/newsfirstlive-kannada/media/post_attachments/wp-content/uploads/2024/07/TEAM_INDIA-3.jpg)
T20 ವರ್ಲ್ಡ್‌ಕಪ್ ಗೆದ್ದು ಭಾರತಕ್ಕೆ ಆಗಮಿಸಿರುವ ಟೀಮ್ ಇಂಡಿಯಾ ಆಟಗಾರರನ್ನ ಅದ್ಧೂರಿಯಾಗಿ ವೆಲ್ಕಮ್ ಮಾಡಲಾಯಿತು. ದೆಹಲಿಗೆ ಬಂದಿಳಿದ ಚಾಂಪಿಯನ್ ತಂಡವನ್ನ ಬಿಸಿಸಿಐ ಆತ್ಮೀಯವಾಗಿ ಬರಮಾಡಿಕೊಂಡಿತ್ತು. ಭಾರತದ ಆಟಗಾರರ ಟ್ರೋಫಿಯೊಂದಿಗೆ ಇಂದು ಸಂಜೆ ವಾಂಖೇಡೆ ಸ್ಟೇಡಿಯಂನಲ್ಲಿ ಬಿಗ್ ಸೆಲೆಬ್ರೆಷನ್ನಲ್ಲಿ ತೊಡಗಲಿದ್ದು ಈ ಹಿನ್ನೆಯಲ್ಲಿ ಸ್ಟೇಡಿಯಂಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ.
ಇದನ್ನೂ ಓದಿ:BREAKING: ನಟ ದರ್ಶನ್‌ಗೆ ಮತ್ತೆ ಜೈಲೇ ಗತಿ.. ನ್ಯಾಯಾಂಗ ಬಂಧನ ವಿಸ್ತರಣೆ; ಎಷ್ಟು ದಿನ?
ಟಿ20 ಟ್ರೋಪಿ ಗೆದ್ದಿರುವ ಟೀಮ್ ಇಂಡಿಯಾದ ಆಟಗಾರರನ್ನು ನೋಡಲು ಅಭಿಮಾನಿಗಳು ಕಾತುರದಿಂದ ಇದ್ದಾರೆ. ಈ ಹಿನ್ನೆಲೆಯಲ್ಲಿ ವಾಂಖೆಡೆ ಸ್ಟೇಡಿಯಂನತ್ತ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಹರಿದು ಬರುತ್ತಿದ್ದಾರೆ. ಯಾವ ರಸ್ತೆಯಲ್ಲಿ ನೋಡಿದರು ಕ್ರಿಕೆಟ್ ಅಭಿಮಾನಿಗಳು ತುಂಬಿ ಹೋಗಿದ್ದಾರೆ. ಈಗಾಗಲೇ ಸಂಜೆ 4 ಗಂಟೆಯಿಂದಲೇ ಗೇಟ್ ನಂಬರ್ 2, 3, ಹಾಗೂ 4ರ ಮೂಲಕ ಸ್ಟೇಡಿಯಂ ಒಳಗೆ ಫ್ಯಾನ್ಸ್ಗಳನ್ನ ಬಿಡಲಾಗುತ್ತಿದೆ. ಸ್ಟೇಡಿಯಂ ಗ್ಯಾಲರಿಯಲ್ಲಿ ಕುಳಿತಿರುವ ಅಭಿಮಾನಿಗಳು ಭಾರತ ಹಾಗೂ ರೋಹಿತ್ ಶರ್ಮಾ ಪರ ಘೋಷಣೆಗಳನ್ನ ಕೂಗುತ್ತಿದ್ದಾರೆ. ಇಂಡಿಯಾಕಾ ಬಾದ್ಷಾ ರೋಹಿತ್ ಶರ್ಮಾ ಎಂದು ಅಭಿಮಾನಿಗಳ ಘೋಷಣೆ ಕೇಳಿಬರುತ್ತಿದೆ.
ಇದನ್ನೂ ಓದಿ: ದರ್ಶನ್ ಕೈದಿ ನಂಬರ್ ಫೋಟೋ ಶೂಟ್.. ಮಗುವಿನ ತಂದೆ, ತಾಯಿ, ವೈರಲ್ ಮಾಡಿದವ್ರಿಗೆ ಸಂಕಷ್ಟ!
Rohit Sharma chants in Wankhede stadium. ?? pic.twitter.com/AzojNUI1Na
— Johns. (@CricCrazyJohns)
Rohit Sharma chants in Wankhede stadium. 🥶🔥 pic.twitter.com/AzojNUI1Na
— Johns. (@CricCrazyJohns) July 4, 2024
">July 4, 2024
ಈಗಾಗಲೇ ದೆಹಲಿಯಿಂದ ಹೊರಟಿರುವ ರೋಹಿತ್ ಶರ್ಮಾ ನೇತೃತ್ವದ ಟೀಮ್ ಇಂಡಿಯಾ ಇನ್ನೇನು ಕೆಲವೇ ಕ್ಷಣದಲ್ಲಿ ಮುಂಬೈ ವಿಮಾನ ನಿಲ್ದಾಣಕ್ಕೆ ತಲುಪಿದೆ. ಬಳಿಕ ಮುಂಬೈ ನಗರದ ನಾರಿಮನ್ ಪಾಯಿಂಟ್ನಿಂದ ವಾಂಖೇಡೆ ಸ್ಟೇಡಿಯಂವರೆಗೆ 9 ಕಿಲೋ ಮೀಟರ್ವರೆಗೆ ವಿಕ್ಟರಿ ಪೆರೇಡ್ನ ಓಪನ್ ಬಸ್ನಲ್ಲಿ ಎಲ್ಲ ಆಟಗಾರರು ಪಾಲ್ಗೊಳ್ಳಲ್ಲಿದ್ದಾರೆ. ನಂತರ ಸ್ಟೇಡಿಯಂಗೆ ಆಗಮಿಸುವ ಆಟಗಾರರು ಎಲ್ಲ ಅಭಿಮಾನಿಗಳ ಜೊತೆ ಸಂಭ್ರಮಾಚರಣೆಯಲ್ಲಿ ತೊಡಗಲಿದ್ದಾರೆ ಎಂದು ಮಾಹಿತಿ ತಿಳಿದಿದೆ.
ಇದನ್ನೂ ಓದಿ: T20 ವಿಶ್ವಕಪ್ ಗೆಲುವಿನ ಮಾಸ್ಟರ್ ಮೈಂಡ್ಗಳು.. ಕೊಹ್ಲಿರನ್ನ ಓಪನಿಂಗ್ ಆಡಿಸಿ ಟ್ರೋಫಿ ಗೆದ್ದೇ ಬಿಟ್ರು!
MARINE DRIVE HAS GONE CRAZY. ??? pic.twitter.com/v0Aa1CYCv5
— Mufaddal Vohra (@mufaddal_vohra)
MARINE DRIVE HAS GONE CRAZY. 🤯🇮🇳 pic.twitter.com/v0Aa1CYCv5
— Mufaddal Vohra (@mufaddal_vohra) July 4, 2024
">July 4, 2024
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