ಟಿ-20ಗೆ ಕಿಂಗ್ ಆಗ್ತಿದ್ದಾರೆ ಭಾರತದ ಈ ಸ್ಟಾರ್ ಬೌಲರ್​​; ಸಿರಾಜ್, ಬುಮ್ರಾ ಅಲ್ಲವೇ ಅಲ್ಲ..!

author-image
Ganesh
Updated On
ಟಿ-20ಗೆ ಕಿಂಗ್ ಆಗ್ತಿದ್ದಾರೆ ಭಾರತದ ಈ ಸ್ಟಾರ್ ಬೌಲರ್​​; ಸಿರಾಜ್, ಬುಮ್ರಾ ಅಲ್ಲವೇ ಅಲ್ಲ..!
Advertisment
  • ಬ್ಯಾಟ್ಸ್​​ಮನ್​ಗಳಿಗೆ ವಿಲನ್​, ಪವರ್​​ ಪ್ಲೇಗೆ ಸ್ಪೆಷಲಿಸ್ಟ್
  • ಕನ್ಸಿಸ್ಟೆನ್ಸಿ ವಿಚಾರದಲ್ಲೂ ಅರ್ಷದೀಪ್ ಸಿಂಗ್​ IS ಕಿಂಗ್​
  • ಡೆಬ್ಯೂ ಬಳಿಕ ಟೀಮ್​ ಇಂಡಿಯಾದಲ್ಲಿ ಇವರದ್ದೇ ದರ್ಬಾರ್

T20 ಫಾರ್ಮೆಟ್​ನಲ್ಲಿ ಟೀಮ್ ಇಂಡಿಯಾದ ಯುವ ವೇಗಿ ಆರ್ಷ್​ದೀಪ್​ ಸಿಂಗ್​ ಆರ್ಭಟ ಜೋರಾಗಿದೆ. ಬ್ಯಾಟ್ಸ್​ಮನ್​ಗಳ ಗೇಮ್​ನಲ್ಲಿ ಆರ್ಷ್​​ದೀಪ್​ ಬಾಲ್​ ಹಿಡಿದು ಮ್ಯಾಜಿಕ್​ ಮಾಡ್ತಿದ್ದಾರೆ. ಯಾರ್ಕರ್​ ಸ್ಪೆಷಲಿಸ್ಟ್​ ಜಸ್​​ಪ್ರಿತ್​ ಬೂಮ್ರಾನೂ ಹಿಂದಿಕ್ಕಿ ಚುಟುಕು ಫಾರ್ಮೆಟ್​ಗೆ ಆರ್ಷ್​ದೀಪ್​​ ಸಿಂಗ್ ರಿಯಲ್​​ ಕಿಂಗ್ ಆಗಿದ್ದಾರೆ​.

ಬಾಂಗ್ಲಾ ವಿರುದ್ಧದ ಮೊದಲ ಟಿ20 ಫೈಟ್​ನಲ್ಲಿ ಟೀಮ್​ ಇಂಡಿಯಾ ಭರ್ಜರಿ ಜಯಭೇರಿ ಬಾರಿಸಿದೆ. ಈ ಜಬರ್ದಸ್ತ್​​ ಗೆಲುವಿಗೆ ಗ್ವಾಲಿಯರ್​ನಲ್ಲಿ ಮುನ್ನುಡಿ ಬರೆದಿದ್ದು ಆರ್ಷ್​​ದೀಪ್​ ಸಿಂಗ್​. 3.5 ಓವರ್​​ ಬೌಲಿಂಗ್​ ಮಾಡಿದ ಆರ್ಷ್​ದೀಪ್ ಕೇವಲ 14 ರನ್​ ನೀಡಿ​ 3 ವಿಕೆಟ್ ಬೇಟೆಯಾಡಿದ್ರು.

ಇದನ್ನೂ ಓದಿ:16 ವರ್ಷಗಳ ಇತಿಹಾಸದಲ್ಲಿ RCB ಇಬ್ಬರು ಆಟಗಾರರನ್ನು ರಿಲೀಸ್ ಮಾಡಿಯೇ ಇಲ್ಲ..!

