/newsfirstlive-kannada/media/post_attachments/wp-content/uploads/2024/06/ROHIT-SHARMA-13.jpg)
ಇಂದು ಟಿ20 ವಿಶ್ವಕಪ್​​ಗೆ ತೆರೆ ಬೀಳುತ್ತಿದೆ. ಫೈನಲ್ ಫೈಟ್​​ನಲ್ಲಿ ಸೋಲಿಲ್ಲದ ಸರದಾರರು ಮುಖಾಮುಖಿಯಾಗ್ತಿದ್ದು, ಅಜೇಯವಾಗಿಯೇ ಟ್ರೋಫಿ ಗೆಲ್ಲಲು ಎದುರು ನೋಡ್ತಿವೆ. ಹರಿಣಗಳು ಚೊಚ್ಚಲ ವಿಶ್ವಕಪ್ ಮೇಲೆ ಕಣ್ಣಿಟ್ಟಿದ್ರೆ. ಇತ್ತ ಟೀಮ್ ಇಂಡಿಯಾ, 17 ವರ್ಷಗಳ ಬಳಿಕ ಟಿ20 ವಿಶ್ವ ಮುಕುಟ ಮುಡಿಗೇರಿಸಿಕೊಳ್ಳುಲು ಪಣ ತೊಟ್ಟಿದೆ.
ಟಿ20 ವಿಶ್ವಕಪ್​ನಲ್ಲಿ ಇಂದು ಫೈನಲ್​ ಫೈಟ್​..!
29 ದಿನ.. 55 ಪಂದ್ಯಗಳು.. ಯಾರ್ ಆಗ್ತಾರೆ ಚಾಂಪಿಯನ್.. ಈ ಪ್ರಶ್ನೆಯ ಉತ್ತರಕ್ಕಾಗಿ ಅಭಿಮಾನಿಗಳು ಕಾಯ್ತಿದ್ದ ದಿನ ಬಂದೇ ಬಿಟ್ಟಿದೆ. ಟಿ20 ವಿಶ್ವಕಪ್ ಸಮರದ ಫೈನಲ್​​​ಗೆ ವೇದಿಕೆ ಸಜ್ಜಾಗಿದೆ. ಇಂಡೋ ಹಾಗೂ ಸೌತ್ ಆಫ್ರಿಕಾ ನಡುವಿನ ಫೈನಲ್​ ಬ್ಯಾಟಲ್​​ಗೆ ಬರ್ಬೋಡೋಸ್ ಸಾಕ್ಷಿಯಾಗ್ತಿದ್ದು, ಸೋಲಿಲ್ಲದ ಸರದಾರರ ವಾರ್​​ನಲ್ಲಿ ಯಾರ್ ಆಗ್ತಾರೆ ಚಾಂಪಿಯನ್ ಎಂಬ ಕುತೂಹಲ ಗರಿಗೆದರಿದೆ.
ವಿಶ್ವಕಪ್​ ಇತಿಹಾಸದಲ್ಲಿ ಅಜೇಯ ತಂಡಗಳ ಫೈನಲ್​..!
ವಿಶ್ವಕಪ್​ ಇತಿಹಾಸದಲ್ಲೇ ಸೋಲಿಲ್ಲದ ತಂಡಗಳು, ಫೈನಲ್ಸ್​ನಲ್ಲಿ ಮುಖಾಮುಖಿಯಾಗಿದಿಲ್ಲ. ಇದೇ ಮೊದಲ ಬಾರಿ ಫೈನಲ್ ಫೈಟ್​ನಲ್ಲಿ ಸೋಲನ್ನೇ ಅರಿಯದ ತಂಡಗಳ ಕಾದಾಟ ನಡೀತಿದೆ. ಫೈನಲ್ಸ್​ನಲ್ಲೇ ಅಜೇಯವಾಗಿ ಉಳಿದು ವಿಶ್ವಕಪ್ ಗೆಲ್ಲೋ ಲೆಕ್ಕಚಾರದಲ್ಲಿವೆ. ಹೀಗಾಗಿ ಈ ಅಜೇಯ ತಂಡಗಳ ನಡುವಿನ ಹೈವೋಲ್ಟೇಜ್​ ಬ್ಯಾಟಲ್​ನಲ್ಲಿ ಯಾರು, ಸೋಲಿಲ್ಲದ ಸರದಾರರಾಗಿ ವಿಶ್ವಕಪ್​ ಕಿರೀಟ ಮತ್ತಿಡುತ್ತಾರೆ ಎಂಬ ಕುತೂಹಲ ಹುಟ್ಟಿಹಾಕಿದೆ.
ರೋಹಿತ್ ನಂಬಿಕೆ ಉಳಿಸಿಕೊಳ್ತಾರಾ ವಿರಾಟ್​ ಕೊಹ್ಲಿ..?
