Advertisment

ಸೆಮಿ ಫೈನಲ್​ ಎಂಟ್ರಿಗೆ ಟೀಂ ಇಂಡಿಯಾಗೆ ಇವತ್ತು ಗೆಲ್ಲಲೇಬೇಕು.. ಈ ಆಟಗಾರನಿಗೆ ಕೊಕ್..

author-image
Ganesh
Updated On
ಸೆಮಿ ಫೈನಲ್​ ಎಂಟ್ರಿಗೆ ಟೀಂ ಇಂಡಿಯಾಗೆ ಇವತ್ತು ಗೆಲ್ಲಲೇಬೇಕು.. ಈ ಆಟಗಾರನಿಗೆ ಕೊಕ್..
Advertisment
  • ಟೀಂ ಇಂಡಿಯಾಗೆ ಇವತ್ತು ಸೂಪರ್​ 8ರ 2ನೇ ಪಂದ್ಯ
  • ಬಾಂಗ್ಲಾದೇಶದ ವಿರುದ್ಧ ಸೆಣಸಾಟ ನಡೆಸಲಿರುವ ಭಾರತ
  • ಅಫ್ಘಾನ್ ವಿರುದ್ಧ ಗೆದ್ದು ಹುಮ್ಮಸ್ಸಿನಲ್ಲಿರುವ ಟೀಂ ಇಂಡಿಯಾ

ಟಿ20 ವಿಶ್ವಕಪ್​ನ ಮತ್ತೊಂದು ಸವಾಲಿಗೆ ಟೀಮ್ ಇಂಡಿಯಾ ಸಜ್ಜಾಗಿದೆ. ಆಂಟಿಗುವಾದ ಸರ್​​ ವಿವಿಯನ್ ರಿಚರ್ಡ್ಸ್​ ಮೈದಾನದಲ್ಲಿ ಎದುರಾಳಿ ಬಾಂಗ್ಲಾದೇಶವನ್ನ ಎದುರಿಸಲಿದ್ದು, ಈ ಪಂದ್ಯ ಉಭಯ ತಂಡಗಳ ಪಾಲಿಗೂ ಮೋಸ್ಟ್ ಕ್ರೂಶಿಯಲ್ ಆಗಿದೆ.

Advertisment

ಈಗಾಗಲೇ ಸೂಪರ್-8ನ ಮೊದಲ ಪಂದ್ಯದಲ್ಲಿ ಗೆದ್ದಿರುವ ಟೀಮ್ ಇಂಡಿಯಾ, ಇಂದು ಬಾಂಗ್ಲಾ ಎದುರು ಗೆದ್ದು ಸೆಮೀಸ್​​ಗೆ ಎಂಟ್ರಿ ನೀಡುವ ಲೆಕ್ಕಚಾರದಲ್ಲಿದೆ. ಅತ್ತ ಆಸಿಸ್​ ಎದುರು ಸೋತ ಬಾಂಗ್ಲಾ, ರೋಹಿತ್ ಪಡೆಯನ್ನ ಮಣಿಸಿ ಸೆಮೀಸ್ ಆಸೆ ಜೀವಂತವಾಗಿರಿಸಿಕೊಳ್ಳುವ ಮಹಾದಾಸೆ ಹೊಂದಿದೆ. ಹೀಗಾಗಿ ಇಂದಿನ ಟೈಗರ್ಸ್ ಹೋರಾಟದಲ್ಲಿ ಯಾರ್ ಗೆಲ್ತಾರೆ ಎಂಬ ಕುತೂಹಲ ಫ್ಯಾನ್ಸ್​ ಮನದಲ್ಲಿ ಮನೆ ಮಾಡಿದೆ.

ಇದನ್ನೂ ಓದಿ:ಸೂರಜ್‌ ರೇವಣ್ಣ ವಿರುದ್ಧ ಸಲಿಂಗ ಲೈಂಗಿಕ ದೌರ್ಜನ್ಯ ಕೇಸ್.. ರೇವಣ್ಣ ಕುಟುಂಬಕ್ಕೆ ಮತ್ತೊಂದು ಸಂಕಷ್ಟ

ಇನ್ನು ಟೀಂ ಇಂಡಿಯಾದ ಪ್ಲೇಯಿಂಗ್ ಇಲೆವೆನ್​​ನಲ್ಲಿ ಭಾರೀ ಬದಲಾವಣೆಯ ನಿರೀಕ್ಷೆ ಮಾಡಲಾಗಿದೆ. ಬ್ಯಾಟಿಂಗ್​ನಲ್ಲಿ ಫೇಲ್ಯೂರ್ ಆಗ್ತಿದ್ದು, ಶಿವಂ ದುಬೆಯನ್ನು ಬೆಂಚ್​​ಗೆ ಕೂರಿಸಿದರೂ ಅಚ್ಚರಿ ಇಲ್ಲ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಕೂಡ ಫಾರ್ಮ್ ಕಳೆದುಕೊಂಡಿದ್ದಾರೆ. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಬರ್ತಿದ್ದ ಕೊಹ್ಲಿಗೆ ಓಪ್ನರ್ ಆಗಿ ಬಡ್ತಿ ನೀಡಲಾಗಿತ್ತು. ಆದರೆ ಕೊಹ್ಲಿ ಫೇಲ್ ಆಗಿರೋದ್ರಿಂದ ಎಂದಿನಂತೆ ಜೈಸ್ವಾಲ್ ಅವರನ್ನು ಕಣಕ್ಕೆ ಇಳಿಸಿ ಕೊಹ್ಲಿಯನ್ನು ಮೂರನೇ ಕ್ರಮಾಂಕದಲ್ಲೇ ಬ್ಯಾಟಿಂಗ್ ಮಾಡಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ. ಇಂದು ರಾತ್ರಿ 8 ಗಂಟೆಯಿಂದ ಪಂದ್ಯ ಆರಂಭವಾಗಲಿದೆ.

Advertisment

ಇದನ್ನೂ ಓದಿ:ಸ್ನೇಹಿತನ ಮೇಲೆ ಪ್ರೀತಿಯ ವ್ಯಾಮೋಹ.. ಗುಟ್ಟಾಗಿ ಗೆಳೆಯನ ಲಿಂಗವನ್ನೇ ಬದಲಾಯಿಸಿಬಿಟ್ಟ ಪ್ರಿಯಕರ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment