newsfirstkannada.com

ಫೈನಲ್ ಆರಂಭಕ್ಕೂ ಮುನ್ನವೇ ಟೀಂ ಇಂಡಿಯಾಗೆ Congratulations ಹೇಳಿದ ಬಾಲಿವುಡ್ ಸ್ಟಾರ್​..!

Share :

Published June 29, 2024 at 12:14pm

Update June 29, 2024 at 12:43pm

  ಈ ಬಾರಿ ವಿಶ್ವಕಪ್ ನಮ್ಮದೇ ಎಂದು ತಂಡಕ್ಕೆ ಅಭಿನಂದನೆ

  ಇಂದು ರಾತ್ರಿ ದಕ್ಷಿಣ ಆಫ್ರಿಕಾ ವಿರುದ್ಧ ಫೈನಲ್ ಪಂದ್ಯ

  ಕೋಟ್ಯಾಂತರ ಭಾರತೀಯರಿಂದ ತಂಡಕ್ಕೆ ಆಲ್​​ ದಿ ಬೆಸ್ಟ್

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್‌ನಲ್ಲಿ ಟಿ20 ವಿಶ್ವಕಪ್ ಫೈನಲ್ ಪಂದ್ಯ ನಡೆಯಲಿದೆ. ಭಾರತದ ಪ್ರತಿಯೊಬ್ಬ ಕ್ರಿಕೆಟ್ ಪ್ರೇಮಿಯೂ ಈ ಪಂದ್ಯದ ಮೇಲೆ ಕಣ್ಣಿಟ್ಟಿರುತ್ತಾರೆ. ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 8 ಗಂಟೆಗೆ ಪಂದ್ಯ ಆರಂಭವಾಗಲಿದೆ. ಈ ಪಂದ್ಯಕ್ಕೂ ಮುನ್ನವೇ ಟೀಂ ಇಂಡಿಯಾ ಗೆಲುವಿಗೆ ಬಾಲಿವುಡ್ ಸ್ಟಾರ್​ ಅಭಿನಂದನೆ ತಿಳಿಸಿದ್ದಾರೆ. ನಟ ಸೋನು ಸೂದ್ ಟೀಂ ಇಂಡಿಯಾಗೆ ಈ ಮುಂಗಡ (ಅಡ್ವಾನ್ಸ್​)ವಾಗಿ ಅಭಿನಂದನೆ ತಿಳಿಸಿದ್ದಾರೆ.

ಇದನ್ನೂ ಓದಿ:ವಿಶ್ವಕಪ್ ಗೆದ್ದ ತಂಡಕ್ಕೆ ಎಷ್ಟು ಕೋಟಿ ಬಹುಮಾನ ಸಿಗುತ್ತೆ.. ರನ್ನರ್​​ ಅಪ್​​ಗೂ ಇದೆ ಬಂಪರ್ ಲಾಟರಿ..!

ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಕ್ರಿಕೆಟ್ ಬಗ್ಗೆ ಆಸಕ್ತಿ ಹೊಂದಿದ್ದಾರೆ. ಟೀಂ ಇಂಡಿಯಾ ಯಾವುದೇ ಟೂರ್ನಿಯ ಫೈನಲ್‌ನಲ್ಲಿ ಆಡಿದಾಗಲೂ ಬಾಲಿವುಡ್‌ ಸ್ಟಾರ್​​ಗಳು ಸಾಕಷ್ಟು ಪ್ರತಿಕ್ರಿಯೆ ನೀಡುತ್ತಾರೆ. ಇದೀಗ ಪಂದ್ಯ ಆರಂಭಕ್ಕೂ ಮುನ್ನವೇ ಸೋನು ಸೂದ್ ಶುಭಾಶಯ ಕೋರಿ ಅಚ್ಚರಿ ಮೂಡಿಸಿದ್ದಾರೆ. ಟ್ವೀಟ್ ಮಾಡಿರುವ ಸೋನು ಸೂದ್​.. ‘ಟೀಮ್ ಇಂಡಿಯಾಗೆ ಮುಂಚಿತವಾಗಿಯೇ ಅಭಿನಂದನೆಗಳು. ವಿಶ್ವಕಪ್ ನಮ್ಮದು’ ಎಂದು ಬರೆದುಕೊಂಡಿದ್ದಾರೆ.

ಭಾರತ ತಂಡವು ಬಲಿಷ್ಠ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡವನ್ನು ಸೋಲಿಸಿ ಫೈನಲ್ ಪ್ರವೇಶ ಮಾಡಿದೆ. ಕಳೆದ ಎರಡು ಐಸಿಸಿ ಟೂರ್ನಿಗಳಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಭಾರತ ತಂಡಕ್ಕೆ ಪೆಟ್ಟು ನೀಡಿದ್ದವು. 2022ರಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ಸೆಮಿಫೈನಲ್‌ನಲ್ಲಿ ಭಾರತವನ್ನು ಸೋಲಿಸಿತ್ತು. 2023ರಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ಫೈನಲ್‌ನಲ್ಲಿ ಭಾರತವನ್ನು ಸೋಲಿಸಿತ್ತು.

ಇದನ್ನೂ ಓದಿ:ಟಿ20 ವಿಶ್ವಕಪ್​ನಲ್ಲಿ ಫೈನಲ್​ ಪಂದ್ಯ​.. ಟೀಂ ಇಂಡಿಯಾಗೆ ಕಾಡ್ತಿದೆ ಏಕಮಾತ್ರ ಚಿಂತೆ.. ಏನದು..

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಫೈನಲ್ ಆರಂಭಕ್ಕೂ ಮುನ್ನವೇ ಟೀಂ ಇಂಡಿಯಾಗೆ Congratulations ಹೇಳಿದ ಬಾಲಿವುಡ್ ಸ್ಟಾರ್​..!

https://newsfirstlive.com/wp-content/uploads/2024/06/IND-VS-SA-2.jpg

Load More