newsfirstkannada.com

ಮಗ ವಿಶ್ವಕಪ್​ಗೆ ಸೆಲೆಕ್ಟ್​ ಆಗ್ತಾನೆಂದು ಪಟಾಕಿ, ಸ್ವೀಟ್ ತಂದಿದ್ವಿ -ಸ್ಟಾರ್​ ಕ್ರಿಕೆಟರ್​ನ ತಂದೆ-ತಾಯಿ ಬೇಸರ

Share :

Published May 3, 2024 at 11:22am

    ಜೂನ್ 2 ರಿಂದ ಟಿ-20 ವಿಶ್ವಕಪ್​ ಆರಂಭವಾಗಲಿದೆ

    ವಿಶ್ವಕಪ್​​​ ಗೆಲ್ಲಲು ಬಲಿಷ್ಠ ತಂಡ ಪ್ರಕಟಿಸಿರುವ ಬಿಸಿಸಿಐ

    ಕೆಲವು ಆಟಗಾರರ ಆಯ್ಕೆ ಮಾಡದಿದ್ದಕ್ಕೆ ಭಾರೀ ಆಕ್ರೋಶ

ರಿಂಕು ಸಿಂಗ್ ಪರಮ ಗುರಿ ಟಿ20 ವಿಶ್ವಕಪ್ ಆಡುವುದು. ಅದಕ್ಕಾಗಿ ಪಟ್ಟ ಶ್ರಮ ಅಷ್ಟಿಷ್ಟಲ್ಲ. 9 ತಿಂಗಳ ಕಠಿಣ ಅಭ್ಯಾಸ ನಡೆಸಿದ್ರು. ಆಯ್ಕೆ ಆಗಿಯೇ ಆಗ್ತೀನಿ ಅನ್ನೋ ಅಧಮ್ಯ ಭರವಸೆಯಲ್ಲಿದ್ರು. ಆ ಬಿಗ್​ ಡ್ರೀಮ್ ಗೆ ಸೆಲೆಕ್ಟರ್ಸ್​ ಕೊಳ್ಳಿಯಿಟ್ಟಿದ್ದಾರೆ. ಟಿ20 ವಿಶ್ವಕಪ್​​ ರೇಸ್​ನಲ್ಲಿದ್ದ ರಿಂಕು ಸಿಂಗ್ ಮೇನ್​ ಸ್ಕ್ವಾಡ್​​ನಿಂದ ರಿವರ್ಸ್​ ಆಟಗಾರನಾಗಿದ್ದೇಗೆ?

ಇದನ್ನೂ ಓದಿ:ಅಂತೂ ಇಂತೂ ಬೆಂಗಳೂರಿಗೆ ಕೃಪೆ ತೋರಿದ ಮಳೆರಾಯ.. ಇವತ್ತೂ ಕೂಡ ಮಳೆ ಬರುತ್ತಾ..?

ರಿಂಕು ಸಿಂಗ್ ವಿಶ್ವಕಪ್ ಡ್ರೀಮ್ ನುಚ್ಚುನೂರು
ಎಲ್ಲಾ ಕ್ರಿಕೆಟಿಗರ ಅಂತಿಮ ಗುರಿ ಒಂದೇ. ಒಮ್ಮೆಯಾದ್ರು ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ದೇಶವನ್ನ ಪ್ರತಿನಿಧಿಸಬೇಕು ಅನ್ನೋದು. ಅಂತಹದೇ ಮಹಾದಾಸೆಯನ್ನ ಯಂಗ್​ ಫಿನಿಶರ್​​​ ರಿಂಕು ಸಿಂಗ್ ಹೊಂದಿದ್ರು. ಅವರ ಟಿ20 ವಿಶ್ವಕಪ್​​​ ಕನಸಿಗೆ ಬಿಸಿಸಿಐ ಕೊಳ್ಳಿಯಿಟ್ಟಿದೆ. 15ರ ಬಳಗದಿಂದ ರಿಂಕು ಸಿಂಗ್​ ಹೆಸರನ್ನ ಕೈಬಿಡಲಾಗಿದ್ದು, ಅಮೆರಿಕಾಗೆ ಫ್ಲೈಟ್​ ಏರುವ ಬಿಗ್ ಡ್ರೀಮ್ ನುಚ್ಚುನೂರಾಗಿದೆ.

ಇದನ್ನೂ ಓದಿ:ಕೋವಿಶೀಲ್ಡ್ ಪಡೆದ ಬೆನ್ನಲ್ಲೇ ಇಬ್ಬರು ಸಾವು; ಮೂರು ವರ್ಷದ ಬಳಿಕ ಸೀರಮ್ ಸಂಸ್ಥೆ ವಿರುದ್ಧ ಕೇಸ್..! ​

ರಿಂಕು ಕಡೆಗಣನೆ.. ಅಪ್ಪನ ಹೃದಯ ಛಿದ್ರ ಛಿದ್ರ..!
ರಿಂಕು ಕಡೆಗಣನೆಗೆ ಕ್ರಿಕೆಟ್ ಎಕ್ಸ್​ಫರ್ಟ್ಸ್, ಅಭಿಮಾನಿಗಳು ಹಾಗೂ ಮಾಜಿ ಕ್ರಿಕೆಟಿಗರು ಬೇಸರ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ ಮಗನಿಗೆ ವಿಶ್ವಕಪ್ ಟಿಕೆಟ್ ಕೈತಪ್ಪಿದ್ದಕ್ಕೆ ರಿಂಕು ಸಿಂಗ್ ಇಡೀ ಫ್ಯಾಮಿಲಿ ಬೇಸರದಲ್ಲಿ ಮುಳುಗಿದೆ. ತಂದೆ ಖಾನ್​​​ಚಂದ್ರ ಸಿಂಗ್​​​​ ಅವರ ಹೃದಯ ಛಿದ್ರ ಛಿದ್ರವಾಗಿದೆ. ಮಗನನ್ನ ವಿಶ್ವಕಪ್​​​​ ತಂಡದಿಂದ ಕೈಬಿಟ್ಟ ಸುದ್ದಿಯನ್ನ ಅವರಿಗೆ ಅರಗಿಸಿಕೊಳ್ಳಲು ಸಾಧ್ಯವಾಗ್ತಿಲ್ಲ.

ರಿಂಕು ಸಿಂಗ್ ಆಯ್ಕೆ ಆಗುವ ಬಗ್ಗೆ ಸಾಕಷ್ಟು ಭರವಸೆ ಇತ್ತು. ಆದ್ರೆ ಆಗಿಲ್ಲ. ಹಾಗಾಗಿ ತುಂಬಾ ಬೇಸರವಾಗಿದೆ. ರಿಂಕು ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ತಾನೆ ಅಂತ ಸಂಭ್ರಮಿಸಲು ಸ್ವೀಟ್ಸ್ ಹಾಗೂ ಪಟಾಕಿ ತರಿಸಿದ್ದೆವು. ಆಯ್ಕೆಯಾಗದಿದ್ರೂ ನಮಗೆ ಖುಷಿ ತಂದಿದೆ- ಖಾನ್​ಚಂದ್ರ ಸಿಂಗ್​, ರಿಂಕು ಸಿಂಗ್​ ತಂದೆ

ಅಪ್ಪನಿಗೆ ಇಷ್ಟೊಂದು ಬೇಸರ ಆಗಿರಬೇಕಾದ್ರೆ ವಿಶ್ವಕಪ್​​​ಗೆ ಆಯ್ಕೆ ಆಗಿಯೇ ಆಗ್ತೀನಿ ಅಂತ ಭರವಸೆಯಲ್ಲಿದ್ದ ರಿಂಕು ಸಿಂಗ್​​​​ಗೆ ಎಷ್ಟು ನೋವಾರ್ಗಿಬೇಕು ಅಲ್ವಾ? ಖಂಡಿತ ರಿಂಕು ಸಿಂಗ್​​​ ಬೇಸರ ಹೇಳತೀರದು. ವಿಶ್ವಕಪ್​ ತಂಡದಲ್ಲಿ ತನ್ನ ಹೆಸರಿಲ್ಲದಿರುವುದು ಗೊತ್ತಾಗ್ತಿದ್ದಂತೆ ಅಮ್ಮನಿಗೆ ಕರೆ ಮಾಡಿ ನೋವು ವ್ಯಕ್ತಪಡಿಸಿದ್ದಾರೆ.

ಅವನ ಹೃದಯ ಒಡೆದಿದೆ. ಅಮ್ಮನ ಜೊತೆ ಮಾತನಾಡಿದ ರಿಂಕು ಸಿಂಗ್ ಆಡುವ 11 ಅಥವಾ 15 ರಲ್ಲಿ ನನ್ನನ್ನ ಪರಿಗಣಿಸಿಲ್ಲ. ಆದರೂ ನಾನು ತಂಡದೊಂದಿಗೆ ಪ್ರಯಾಣ ಮಾಡುತ್ತೇನೆ ಎಂದು ಹೇಳಿದ್ದಾನೆ-ಖಾನ್​ಚಂದ್ರ ಸಿಂಗ್​ , ರಿಂಕು ಸಿಂಗ್​ ತಂದೆ

ಇದನ್ನೂ ಓದಿ:ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್​.. ಪ್ಲೇ ಆಫ್ ಕನಸು ಕಾಣ್ತಿರುವ ಆರ್​ಸಿಬಿಗೆ ಇದು ಆತಂಕದ ಸುದ್ದಿ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಗ ವಿಶ್ವಕಪ್​ಗೆ ಸೆಲೆಕ್ಟ್​ ಆಗ್ತಾನೆಂದು ಪಟಾಕಿ, ಸ್ವೀಟ್ ತಂದಿದ್ವಿ -ಸ್ಟಾರ್​ ಕ್ರಿಕೆಟರ್​ನ ತಂದೆ-ತಾಯಿ ಬೇಸರ

https://newsfirstlive.com/wp-content/uploads/2024/05/RINKU-SINGH-3.jpg

Load More