17 ವರ್ಷಗಳ ಬಳಿಕ ಟೀಮ್ ಇಂಡಿಯಾ ಟಿ20 ವಿಶ್ವಕಪ್​ಗೆ ಮುತ್ತಿಡುವ ವಿಶ್ವಾಸದಲ್ಲಿದೆ. ಆದ್ರೆ, ವಿರಾಟ್ ಕೊಹ್ಲಿಯ ವೈಫಲ್ಯ ಏಕಮಾತ್ರ ಚಿಂತೆಯಾಗಿ ಕಾಡ್ತಿದೆ. ಇದರ ಹೊರತಾಗಿಯೂ ವಿರಾಟ್ ಬೆನ್ನಿಗೆ ನಾಯಕ ರೋಹಿತ್ ಆ್ಯಂಡ್ ಟೀಮ್ ಮ್ಯಾನೇಜ್​ಮೆಂಟ್​ ನಿಂತಿದ್ದು, ಇಂದಿನ ಮಹಾ ಸಮರದಲ್ಲಿ ಅಬ್ಬರಿಸ್ತಾರೆ ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಕ್ಯಾಪ್ಟನ್​ ರೋಹಿತ್, ನಂಬಿಕೆ ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಕೊಹ್ಲಿ ಮೇಲಿದೆ. ಕೊಹ್ಲಿಯೇ ಅಲ್ಲ. ಶಿವಂ ದುಬೆಯೂ ಫೈನಲ್​ ಫೈಟ್​ನಲ್ಲಿ ವಿಧ್ವಂಸಕಾರಿ ಆಟವಾಡಬೇಕಿದೆ.
ಟೀಮ್ ಇಂಡಿಯಾ ಬೇಟೆಗೆ ಹರಿಣಗಳು ಸಜ್ಜು..!
ಸೆಮೀಸ್​ ಗಂಡಾಂತರ ತಪ್ಪಿಸಿಕೊಂಡಿರುವ ಸೌತ್ ಆಫ್ರಿಕಾ, ಈ ಸಲ ಟಿ20 ವಿಶ್ವಕಪ್ ಗೆದ್ದು ಇತಿಹಾಸ ಸೃಷ್ಟಿಸುವ ಛಲದಲ್ಲಿದೆ. ಸದೃಢ ಬ್ಯಾಟಿಂಗ್, ಬೌಲಿಂಗ್ ಪಡೆಯನ್ನೇ ಹೊಂದಿರುವ ಮಾಕ್ರಮ್ ಪಡೆ, ಕೊನೆ ಎಸೆತದವರೆಗೂ ಗೆಲುವಿಗಾಗಿ ಹೋರಾಟ ನಡೆಸಲಿದ್ದಾರೆ. ಹೀಗಾಗಿ ಹರಿಣಗಳ ಬೇಟೆಗೆ ವಿಶೇಷ ಗೇಮ್​​​​​ಪ್ಲಾನ್​ ಆ್ಯಂಡ್ ಸ್ಟ್ರಾಟರ್ಜಿ ರೂಪಿಸಬೇಕಿದೆ.
ಫೈನಲ್​​ಗೂ ಮಳೆಕಾಟ.. ಫಲಿತಾಂಶಕ್ಕೆ ಮೀಸಲು ದಿನ..!​
ಇಂದಿನ ಫೈನಲ್​ ಪಂದ್ಯಕ್ಕೂ ಮಳೆಯ ಕಾಟ ತಪ್ಪಿದಿಲ್ಲ. ಹವಾಮಾನ ವರದಿ ಪ್ರಕಾರ ಇಂದು ಶೇ.70ರಷ್ಟು ಮಳೆಯಾಗೋ ಸಾಧ್ಯತೆ ಇದೆ. ಮಳೆಯಿಂದಾಗಿ ಪಂದ್ಯವನ್ನಾಡಲು ಸಾಧ್ಯವಾಗದಿದ್ರೆ, ಮೀಸಲು ದಿನವಾದ ನಾಳೆ ಪಂದ್ಯ ನಡೆಯಲಿದೆ. ರಿಸರ್ವ್ ಡೇ ಕೂಡ ಪಂದ್ಯ ನಡೆಯದೇ ಅಂತ್ಯವಾದ್ರೆ. ಎರಡೂ ತಂಡಗಳನ್ನ ಜಂಟಿ ಚಾಂಪಿಯನ್ಸ್ ಎಂದು ಘೋಷಿಲಾಗುತ್ತೆ..
ಒಟ್ನಲ್ಲಿ.. ಅತ್ತ ಮೊದಲ ಬಾರಿಗೆ ಫೈನಲ್​​ಗೆ ಎಂಟ್ರಿ ನೀಡಿರುವ ಸೌತ್ ಆಫ್ರಿಕಾ, ಟ್ರೋಫಿ ಗೆಲುವಿನ ಕನಸು ಕಾಣ್ತಿದ್ರೆ. ಇತ್ತ ರೋಹಿತ್ ಶರ್ಮಾ ನೇತೃತ್ವದ ಬಲಿಷ್ಠ ಟೀಮ್ ಇಂಡಿಯಾ, 17 ವರ್ಷಗಳ ಬಳಿಕ ಕೋಟ್ಯಾಂತರ ಭಾರತೀಯರ ಕನಸು ನನಸಾಗಿಸಲು ಪಣ ತೊಟ್ಟಿದೆ.
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್