newsfirstkannada.com

​IPLನಲ್ಲಿ ಆರ್ಭಟಿಸಿದ್ದ ವಿರಾಟ್​ ವಿಶ್ವಕಪ್​ನಲ್ಲಿ ಸೈಲೆಂಟ್.. ಕೊಹ್ಲಿರನ್ನ ಬೆಂಚ್ ಕಾಯಿಸ್ತಾರಾ ಕ್ಯಾಪ್ಟನ್ ರೋಹಿತ್?

Share :

Published June 13, 2024 at 8:51am

  T20 ವಿಶ್ವಕಪ್​ನ 3 ಪಂದ್ಯಗಳಲ್ಲಿ ಕೊಹ್ಲಿ ಎಷ್ಟು ರನ್ ಗಳಿಸಿದ್ದಾರೆ?

  ರೋಹಿತ್ ಶರ್ಮಾರನ್ನ ನಿರಾಸೆ ಮಾಡ್ತಿದೆಯಾ ಕೊಹ್ಲಿ ಬ್ಯಾಟಿಂಗ್

  ಅಮೆರಿದಲ್ಲಿ ನಡೆಯದ ಕಿಂಗ್ ಕೊಹ್ಲಿ ದರ್ಬಾರ್, ಫ್ಯಾನ್ಸ್​​ಗೆ ನಿರಾಸೆ

ಒಂದೆಡೆ ಟೀಮ್ ಇಂಡಿಯಾ ಟಿ20 ವಿಶ್ವಕಪ್ ರಣರಂಗದಲ್ಲಿ ಗೆಲುವಿನ ಪತಾಕೆ ಹಾರಿಸ್ತಿದೆ. ಆದ್ರೆ, ಇನ್ನೊಂದೆಡೆ ಚಾಂಪಿಯನ್​​​ ಪ್ಲೇಯರ್ ವಿರಾಟ್​​ ಕೊಹ್ಲಿ​ ರನ್ ಬರ ಎದುರಿಸ್ತಿದ್ದಾರೆ. ಬಿಗ್ ಟೂರ್ನಮೆಂಟ್​​​​ ಅಂತ ಬಂದ್ರೆ ಮುಂಚೂಣಿಯಲ್ಲಿದ್ದು, ಜೈಕಾರ ಹಾಕಿಸಿಕೊಳ್ತಿದ್ರು. ಆದ್ರೀಗ ತಲೆ ತಗ್ಗಿಸಿ ಪೆವಿಲಿಯನ್​​​ನತ್ತ ಹೆಜ್ಜೆ ಹಾಕ್ತಾರೆ. ಕೊಹ್ಲಿ ಕೈ ಕೊಡ್ತಾ ಇರೋದು ಟೀಮ್​ ಇಂಡಿಯಾಗೆ ನುಂಗಲಾರದ ತುತ್ತಾಗಿದೆ.

T20 ವಿಶ್ವಕಪ್ ರಣರಂಗದಲ್ಲಿ ‘ರಣಧೀರ’ ಸೈಲೆಂಟ್​​​..!

ವಿಶ್ವ ಕ್ರಿಕೆಟ್​​​​​​​​​​​ಗೆ ಒಬ್ಬನೇ ಡಾನ್​​, ಒಬ್ಬನೇ ಚಕ್ರಾಧಿಪತಿ ಅದು ಒನ್​​​​​​ ಆ್ಯಂಡ್ ಒನ್ಲಿ ಕಿಂಗ್ ಕೊಹ್ಲಿ. ಆದ್ರೀಗ ಇದೇ ರನ್​ ಮಷೀನ್​ T20 ವಿಶ್ವಕಪ್ ಅಖಾಡದಲ್ಲಿ ಸೈಲೆಂಟಾಗಿದ್ದಾರೆ. ಎದುರಾಳಿಗೆ ಚಳ್ಳೆಹಣ್ಣು ತಿನ್ನಿಸಿ ತಲೆ ಎತ್ತಿ ಮೆರೆದಾಡಬೇಕಿದ್ದ ರಣಧೀರ ರನ್ ಬರ ಎದುರಿಸ್ತಿದ್ದಾರೆ. ಪ್ರಸಕ್ತ ಟೂರ್ನಿಯಲ್ಲಿ ಆಡಿದ 3 ಪಂದ್ಯಗಳಲ್ಲಿ ಕೊಹ್ಲಿ ನಿರಾಸೆ ಮೂಡಿಸಿರೋದು, ಅಭಿಮಾನಿಗಳ ಬೇಸರ ತರಿಸಿದೆ.

ಐರ್ಲೆಂಡ್​​​ ವಿರುದ್ಧ 1 ರನ್​​ಗೆ ಸುಸ್ತಾದ ಕಿಂಗ್ ಕೊಹ್ಲಿ..!

ಐರ್ಲೆಂಡ್​​​ ವಿರುದ್ಧ ಜಯಿಸಿ ಟೀಮ್ ಇಂಡಿಯಾ ಟೂರ್ನಮೆಂಟ್​ನಲ್ಲಿ ಶುಭಾರಂಭ ಏನೋ ಮಾಡ್ತು. ಆದ್ರೆ ಆ ಪಂದ್ಯದಲ್ಲಿ ಭಾರತ ಗೆದ್ರೂ ಕಿಂಗ್ ಕೊಹ್ಲಿ ಸೋತಿದ್ರು. ಸೂಪರ್​​​ ಸ್ಟಾರ್ ಬ್ಯಾಟಿಂಗ್ ನೋಡಲೆಂದೇ ಸಾವಿರಾರು ಜನ ಮೈದಾನಕ್ಕೆ ನುಗ್ಗಿ ಬಂದಿದ್ರು. ಆದ್ರೆ ಅವರ ಆಸೆಗೆ ಕೊಹ್ಲಿ ತಣ್ಣೀರೆರೆಚಿದ್ರು. ಬಲಾಢ್ಯವಲ್ಲದ ಐರ್ಲೆಂಡ್​ ವಿರುದ್ಧ ಬರೀ 4 ರನ್​ಗೆ ಆಟ ನಿಲ್ಲಿಸಿದ್ರು.

ಪಾಕ್​​ ಎದುರು 1 ಫೋರ್​​ಗೆ ವಿರಾಟ್​​​ ಆಟ ಕ್ಲೋಸ್​​​..!

ಐರ್ಲೆಂಡ್​​ ವಿರುದ್ಧ ಮುಗ್ಗರಿಸಿದ್ದ ಕಿಂಗ್ ಕೊಹ್ಲಿ ಬದ್ಧವೈರಿ ಪಾಕ್​ ವಿರುದ್ಧನಾದ್ರು ಅಬ್ಬರಿಸ್ತಾರೆ ಅನ್ನೋದು ಎಲ್ಲರ ನಿರೀಕ್ಷೆಯಾಗಿತ್ತು. ಯಾಕಂದ್ರೆ, ಪಾಕಿಸ್ತಾನ ಎದುರು ಔಟ್ ​ಸ್ಟ್ಯಾಂಡಿಂಗ್ ರೆಕಾರ್ಡ್​ ಹೊಂದಿದ್ರು. ಆದ್ರೆ ಆ ಭರವಸೆ ಹುಸಿಯಾಯ್ತು. ಪ್ರತಿ ಬಾರಿ ವೀರಾಸೇನಾನಿಯಂತೆ ಹೋರಾಡ್ತಿದ್ದ ಟ್ರೂ ಫೈಟರ್​ ಕೇವಲ 4 ರನ್​ಗೆ ಒಪ್ಪಿಸಿ ಅಭಿಮಾನಿಗಳನ್ನ ಬೇಸರದ ಕಡಲಲ್ಲಿ ಮುಳುಗುವಂತೆ ಮಾಡಿದ್ರು. ಇನ್ನು ಕ್ರಿಕೆಟ್​ನ ಶಿಶು ಅಮೆರಿಕ ತಂಡದ ವಿರುದ್ಧ ವಿರಾಟ್​ ಕೊಹ್ಲಿ ಸೊನ್ನೆ ಸುತ್ತಿರುವುದು ಭಾರೀ ಆಘಾತ ನೀಡಿದೆ. ಏಕೆಂದರೆ ಈಗತಾನೆ ಕ್ರಿಕೆಟ್​ ಕ್ಷೇತ್ರಕ್ಕೆ ಆಗಮಿಸಿರುವ ಅಮೆರಿಕ ತಂಡದ ವಿರುದ್ಧ ಕೊಹ್ಲಿ ಡಕೌಟ್ ಆಗಿದ್ದು ನಿರಾಸೆ ಭಾರೀ ಮೂಡಿಸಿದೆ. ಇದು ಕ್ಯಾಪ್ಟನ್​ ರೋಹಿತ್​ಗೂ ನುಂಗಲಾರದ ತುತ್ತಾಗಿದೆ.

ಕಿಂಗ್ ಕೊಹ್ಲಿ 2024ನೇ ಟಿ20 ವಿಶ್ವಕಪ್​ನಲ್ಲಿ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಟವಾಡ್ತಿಲ್ಲ. ಆರಂಭಿಕನಾಗಿ ಕಂಪ್ಲೀಟ್ ಫೇಲಾಗಿದ್ದಾರೆ. ಐರ್ಲೆಂಡ್​ ಹಾಗೂ ಪಾಕ್​​ ಎದುರಿನ ಕಳಪೆ ಆಟ, ಅವರ ಫಾರ್ಮ್​ ಬಗ್ಗೆ ಪ್ರಶ್ನೆ ಮೂಡುವಂತೆ ಮಾಡಿದೆ.

2024ನೇ T20 ವಿಶ್ವಕಪ್​ನಲ್ಲಿ ಕೊಹ್ಲಿ..!

ಪ್ರಸಕ್ತ ಟಿ20 ವಿಶ್ವಕಪ್​​ನಲ್ಲಿ ಕಿಂಗ್ ಕೊಹ್ಲಿ ಎರಡು 2 ಪಂದ್ಯವಾಡಿ ಜಸ್ಟ್​​ 5 ರನ್ನಷ್ಟೇ ಬಾರಿಸಿದ್ದಾರೆ. ಇದಕ್ಕಾಗಿ 8 ಎಸೆತ ತೆಗೆದುಕೊಂಡಿದ್ದು, 2.50 ಬ್ಯಾಟಿಂಗ್ ಎವರೇಜ್ ಆಗಿದೆ.

ಇದನ್ನೂ ಓದಿ: ಅಪಾರ್ಟ್​​ಮೆಂಟ್​ನಲ್ಲಿ ಭೀಕರ ಅಗ್ನಿ.. ಒಂದೇ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಭಾರತೀಯರು ಸಜೀವ ದಹನ

ಕಿಂಗ್ ಕೊಹ್ಲಿ ಓರ್ವ ಅಪ್ರತಿಮ ಆಟಗಾರ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಆದ್ರೀಗ ಇಂತಹ ವಿರಾಟ್ ರನ್​ಗಳಿಸಲು ತಡಬಡಾಸ್ತಿದ್ದಾರೆ. ನಿನ್ನೆ ಭಾರತ ತಂಡ ಅಮೆರಿಕಾವನ್ನ ಎದುರಿಸಿ ಗೆಲುವು ಪಡೆದುಕೊಂಡಿದೆ. ಈ ಮೂಲಕ ರೋಹಿತ್ ಬಾಯ್ಸ್​ ಹ್ಯಾಟ್ರಿಕ್ ಗೆಲುವು ಪಡೆದುಕೊಂಡಿದ್ದಾರೆ. ಬಿಗ್ ಸ್ಕೋರ್​​​ ಗಳಿಸಲು ಪರದಾಡ್ತಿರೋ ಕಿಂಗ್​​ ಕೊಹ್ಲಿಗೆ ಅಮೆರಿಕ ವಿರುದ್ಧ ಡಕೌಟ್ ಆಗಿ ಮತ್ತೊಂದು ನಿರಾಸೆಗೆ ಕಾರಣರಾದರು. ಆದ್ರೀಗ ಕಮ್​ಬ್ಯಾಕ್​​ ಅನಿವಾರ್ಯವಾಗಿದೆ. ಯಾಕಂದ್ರೆ ಕೊಹ್ಲಿ ಓರ್ವ ಮ್ಯಾಚ್ ವಿನ್ನರ್​​. ಫಾರ್ಮ್​ಗೆ ಮರಳಿದ್ರೆ ತಂಡದ ಬ್ಯಾಟಿಂಗ್​​ ಬಲ ಇನ್ನಷ್ಟು ಹೆಚ್ಚಲಿದೆ.

ಇದನ್ನೂ ಓದಿ: ರಾಜ್ಯದ ಜಿಲ್ಲೆಗಳಲ್ಲಿ ವರುಣಾರ್ಭಟ.. ಮನೆ ಮೇಲೆ ಮರ ಬಿದ್ದು ಮಹಿಳೆ ಗಂಭೀರ; ಇಂದು ಮಳೆಯ ಎಚ್ಚರಿಕೆ?

ಐಪಿಎಲ್​ನಲ್ಲಿ ಸಾಲಿಡ್​ ಪ್ರದರ್ಶನ ನೀಡಿದ ಕೊಹ್ಲಿ, ಆ ಬಳಿಕ ಬ್ರೇಕ್​ ತೆಗೆದುಕೊಂಡಿದ್ರು. ವಿಶ್ವಕಪ್​ ಅಭ್ಯಾಸ ಪಂದ್ಯದಿಂದಲೂ ದೂರ ಉಳಿದಿದ್ರು. ಇದೀಗ ಆಡಿದ 2 ಪಂದ್ಯಗಳಲ್ಲೂ ಫೇಲ್​ ಆಗಿದ್ದಾರೆ. ಅಮೆರಿಕ ಎದುರಿನ ಪಂದ್ಯದಲ್ಲಿ 2 ದಿನ ಗ್ಯಾಪ್​ ತೆಗೆದುಕೊಂಡು ಆಡಿದರು ಫಲಿತಾಂಶ ಬರಲಿಲ್ಲ. ವೀಕ್ನೆಸ್ ಮೇಲೆ ವರ್ಕ್​ ಮಾಡಿಕೊಂಡು, ಸ್ಟ್ರಾಂಗ್​ ಮೈಂಡ್​ಸೆಟ್​ನೊಂದಿಗ ಕೊಹ್ಲಿ ಕಮ್​ಬ್ಯಾಕ್​ ಮಾಡಲಿ ಅನ್ನೋದು ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ಪ್ರಾರ್ಥನೆಯಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

​IPLನಲ್ಲಿ ಆರ್ಭಟಿಸಿದ್ದ ವಿರಾಟ್​ ವಿಶ್ವಕಪ್​ನಲ್ಲಿ ಸೈಲೆಂಟ್.. ಕೊಹ್ಲಿರನ್ನ ಬೆಂಚ್ ಕಾಯಿಸ್ತಾರಾ ಕ್ಯಾಪ್ಟನ್ ರೋಹಿತ್?

https://newsfirstlive.com/wp-content/uploads/2024/06/VIRAT_KOHLI-12.jpg

Load More