Advertisment

Syria; ಆಂತರಿಕ ಸಂಘರ್ಷ, ಬಂಡುಕೋರರ ಆರ್ಭಟ.. ದೇಶ ಬಿಟ್ಟು ಓಡಿ ಹೋದ ಅಧ್ಯಕ್ಷ

author-image
Bheemappa
Updated On
Syria; ಆಂತರಿಕ ಸಂಘರ್ಷ, ಬಂಡುಕೋರರ ಆರ್ಭಟ.. ದೇಶ ಬಿಟ್ಟು ಓಡಿ ಹೋದ ಅಧ್ಯಕ್ಷ
Advertisment
  • ಹಯಾತ್ ತಹ್ರೀರ್ ಶಾಮ್ ನೇತೃತ್ವದ ಬಂಡುಕೋರರ ದಂಗೆ
  • ಹಫೇಜ್ ಅಲ್ ಅಸಾದ್ ಪ್ರತಿಮೆ ಹೊಡೆದುರುಳಿಸಿ ಅಟ್ಟಹಾಸ
  • ದೇಶ ಬಿಟ್ಟು ಪಲಾಯನ ಮಾಡಿದ ಅಧ್ಯಕ್ಷ, ಎಲ್ಲಿಗೆ ಹೋದರು?

ಬಾಂಗ್ಲಾದೇಶದಂತೆ ಸಿರಿಯಾ ಕೂಡ ಆಂತರಿಕ ಸಂಘರ್ಷದಿಂದ ನಲುಗಿದೆ. ತಲೆ ಮಾರುಗಳಿಂದ ಆಡಳಿತ ನಡೆಸುತ್ತಿದ್ದ ಅಧ್ಯಕ್ಷ ಬಶರ್ ಅಲ್ ಅಸಾದ್ ಆಡಳಿತ ಅಂತ್ಯವಾಗಿದೆ. ಸಿರಿಯಾದಲ್ಲಿ ನೂತನ ಸರ್ಕಾರ ರಚಿಸಲು ಬಂಡುಕೋರರ ಪಡೆ ಸಜ್ಜಾಗಿದ್ದು, ಅತ್ತ, ಸಿರಿಯಾ ಅಧ್ಯಕ್ಷ ರಾಜೀನಾಮೆ ನೀಡಿ ಪಲಾಯನ ಮಾಡಿದ್ದಾರೆ.

Advertisment

ಮಧ್ಯಪ್ರಾಚ್ಯ ದೇಶಗಳಲ್ಲಿ ಮಹತ್ತರ ಬೆಳವಣಿಗೆ ನಡೆಯುತ್ತಿದೆ. ದಿನದಿಂದ ದಿನಕ್ಕೆ ಸರ್ಕಾರಗಳೇ ಉರುಳುತ್ತಿವೆ. ಇಸ್ಲಾಮಿಕ್​ ಸಂಘಟನೆಗಳ, ಬಂಡುಕೋರರ ಆರ್ಭಟ ಹೆಚ್ಚಾಗಿದೆ. ಈಗ ಸಿರಿಯಾದಲ್ಲಿ ದೊಡ್ಡ ಕ್ರಾಂತಿಯೇ ನಡೆದುಹೋಗಿದೆ.

publive-image

ಆಂತರಿಕ ಸಂಘರ್ಷ.. ಬಂಡುಕೋರರ ವಶವಾದ ಸಿರಿಯಾ

ಭಾರತದ ನೆರೆಯ ರಾಷ್ಟ್ರ ಬಾಂಗ್ಲಾದೇಶದಂತೆ ಈಗ ಸಿರಿಯಾದಲ್ಲೂ ಕೂಡ ಆಂತರಿಕ ಸಂಘರ್ಷಕ್ಕೆ ಸರ್ಕಾರ ಪತನಗೊಂಡಿದೆ. ಕಳೆದ ಒಂದು ವಾರದಿಂದ ಸಿರಿಯಾದಲ್ಲಿ ಹಯಾತ್ ತಹ್ರೀರ್ ಅಲ್ ಶಾಮ್ ನೇತೃತ್ವದ ಬಂಡುಕೋರರು ದಂಗೆ ನಡೆಸಿದ್ದು, ಅಸ್ಸಾದ್​ ಅವರ ಸುದೀರ್ಘ ಆಡಳಿತ ಕೊನೆಗೊಂಡಿದೆ.

ಬಂಡುಕೋರರ ಪಡೆ ಸಿರಿಯಾ ರಾಜಧಾನಿ ಡಮಾಸ್ಕಸ್​​ ಅನ್ನ ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದು, ರಾಜಧಾನಿಯನ್ನ ವಶಕ್ಕೆ ಪಡೆಯುತ್ತಿದ್ದಂತೆ ಸಿರಿಯಾ ಅಧ್ಯಕ್ಷ ಬಶರ್ ಅಲ್ ಅಸಾದ್ ದೇಶ ಬಿಟ್ಟು ಪಲಾಯನ ಮಾಡಿದ್ದಾರೆ.

Advertisment

ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಅಲ್​ ಅಸಾದ್

ರಾಜಧಾನಿ ಡೆಮಸ್ಕಾಸ್​​​ ಬಂಡುಕೋರರ ವಶವಾಗುತ್ತಿದ್ದಂತೆ ಸಿರಿಯಾ ಅಧ್ಯಕ್ಷ ಅಲ್​ ಅಸ್ಸಾದ್​​​​ ದೇಶ ತೊರೆಯುವ ಮುನ್ನ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ರಷ್ಯಾ ವರದಿ ಮಾಡಿದೆ. ಆದ್ರೆ ಎಲ್ಲಿ ಆಶ್ರಯ ಪಡೆಯುತ್ತಿದ್ದಾರೆ ಎಂಬುದು ನಿಗೂಢವಾಗಿದೆ. ಮತ್ತೊಂದೆಡೆ ಅಲ್​ ಅಸಾದ್ ತಮ್ಮ ಕುಟುಂಬದ ಜೊತೆ ರಷ್ಯಾಕ್ಕೆ ಪ್ರಯಾಣ ಬೆಳಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಸಿರಿಯಾದಲ್ಲಿ ಮುಗಿಲು ಮುಟ್ಟಿದ ಕ್ರಿಶ್ಚಿಯನ್ನರ ಸಂಭ್ರಮ

ಇರಾನ್ ಮೊದಲು ಎಂಬ ನೀತಿಯೊಂದಿಗೆ ಕಳೆದ 24 ವರ್ಷಗಳ ಕಾಲ ಆಡಳಿತ ನಡೆಸಿದ ಅಸಾದ್ ಆಡಳಿತ ಅಂತ್ಯಗೊಂಡಿದ್ದು, ಸಿರಿಯಾದ ಕ್ರಿಶ್ಚಿಯನ್ನರು ಕುಣಿದು ಕುಪ್ಪಳಿಸಿದ್ದಾರೆ. ಮತ್ತೊಂದೆಡೆ ಬಂಡುಕೋರರು ಅಸಾದ್ ತಂದೆ, ಹಫೇಜ್ ಅಲ್ ಅಸಾದ್ ಪ್ರತಿಮೆಯನ್ನು ಹೊಡೆದುರುಳಿಸಿ ಅಟ್ಟಹಾಸಗೈದಿದ್ದಾರೆ.

ಮತ್ತೊಂದೆಡೆ, ಸಿರಿಯಾ ಅಧ್ಯಕ್ಷ ದೇಶ ಬಿಟ್ಟು ಓಡಿ ಹೊಗುತ್ತಿದ್ದಂತೆ ದೇಶದಲ್ಲೇ ಅರಾಜಕತೆ ತಾಂಡವವಾಡ್ತಿದೆ. ಬಂಡುಕೋರರು ಸಿರಿಯಾ ಅಧ್ಯಕ್ಷರ ಅರಮನೆಗೆ ನುಗ್ಗಿ, ಕೈಗೆ ಸಿಕ್ಕ ವಸ್ತುಗಳನ್ನ ದೋಚಿಕೊಂಡು ಮೊಂಡಾಟ ಮೆರೆಯುತ್ತಿದ್ದಾರೆ.

Advertisment

ಇದನ್ನೂ ಓದಿ: ಲಕ್ಷ ಲಕ್ಷ ಹಣಕ್ಕೆ ಕನ್ನ ಹಾಕಲು ಖತರ್ನಾಕ್ ಪ್ಲಾನ್.. ಮಾಲೀಕನ ನಂಬಿಕೆಗೆ ದ್ರೋಹ ಬಗೆದ ನಯವಂಚಕ

publive-image

ಅಮೆರಿಕಾದ ಮೋಸ್ಟ್​​​ ವಾಟೆಂಡ್​ ಸಿರಿಯಾ ಅಧ್ಯಕ್ಷ?

ಇನ್ನು ದುರಂತವಂದ್ರೆ ಮಾಜಿ ಉಗ್ರಗಾಮಿ ಮೊಹಮ್ಮದ್ ಅಲ್-ಜೋಲಾನಿ ನೇತೃತ್ವದ ಹಯಾತ್ ತಹ್ರೀರ್ ಅಲ್-ಶಾಮ್ ಗುಂಪು ಅಲ್​​​​- ಅಸ್ಸಾದ್​​ ಆಡಳಿತವನ್ನ ಅಂತ್ಯಗೊಳಿಸುವಲ್ಲಿ ಯಶಸ್ವಿಯಾಗಿದೆ. ಸದ್ಯ ಸಿರಿಯಾವ್ನ ಮುನ್ನೆಡುಸವವರು ಯಾರು ಅನ್ನೋ ಪ್ರಶ್ನೆ ಉದ್ಭವವಾಗಿದ್ದು, ಈ ಹಿಂದೆ ಐಸಿಸ್​​ ಮತ್ತು ಅಲ್​ ಖೈದಾ ಉಗ್ರ ಸಂಘಟನೆ ಜೊತೆ ಕೈ ಜೋಡಿಸಿದ್ದ ಮೊಹಮ್ಮದ್ ಅಲ್​-ಜೋಲಾನಿ ಅಮೆರಿಕದ ಮೋಸ್ಟ್​​ ವಾಟೆಂಡ್​ ಲಿಸ್ಟ್​​ನಲ್ಲಿದ್ದ.

ಇನ್ನು ಸಿರಿಯಾವನ್ನು ಬಂಡುಕೋರರು ವಶಕ್ಕೆ ಪಡೆಯುತ್ತಿದ್ದಂತೆ ಇಸ್ರೇಲ್ ಕೂಡ ಅಖಾಡಕ್ಕಿಳಿದಿದೆ. ಗಡಿಯಲ್ಲಿರುವ ಗೋಲನ್ ಹೈಟ್ಸ್​ ಬಳಿಯ ಪ್ರದೇಶಗಳನ್ನು ವಶಪಡಿಸಿಕೊಂಡಿದೆ. ಇದೇ ವೇಳೆ ಸಿರಿಯಾದ ಡಮಾಸ್ಕಸ್‌ನ ವಲಸೆ ಮತ್ತು ಪಾಸ್‌ಪೋರ್ಟ್ ಕಟ್ಟಡದ ಮೇಲೆ ಬಾಂಬ್ ದಾಳಿ ಮಾಡಿದೆ. ಸಿರಿಯಾದಲ್ಲಿ ಸರ್ವಾಧಿಕಾರ ಅಳಿಸಿಹೋಗಿದ್ದು, ಬಂಡುಕೋರರು ಆಡಳಿತವನ್ನು ತಮ್ಮೆ ತೆಕ್ಕೆಗೆ ತೆಗೆದುಕೊಂಡಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment