newsfirstkannada.com

×

Heart attack ಭುಜ ಮತ್ತು ತೋಳಿನ ನೋವು ಕೂಡ ಡೇಂಜರ್​; ಈ 6 ಲಕ್ಷಣ ಕಂಡರೆ ನಿರ್ಲಕ್ಷ್ಯ ಬೇಡ..

Share :

Published October 12, 2024 at 8:57am

    ವೈದ್ಯಲೋಕವನ್ನು ಆತಂಕಕ್ಕೆ ತಳ್ಳಿರುವ ಹಾರ್ಟ್​ ಅಟ್ಯಾಕ್

    ಹೃದಯಾಘಾತಕ್ಕೂ ಮೊದಲು ಏನೆಲ್ಲ ಸಮಸ್ಯೆ ಆಗುತ್ತದೆ..?

    ಹೃದಯಾಘಾತ ಆಗುತ್ತದೆ ಎಂದು ಕಂಡುಕೊಳ್ಳುವುದು ಹೇಗೆ?

ಎದೆ ನೋವು ಹೃದಯಾಘಾತದ ಮುಖ್ಯ ಲಕ್ಷಣ. ಎದೆನೋವು ಹೊರತುಪಡಿಸಿಯೂ ಹೃದಯಾಘಾತಕ್ಕೆ ಕೆಲವು ರೋಗಲಕ್ಷಣಗಳು ಇವೆ. ಆರೋಗ್ಯದಲ್ಲಿ ಸಣ್ಣಪ್ರಮಾಣದಲ್ಲಿ ಏರುಪೇರು ಉಂಟಾದಾಗ ಅದನ್ನು ನಿರ್ಲಕ್ಷಿಸಿ ದೊಡ್ಡ ಅನಾಹುತ ಮಾಡಿಕೊಳ್ಳೋರೇ ಹೆಚ್ಚಿದ್ದಾರೆ. ಕೆಲವರಿಗೆ ಹೃದಯಾಘಾತದ ಲಕ್ಷಣಗಳನ್ನು ಸರಿಯಾಗಿ ಗುರುತಿಸಲು ಸಾಧ್ಯವಾಗಲ್ಲ. ಹೃದಯಾಘಾತಕ್ಕೆ ಸಂಬಂಧಿಸಿದ ರೋಗಲಕ್ಷಣಗಳು ಇಲ್ಲಿವೆ.

ಎದೆಯಲ್ಲಿ ಒತ್ತಡ, ಭಾರ, ಉರಿ ಅಥವಾ ನೋವು ಹೃದಯಾಘಾತದ ಸಾಮಾನ್ಯ ಲಕ್ಷಣ. ಇದಲ್ಲದೇ, ತೋಳುಗಳು ಮತ್ತು ಭುಜಗಳಲ್ಲಿ ನೋವು ಇರುತ್ತದೆ. ಅದು ಕೆಲವೊಮ್ಮೆ ದವಡೆಗೂ ಹರಡುತ್ತದೆ. ಇದು ಕೂಡ ಹೃದಯಾಘಾತದ ಸಂಕೇತ ಆಗಿರಬಹುದು. ಕೆಲವೊಮ್ಮೆ ಈ ನೋವು ಸಂಭವಿಸಿ ಹೋಗುತ್ತದೆ. ಆದರೆ ಅದನ್ನು ಗಂಭೀರವಾಗಿ ತೆಗೆದುಕೊಳ್ಳುವುದು ಮುಖ್ಯ ಎಂದು ವೈದ್ಯರು ಎಚ್ಚರಿಕೆ ನೀಡ್ತಾರೆ.

ಇದನ್ನೂ ಓದಿ:ನವರಾತ್ರಿಯಲ್ಲಿ ಬೆಳ್ಳುಳ್ಳಿ ಮತ್ತು ಈರುಳ್ಳಿಯನ್ನು ಏಕೆ ತಿನ್ನಬಾರದು? ಉತ್ತರ ತಿಳಿಯಿರಿ

ಹೃದಯಾಘಾತದ ಲಕ್ಷಣಗಳು:

  • ಎದೆ ನೋವು ಅಥವಾ ಒತ್ತಡ: ಹೃದಯಾಘಾತದ ಸಾಮಾನ್ಯ ಲಕ್ಷಣವೆಂದರೆ ಎದೆಯಲ್ಲಿ ತೀವ್ರವಾದ ಒತ್ತಡ, ನೋವು ಕಾಣಿಸಿಕೊಳ್ಳುತ್ತದೆ. ಈ ನೋವು ದೇಹದ ಬೇರೆ ಬೇರೆ ಭಾಗಗಳಿಗೂ ಹರಡುವ ಸಾಧ್ಯತೆ ಇರುತ್ತದೆ. ಕ್ರಮೇಣ ನೋವು ಭುಜಗಳು, ಕುತ್ತಿಗೆ ಮತ್ತು ಕೆಲವೊಮ್ಮೆ ಬೆನ್ನಿಗೆ ಹರಡುತ್ತದೆ.
  • ಭುಜ ಮತ್ತು ತೋಳಿನಲ್ಲಿ ನೋವು: ತೋಳು ಮತ್ತು ಭುಜದ ನೋವು ಕೂಡ ಹೃದಯಾಘಾತದ ಒಂದು ಲಕ್ಷಣ. ನೊವು ಬೆನ್ನು ಮತ್ತು ಇತರ ಭಾಗಗಳಿಗೂ ಹರಡುತ್ತದೆ. ಈ ರೀತಿಯ ಲಕ್ಷಣ ಕಾಣಿಸಿಕೊಂಡರೆ ನಿರ್ಲಕ್ಷ್ಯ ಮಾಡಂಗಿಲ್ಲ.
  • ಉಸಿರಾಟದ ತೊಂದರೆ: ಹೃದಯಾಘಾತ ಸಂಭವಿಸಿದಾಗ ವ್ಯಕ್ತಿಯು ನರಗಳ ಮೇಲೆ ಪರಿಣಾಮ ಬೀರುತ್ತದೆ. ಉಸಿರಾಟಕ್ಕೆ ತೊಂದರೆ ಆಗುತ್ತದೆ. ಇದು ಹೃದಯಾಘಾತದ ಎರಡನೇ ಸಾಮಾನ್ಯ ಲಕ್ಷಣ.
  • ತಲೆತಿರುಗುವಿಕೆ, ಅಹಿತಕರ ಭಾವನೆ: ಹೃದಯಾಘಾತದ ಲಕ್ಷಣ ಕೆಲವೊಮ್ಮೆ ಗೊತ್ತೇ ಆಗಲ್ಲ. ಸೌಮ್ಯವಾದ (ಮೈಲ್ಡ್) ರೋಗ ಲಕ್ಷಣಗಳನ್ನೂ ಹೊಂದಿರುತ್ತದೆ. ತಲೆ ತಿರುಗುವಿಕೆ ಅಥವಾ ಅನಾನುಕೂಲತೆಯಂತಹ ರೋಗಲಕ್ಷಣಗಳಲ್ಲೂ ಸಂಭವಿಸುತ್ತದೆ.
  • ಬೆವರುವಿಕೆ ಮತ್ತು ಆಯಾಸ: ಹೃದಯಾಘಾತದ ಸಂದರ್ಭದಲ್ಲಿ ಕೆಲವೊಮ್ಮೆ ಇದ್ದಕ್ಕಿದ್ದಂತೆ ಬೆವರು ಶುರುವಾಗುತ್ತದೆ. ತುಂಬಾ ಸುಸ್ತಾದ ಅನುಭವ ಆಗುತ್ತದೆ. ಕೆಲವರು ನಡುಗಲು ಶುರು ಮಾಡ್ತಾರೆ. ಇದು ಕೂಡ ಹೃದಯಾಘಾತದ ಲಕ್ಷಣಗಳಾಗಿರಬಹುದು.
  • ವಾಕರಿಕೆ ಮತ್ತು ವಾಂತಿಯಂತಹ ಭಾವನೆ: ಹೃದಯಾಘಾತದ ಸಂದರ್ಭದಲ್ಲಿ ಅನೇಕ ಬಾರಿ ವಾಕರಿಕೆ ಮತ್ತು ಸ್ವಲ್ಪ ವಾಂತಿ ಪ್ರಾರಂಭವಾಗುತ್ತದೆ. ಕೆಲವರಿಗೆ ಹೊಟ್ಟೆನೋವಿನ ಸಮಸ್ಯೆಯೂ ಬರಬಹುದು. ಹೊಟ್ಟೆ ಮತ್ತು ಹೃದಯದ ನರಗಳ ನಡುವಿನ ಸಂಪರ್ಕವೇ ಇದಕ್ಕೆ ಕಾರಣ. ಹೃದಯದಲ್ಲಿ ಸಮಸ್ಯೆ ಉಂಟಾದಾಗ ಹೊಟ್ಟೆಯಲ್ಲಿ ಅಸ್ವಸ್ಥತೆ ಉಂಟಾಗುತ್ತದೆ.

ಈ ರೋಗಲಕ್ಷಣಗಳಲ್ಲಿ ಯಾವುದಾದರು ಒಂದು ಕಾಣಿಸಿಕೊಂಡರೂ ಅದು ಹೃದಯಕ್ಕೆ ಸಂಬಂಧಿಸಿದ್ದರಬಹುದು. ವಿಳಂಬವಿಲ್ಲದೆ ವೈದ್ಯರನ್ನು ಸಂಪರ್ಕಿಸಿ.

ಇದನ್ನೂ ಓದಿ:ತೀವ್ರ ಲೋ ಬಿಪಿಯಿಂದ ಬಳಲುತ್ತಿದ್ದ ರತನ್ ಟಾಟಾ; BP ಇರೋರು ಈ ತಪ್ಪು ಮಾಡಬಾರದು!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Heart attack ಭುಜ ಮತ್ತು ತೋಳಿನ ನೋವು ಕೂಡ ಡೇಂಜರ್​; ಈ 6 ಲಕ್ಷಣ ಕಂಡರೆ ನಿರ್ಲಕ್ಷ್ಯ ಬೇಡ..

https://newsfirstlive.com/wp-content/uploads/2024/10/HEART-HATTACK.jpg

Load More