Advertisment

ಜೂನ್ 27 ರಂದು 2ನೇ ಸೆಮಿ ಫೈನಲ್.. ಭಾರತದ ಎದುರಾಳಿ ತಂಡ ಯಾವುದು ಗೊತ್ತಾ..?

author-image
Ganesh
Updated On
ಜೂನ್ 27 ರಂದು 2ನೇ ಸೆಮಿ ಫೈನಲ್.. ಭಾರತದ ಎದುರಾಳಿ ತಂಡ ಯಾವುದು ಗೊತ್ತಾ..?
Advertisment
  • ಇವತ್ತು ಆಸ್ಟ್ರೇಲಿಯಾ-ಭಾರತದ ನಡುವೆ ಪಂದ್ಯ
  • 2ನೇ ಸೆಮಿ ಫೈನಲ್​​ ಪಂದ್ಯದಲ್ಲಿ ಭಾರತ ಸೆಣಸಾಟ
  • 2022ರ ಸೋಲು ತೀರಿಸಿಕೊಳ್ಳಲು ಭಾರತ ರೆಡಿ

ಟಿ20 ವಿಶ್ವಕಪ್​​ನ ಜ್ವರ ಮತ್ತಷ್ಟು ಹೆಚ್ಚಾಗುತ್ತಿದ್ದು, ಸೆಮಿ ಫೈನಲ್ ತಂಡಗಳ ಸೋಲು ಗೆಲುವಿನ ಲೆಕ್ಕಾಚಾರ ಶುರುವಾಗಿದೆ. ಈಗಾಗಲೇ ಸೆಮೀಸ್​ಗೆ ಎಂಟ್ರಿ ನೀಡಿರುವ ಭಾರತ ತಂಡವು ಸೆಮಿ ಫೈನಲ್​​ನಲ್ಲಿ ಯಾರ ವಿರುದ್ಧ ಆಡಲಿದೆ ಅನ್ನೋದು ರಿವೀಲ್ ಆಗಿದೆ.

Advertisment

ಜೂನ್ 27 ರಂದು ನಡೆಯಲಿರುವ ಎರಡನೇ ಸೆಮಿ ಫೈನಲ್ ಪಂದ್ಯದಲ್ಲಿ ಭಾರತವು ಇಂಗ್ಲೆಂಡ್ ವಿರುದ್ಧ ಹೋರಾಡಲಿದೆ. ಇಂಗ್ಲೆಂಡ್ ವಿರುದ್ಧ ಗೆಲವು ಸಾಧಿಸಿದ್ರೆ ಫೈನಲ್ ಪ್ರವೇಶ ಮಾಡಲಿದೆ. 2022ರಲ್ಲಿ ನಡೆದ ಟಿ20 ವಿಶ್ವಕಪ್​​ನಲ್ಲೂ ಭಾರತ ಇಂಗ್ಲೆಂಡ್ ವಿರುದ್ಧ ಆಡಿ ಸೋತಿತ್ತು. ನವೆಂಬರ್ 10, 2022ರಂದು ನಡೆದ ಸೆಮಿ ಫೈನಲ್​​ನಲ್ಲಿ ಇಂಗ್ಲೆಂಡ್ 10 ವಿಕೆಟ್​ಗಳ ಗೆಲುವು ಸಾಧಿಸಿತ್ತು.

ಇದನ್ನೂ ಓದಿ:ಕೊಹ್ಲಿ, ರೋಹಿತ್ ಇಬ್ಬರೂ ಫೇಲ್.. ಜೈಸ್ವಾಲ್ ಕಣಕ್ಕಿಳಿಯುವ ನಿರೀಕ್ಷೆ.. ಕೊಕ್ ಯಾರಿಗೆ?

publive-image

ಮತ್ತೊಂದು ಕಡೆ ದಕ್ಷಿಣ ಆಫ್ರಿಕಾ ಕೂಡ ಸೆಮಿ ಫೈನಲ್​​ಗೆ ಲಗ್ಗೆ ಇಟ್ಟಿದೆ. ಆದರೆ ದಕ್ಷಿಣ ಆಫ್ರಿಕಾ ವಿರುದ್ಧ ಆಡುವ ಪಂದ್ಯ ಯಾವುದೆಂದು ಇನ್ನೂ ನಿರ್ಧಾರ ಆಗಿಲ್ಲ. ಆಸ್ಟ್ರೇಲಿಯಾ, ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶ. ಈ ಮೂರು ತಂಡಗಳ ಸೋಲು, ಗೆಲುವಿನ ಮೇಲೆ ನಿರ್ಧಾರ ಆಗಲಿದೆ. ಇಂದು ಇಂಡಿಯಾ ವಿರುದ್ಧ ಆಸ್ಟ್ರೇಲಿಯಾ ಸೋತು, ಬಾಂಗ್ಲಾದೇಶದ ವಿರುದ್ಧ ಅಫ್ಘಾನ್ ಗೆದ್ದರೆ.. ಅಫ್ಘಾನಿಸ್ತಾನ ಸೆಮಿಫೈನಲ್ ಪ್ರವೇಶ ಮಾಡಲಿದೆ. ಇವತ್ತು ಆಸ್ಟ್ರೇಲಿಯಾ ಗೆದ್ದರೆ ದಕ್ಷಿಣ ಆಫ್ರಿಕಾಗೆ ಸವಾಲ್ ಆಗಲಿದೆ.

Advertisment

ಇದನ್ನೂ ಓದಿ:ರಕ್ತ ಚರಿತ್ರೆಯ ಪಟ್ಟಣಗೆರೆ ಶೆಡ್​​​​​​​​​ನಲ್ಲಿ ಮತ್ತೊಂದು ಅನುಮಾನ.. RTO ಅಸ್ತ್ರ ಪ್ರಯೋಗಿಸಿದ ಪೊಲೀಸರು..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment
Advertisment
Advertisment