಷ್ಟಕ್ಕೆ ಸಿಲುಕಿತ್ತು. ಓಪರ್ಸ್​​ ಪೃಥ್ವಿ ಶಾ 10, ಶ್ರೇಯಸ್ ಐಯ್ಯರ್ 16 ರನ್​ಗೆ ಔಟ್ ಆದರು. ಇದು ತಂಡಕ್ಕೆ ಭಾರೀ ಪೆಟ್ಟು ಕೊಟ್ಟಿತು ಎನ್ನುವಷ್ಟರಲ್ಲಿ ಟೂರ್ನಿಯುದ್ಧಕ್ಕೂ ಅಮೋಘ ಪ್ರದರ್ಶನ ನೀಡಿದ್ದ ಅಜಿಂಕ್ಯಾ ರಹಾನೆ ಮತ್ತೊಮ್ಮೆ ತಂಡಕ್ಕೆ ನೆರವಾದರು. ಅವರು 37 ರನ್ ಕಾಣಿಕೆ ನೀಡಿದರು. ಸೂರ್ಕುಮಾರ್ ಯಾದವ್ 48 ರನ್ ಗಳಿಸಿ ತಂಡವನ್ನು ಗೆಲುವಿನ ದಡದಲ್ಲಿ ನಿಲ್ಲಿಸಿದ್ದರು.

ಆದ್ರೆ ಅಂತಿಮವಾಗಿ ಸೂರ್ಯಾಂಶ್ ಶೆಡ್ಗೆ 36, ಅಂಕೋಲ್ಕರ್ 16 ರನ್​ಗಳ ನೆರವಿನಿಂದ ಮುಂಬೈ ಅದ್ಭುತ ಗೆಲುವು ಸಾಧಿಸಿದೆ. ಮುಂಬೈ ತಂಡ 17.5 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 180 ರನ್​ಗಳಿಸಿ ಗೆಲುವು ಸಾಧಿಸಿತು. ಇದರಿಂದ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಮುಂಬೈ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment