/newsfirstlive-kannada/media/post_attachments/wp-content/uploads/2025/07/HEART-ATTACK-3.jpg)
ಸೈಲೆಂಟ್ ಕಿಲ್ಲರ್ ‘ಹೃದಯಾಘಾತ’ ಪ್ರಸ್ತುತ ಹೆಚ್ಚು ಮಾರಕವಾಗುತ್ತಿದೆ. ಜಾಗತಿಕವಾಗಿ ಹೃದಯಾಘಾತದಿಂದ ಸಾವು ಆಗುತ್ತಿರುವ ಪ್ರಕರಣಗಳು ಜಗತ್ತಿನಲ್ಲಿ ಹೆಚ್ಚುತ್ತಿವೆ. ಯುವಕರು, ಹಿರಿಯರು ಎಂಬ ಭೇದವಿಲ್ಲದೆ ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ.
ಅದಕ್ಕಾಗಿ ನಾವು ಇಂದು ಎಚ್ಚೆತ್ತುಕೊಳ್ಳಬೇಕಿದೆ. ಹೃದಯಾಘಾತವು ಇದ್ದಕ್ಕಿದ್ದಂತೆ ಬರುತ್ತದೆ. 2-3 ನಿಮಿಷಗಳಲ್ಲಿ ನೋವು ವೇಗವಾಗಿ ಹೆಚ್ಚಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಹೃದಯಾಘಾತವು ಎಲ್ಲಾ ವಯಸ್ಸಿನವರಲ್ಲೂ ಸಂಭವಿಸುತ್ತಿದೆ ಎಂದು ವೈದ್ಯಕೀಯ ತಜ್ಞರು ಎಚ್ಚರಿಕೆ ನೀಡುತ್ತಿದ್ದಾರೆ. ಹೃದಯಾಘಾತವು ವೈದ್ಯಕೀಯ ತುರ್ತುಸ್ಥಿತಿಯಾಗಿದೆ. ಹೃದಯಾಘಾತವಾದಾಗ ರೋಗಿಯು ಸಾಮಾನ್ಯವಾಗಿ ತೀವ್ರವಾದ ಎದೆ ನೋವು, ದವಡೆ ನೋವು-ಬೆನ್ನು ನೋವು ಅನುಭವಿಸುತ್ತಾನೆ.
ಇದನ್ನೂ ಓದಿ: ನಾನ್ ಸ್ಟಿಕ್ ಪ್ಯಾನ್ನಲ್ಲಿ ಅಡುಗೆ ಮಾಡೋ ಗೃಹಿಣಿಯರೇ ಎಚ್ಚರ.. ವರದಿಯಲ್ಲಿ ಶಾಕಿಂಗ್ ವಿಚಾರ ಬೆಳಕಿಗೆ..!
ಹೃದಯಾಘಾತವಾಗುವ ಕೆಲವು ಗಂಟೆಗಳ ಮೊದಲು ದೇಹದಲ್ಲಿ ಕೆಲವು ವಿಶೇಷ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಅದನ್ನು ಕೆಲವರು ನಿರ್ಲಕ್ಷಿಸುತ್ತಾರೆ. ಆಗ ಸಮಸ್ಯೆ ಹೆಚ್ಚು ಗಂಭೀರವಾಗುತ್ತ ಹೋಗುತ್ತದೆ. ಅಲ್ಲದೇ ಜೀವವನ್ನೇ ಕಳೆದುಕೊಳ್ಳುವ ಅಪಾಯ ಹೆಚ್ಚಾಗುತ್ತದೆ. ಹೀಗಾಗಿ ಹೃದಯಾಘಾತಕ್ಕೆ ಸಂಬಂಧಿಸಿದ ಕೆಲವು ಲಕ್ಷಣಗಳ ಬಗ್ಗೆ ನಿಮಗೆ ಅರಿವು ಇರಲಿ.
ಹೃದಯಾಘಾತವಾಗುವ 2 ಗಂಟೆಗಳ ಮೊದಲು ದೇಹದಲ್ಲಿ ಕಂಡುಬರುವ ಲಕ್ಷಣಗಳು..
- ಹೃದಯಾಘಾತಕ್ಕೆ ಕೆಲವು ಗಂಟೆಗಳ ಮೊದಲು, ರೋಗಿಯು ಎದೆಯಲ್ಲಿ ಅಥವಾ ಎದೆಯ ಮಧ್ಯದಲ್ಲಿ ತೀವ್ರ ನೋವು ಕಾಣಿಸಿಕೊಳ್ಳುತ್ತದೆ. ದೇಹವು ಇದ್ದಕ್ಕಿದ್ದಂತೆ ಒತ್ತಡ ಅಥವಾ ನೋವನ್ನು ಅನುಭವಿಸುತ್ತದೆ.
- ಹೃದಯಾಘಾತದ ಮೊದಲು ದೇಹದ ಕೆಲವು ಭಾಗದಲ್ಲಿ ಒತ್ತಡದ ಭಾವನೆ. ಹೃದಯದ ಎಡಭಾಗದಲ್ಲಿ, ಭುಜ, ಕುತ್ತಿಗೆ-ಬೆನ್ನು ನೋವು ಕಾಣಿಸಿಕೊಳ್ಳುತ್ತದೆ. ಈ ನೋವು ಕ್ರಮೇಣ ಹೊಟ್ಟೆಯ ಕಡೆಗೆ ಚಲಿಸಲು ಪ್ರಾರಂಭಿಸುತ್ತದೆ. ಆಗ ನೀವು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡುವಂತಿಲ್ಲ.
- ಹೃದಯಾಘಾತ ಸಂಭವಿಸುವ ಮೊದಲು ಉಸಿರುಗಟ್ಟಿದ ವಾತಾವರಣ ನಿರ್ಮಾಣ ಆಗುತ್ತದೆ. ಲಘು ದೈಹಿಕ ಚಟುವಟಿಕೆಯೂ ಸಹ ಉಸಿರಾಟದ ತೊಂದರೆಗೆ ಕಾರಣವಾಗುತ್ತದೆ.
- ಹೃದಯಾಘಾತಕ್ಕೆ ಎರಡು ಗಂಟೆಗಳ ಮೊದಲು ರೋಗಿಯು ಇದ್ದಕ್ಕಿದ್ದಂತೆ ಬೆವರಲು ಪ್ರಾರಂಭಿಸುತ್ತಾನೆ.
- ಹೃದಯಾಘಾತದ ಕೆಲವು ಗಂಟೆಗಳ ಮೊದಲು ರೋಗಿಯು ಇದ್ದಕ್ಕಿದ್ದಂತೆ ತಲೆ ತಿರುಗುವಿಕೆ ಶುರುವಾಗುತ್ತದೆ. ಕೆಲವರು ಪ್ರಜ್ಞೆ ತಪ್ಪಿ ಬೀಳುತ್ತಾರೆ. ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು.
- ಈ ಲಕ್ಷಣಗಳು ಕಂಡು ಬಂದರೆ ಗಾಬರಿಯಾಗುವ ಅವಶ್ಯಕತೆ ಇಲ್ಲ. ಕೂಡಲೇ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುವುದೊಂದೇ ದಾರಿ.
ಇದನ್ನೂ ಓದಿ:ಹೃದಯ ಸಮಸ್ಯೆ ಇರೋರಿಗೆ ಸೋಮವಾರ ಡೇಂಜರ್; ಯಾಕೆ ಈ ದಿನ ಹೆಚ್ಚು ಹೃದಯಾಘಾತ ಸಂಭವಿಸುತ್ತದೆ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