publive-image

T20 ಕ್ರಿಕೆಟ್​ನ ಕಿಂಗ್​ ಈ ಆರ್ಷ್​​ದೀಪ್​ ಸಿಂಗ್
ಬಾಂಗ್ಲಾ ವಿರುದ್ಧದ ಪಂದ್ಯದ ಸಾಲಿಡ್​ ಪ್ರದರ್ಶನದೊಂದಿಗೆ ಆರ್ಷ್​ದೀಪ್​ ಸಿಂಗ್​ T20 ಫಾರ್ಮೆಟ್​​ಗೆ ತಾನೇ ಕಿಂಗ್​ ಅನ್ನೋದನ್ನ ಮತ್ತೊಮ್ಮೆ ನಿರೂಪಿಸಿದ್ದಾರೆ. ಈ ವರ್ಷದಲ್ಲಿ ಟೀಮ್​ ಇಂಡಿಯಾದ ಬೇರಾವ ಬೌಲರ್​​ ಕೂಡ ಮಾಡದ ಸಾಧನೆಯ್ನ ಆರ್ಷ್​​ದೀಪ್​ ಮಾಡಿದ್ದಾರೆ. ಆಡಿರುವ 13 ಪಂದ್ಯಗಳಲ್ಲೇ 27 ವಿಕೆಟ್​ ಬೇಟೆಯಾಡಿ ರಾಜನಂತೆ ಮೆರೆದಾಡ್ತಿದ್ದಾರೆ. ಭಾರತದ ಯಾವೊಬ್ಬ ಬೌಲರ್​ ಕೂಡ ಆರ್ಷ್​ದೀಪ್​ ಹತ್ತಿರಕ್ಕೂ ಸುಳಿದಿಲ್ಲ.

ಬ್ಯಾಟ್ಸ್​​ಮನ್​ಗಳಿಗೆ ವಿಲನ್​, ಪವರ್​​ ಪ್ಲೇಗೆ ಸ್ಪೆಷಲಿಸ್ಟ್​
T20 ಕ್ರಿಕೆಟ್​ನಲ್ಲಿ ಪವರ್​​ ಪ್ಲೇ ಅನ್ನೋದು ಬ್ಯಾಟ್ಸ್​ಮನ್​ಗಳ ಪಾಲಿನ ಸ್ವರ್ಗ ಅನ್ನೋ ಮಾತನ್ನ ಈ ಯಂಗ್​ಗನ್​ ಸುಳ್ಳಾಗಿಸಿದ್ದಾರೆ. ಎಡಗೈ ವೇಗಿಯ ಕರಾರುವಕ್​ ದಾಳಿಗೆ ಬ್ಯಾಟ್ಸ್​ಮನ್​ಗಳು ಬೆಚ್ಚಿ ಬಿದ್ದಿದ್ದಾರೆ. ಆರ್ಷ್​​ದೀಪ್​ ಸಿಂಗ್​ ಡೆಬ್ಯೂ ಮಾಡಿ ದಿನದಿಂದ ಈವರೆಗೆ ಪವರ್​ ಪ್ಲೇನಲ್ಲಿ ಹೆಚ್ಚು ವಿಕೆಟ್​ ಬೇಟೆಯಾಡಿದ ದಾಖಲೆ ಹೊಂದಿದ್ದಾರೆ. 32 ವಿಕೆಟ್​​ ಕಬಳಿಸಿ ಅಗ್ರಸ್ಥಾನ ಅಲಂಕರಿಸಿದ್ದಾರೆ.

ಇದನ್ನೂ ಓದಿ:ರೋಹಿತ್ ಶರ್ಮಾ ಆರ್​ಸಿಬಿಗೆ ಸೇರುವ ವಿಚಾರದ ಬಗ್ಗೆ ಮಾತನಾಡಿದ ಎಬಿ ಡಿ ವಿಲ್ಲಿಯರ್ಸ್..!

publive-image

ಕನ್ಸಿಸ್ಟೆನ್ಸಿ ವಿಚಾರದಲ್ಲೂ ಸಿಂಗ್​ IS ಕಿಂಗ್​​​
2024ರಲ್ಲಿ ಮಾತ್ರವಲ್ಲ. ಡೆಬ್ಯೂ ಮಾಡಿದಾಗಿನಿಂದ ಹಿಡಿದು ಈವರೆಗೆ ಆರ್ಷ್​​ದೀಪ್​ ಸಿಂಗ್​ ಕನ್ಸಿಸ್ಟೆಂಟ್​ ಪರ್ಫಾಮೆನ್ಸ್​ ನೀಡಿದ್ದಾರೆ. ಕಳೆದ 3 ವರ್ಷಗಳಿಂದ ತನ್ನ ಅನ್​ಪ್ರಿಡಿಕ್ಟಬಲ್​ ಎಸೆತಗಳಿಂದ ಬ್ಯಾಟ್ಸ್​​ಮನ್​ಗಳನ್ನ ಕಾಡಿದ್ದಾರೆ. ಚುಟುಕು ಫಾರ್ಮೆಟ್​​ನಲ್ಲಿ ಆರ್ಷ್​​ದೀಪ್​ ಸಿಂಗ್​ ಬಿರುಗಾಳಿ ದಾಳಿಗೆ ಉತ್ತರವಿಲ್ಲದ ಬ್ಯಾಟರ್ಸ್​ ಪೆವಿಲಿಯನ್​ ಪರೇಡ್​ ನಡೆಸಿದ್ದಾರೆ.

ಆರ್ಷ್​​ದೀಪ್​ ಸಿಂಗ್​ ಕನ್ಸಿಸ್ಟೆಂಟ್​ ಕಿಂಗ್​
2022ರಲ್ಲಿ 21 ಪಂದ್ಯಗಳನ್ನಾಡಿ 33 ವಿಕೆಟ್​ಗಳನ್ನ ಕಬಳಿಸಿದ್ದ ಆರ್ಷ್​ದೀಪ್ ಸಿಂಗ್​, 2023ರಲ್ಲಿ ಅಷ್ಟೇ ಪಂದ್ಯಗಳಿಂದ 26 ವಿಕೆಟ್​​ ಉರುಳಿಸಿದ್ರು. ಈ ವರ್ಷ ಆಡಿದ 13 ಪಂದ್ಯಗಳಲ್ಲೇ 27 ವಿಕೆಟ್​​ ಬೇಟೆಯಾಡಿದ್ದಾರೆ.

ಡೆಬ್ಯೂ ಬಳಿಕ ಟೀಮ್​ ಇಂಡಿಯಾದಲ್ಲಿ ದರ್ಬಾರ್
ಆರ್ಷ್​​ದೀಪ್​ ಸಿಂಗ್​ ಪದಾರ್ಪಣೆ ಮಾಡಿದ ಬಳಿಕ ಟೀಮ್​ ಇಂಡಿಯಾದಲ್ಲಿ ದರ್ಬಾರ್​​ ನಡೆಸಿದ್ದಾರೆ. ಆರ್ಷ್​ದೀಪ್​ ಅಬ್ಬರದ ಮುಂದೆ ಯಾರ್ಕರ್​ ಸ್ಪೆಷಲಿಸ್ಟ್​ ಬೂಮ್ರಾ ಆಟವೂ ನಡೆದಿಲ್ಲ.

2022ರ ಬಳಿಕ ಬೌಲರ್ಸ್​ ಪ್ರದರ್ಶನ
2022ರ ಬಳಿಕ ಟೀಮ್​ ಇಂಡಿಯಾ ಪರ 55 ಪಂದ್ಯಗಳನ್ನಾಡಿರುವ ಆರ್ಷ್​ದೀಪ್​ 8.3ರ ಎಕಾನಮಿಯಲ್ಲಿ 86 ವಿಕೆಟ್​ ಕಬಳಿಸಿದ್ದಾರೆ. 2ನೇ ಸ್ಥಾನದಲ್ಲಿರೋ ಅಕ್ಷರ್ ಪಟೇಲ್​ 47 ಪಂದ್ಯ ಆಡಿ 49 ವಿಕೆಟ್ ಉರುಳಿಸಿದ್ದಾರೆ. ಉಳಿದಂತೆ ರವಿ ಬಿಷ್ನೋಯ್​​ 32 ಪಂದ್ಯ ಆಡಿ 48, ಹಾರ್ದಿಕ್​ ಪಾಂಡ್ಯ 49 ಪಂದ್ಯಗಳಿಂದ 44 ವಿಕೆಟ್​​ ಕಬಳಿಸಿ ಕ್ರಮವಾಗಿ 3 ಮತ್ತು 4ನೇ ಸ್ಥಾನದಲ್ಲಿದ್ದಾರೆ.

ಸೆನ್ಸೇಷನ್​ಗೆ ಸೆಂಚುರಿ ಹೊಡೆಯುವ ಹಂಬಲ
ಆಡಿದ 55 ಪಂದ್ಯಗಳಿಂದ 86 ವಿಕೆಟ್​ ಉರುಳಿಸಿರುವ ಆರ್ಷ್​​ದೀಪ್​ ಸಿಂಗ್​ ನೂರು ವಿಕೆಟ್​ ಕಬಳಿಸೋ ಉತ್ಸಾಹದಲ್ಲಿದ್ದಾರೆ. ಸದ್ಯ 96 ವಿಕೆಟ್​ ಕಬಳಿಸಿರೋ ಯುಜುವೇಂದ್ರ ಚಹಲ್​, ಭಾರತದ ಪರ ಹೆಚ್ಚು ವಿಕೆಟ್​ ಕಬಳಿಸಿದ ಬೌಲರ್​ ಎನಿಸಿದ್ದಾರೆ. ಸದ್ಯದ ಆರ್ಷ್​​ದೀಪ್​ ಪರ್ಫಾಮೆನ್ಸ್​ ನೋಡಿದ್ರೆ, ಶೀಘ್ರದಲ್ಲೇ ಈ ದಾಖಲೆ ಮುರಿದು ನೂರು ವಿಕೆಟ್​​ ಗುರಿ ಮುಟ್ಟೋ ಎಲ್ಲಾ ಲಕ್ಷಣಗಳು ಕಾಣಿಸ್ತಿವೆ.

ಇದನ್ನೂ ಓದಿ:IPL 2025: ಆರ್​​ಸಿಬಿಯ ಈ ಸ್ಟಾರ್​​ ಬ್ಯಾಟರ್​​ ಖರೀದಿಗೆ ಬೇಕೇ ಬೇಕು ಕನಿಷ್ಠ 50 ಕೋಟಿ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment