newsfirstkannada.com

All the best team India; ವಿಶ್ವಕಪ್ ಸೆಮಿಫೈನಲ್ ಆಡ್ತಿರುವ ಭಾರತದ ಪ್ಲೇಯಿಂಗ್-11 ಹೇಗಿರುತ್ತದೆ..?

Share :

Published June 27, 2024 at 7:21am

  ಟಿ20 ವಿಶ್ವಕಪ್​​ನಲ್ಲಿ ಭಾರತ ತಂಡಕ್ಕೆ ನಿರ್ಣಾಯಕ ದಿನ

  ಇಂಗ್ಲೆಂಡ್ ವಿರುದ್ಧ ಮಾಡು ಇಲ್ಲವೇ ಮಡಿ ಹೋರಾಟ

  ರಾತ್ರಿ 8 ಗಂಟೆಯಿಂದ ಪಂದ್ಯ ಆರಂಭ ಆಗಲಿದೆ

ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ T20 ವಿಶ್ವಕಪ್ ಸೆಮಿಫೈನಲ್​​​ನಲ್ಲಿ ಇವತ್ತು ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಮಾಡು ಇಲ್ಲವೇ ಮಡಿ ಹೋರಾಟದ ಪಂದ್ಯದಲ್ಲಿ ಗೆದ್ದವರು ಫೈನಲ್ ಪ್ರವೇಶ ಮಾಡಲಿದ್ದಾರೆ.

ಗಯಾನದಲ್ಲಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ರಾತ್ರಿ 8 ಗಂಟೆಯಿಂದ ಪಂದ್ಯ ಆರಂಭವಾಗಲಿದೆ. ಫೈನಲ್ ಪ್ರವೇಶ ಮಾಡಿದ ತಂಡವು ಜೂನ್ 29 ರಂದು ವಿಶ್ವಕಪ್​​ಗಾಗಿ ಅಂತಿಮ ಹೋರಾಟ ಮಾಡಲಿದೆ. 2022ರಲ್ಲಿ ನಡೆದ ಟಿ20 ವಿಶ್ವಕಪ್​​ನಲ್ಲೂ ಭಾರತ ಇಂಗ್ಲೆಂಡ್ ವಿರುದ್ಧ ಆಡಿ ಸೋತಿತ್ತು. ನವೆಂಬರ್ 10, 2022ರಂದು ನಡೆದ ಸೆಮಿ ಫೈನಲ್​​ನಲ್ಲಿ ಇಂಗ್ಲೆಂಡ್ 10 ವಿಕೆಟ್​ಗಳ ಗೆಲುವು ಸಾಧಿಸಿತ್ತು. ಹೀಗಾಗಿ ಭಾರತ ತಂಡಕ್ಕೆ ಇದು ಸೇಡಿನ ಹಾಗೂ ಪ್ರತಿಷ್ಠೆಯ ಪಂದ್ಯವಾಗಿದೆ.

ಇದನ್ನೂ ಓದಿ:ಇಂಗ್ಲೆಂಡ್, ಅಫ್ಘಾನಿಸ್ತಾನ್ ಯಾವುದೂ ಅಲ್ಲ.. ಈ ತಂಡ ವಿಶ್ವಕಪ್ ಗೆಲ್ಲುತ್ತೆ ಎಂದ ಮಾಜಿ ಕ್ರಿಕೆಟಿಗ

ಭಾರತ ತಂಡವು ವಿಶ್ವಕಪ್​​ನಲ್ಲಿ ಅಜೇಯ ತಂಡವಾಗಿ ಮುನ್ನುಗ್ಗುತ್ತಿರೋದ್ರಿಂದ ತಂಡದಲ್ಲಿ ಯಾವುದೇ ಬದಲಾವಣೆಯ ನಿರೀಕ್ಷೆ ಇಲ್ಲ. ಆರಂಭಿಕ ಬ್ಯಾಟ್ಸಮನ್​​, ಕ್ಯಾಪ್ಟನ್ ಫಾರ್ಮ್​ಗೆ ಮರಳಿರೋದು ತಂಡಕ್ಕೆ ಪ್ಲಸ್ ಪಾಯಿಂಟ್ ಆಗಿದೆ. ಇತ್ತ ಕೊಹ್ಲಿ ಫಾರ್ಮ್​​ಗೆ ಬಂದರೆ ತಂಡ ಮತ್ತಷ್ಟು ಬಲಿಷ್ಠವಾಗಲಿದೆ.

ಸಂಭಾವ್ಯ ಪ್ಲೇಯಿಂಗ್-11

ರೋಹಿತ್ ಶರ್ಮಾ (ಕ್ಯಾಪ್ಟನ್), ವಿರಾಟ್ ಕೊಹ್ಲಿ, ರಿಷಬ್ ಪಂತ್, ಸೂರ್ಯ ಕುಮಾರ್ ಯಾದವ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ಅಕ್ಸರ್ ಪಟೇಲ್, ಜಡೇಜಾ, ಅರ್ಷ್​​ದೀಪ್ ಸಿಂಗ್, ಕುಲ್ದೀಪ್ ಯಾದವ್, ಬೂಮ್ರಾ

ಮತ್ತೊಂದು ಕಡೆ ಅಫ್ಘಾನಿಸ್ತಾನ್ ಹಾಗೂ ದಕ್ಷಿಣ ಆಫ್ರಿಕಾ ನಡುವೆ ಸೆಮಿಫೈನಲ್ ಪಂದ್ಯ ನಡೆಯುತ್ತಿದ್ದು, ಇಲ್ಲಿ ಅಫ್ಘಾನ್ ಸೋಲಿನ ಸುಳಿಗೆ ಸಿಲುಕಿದೆ.

ಇದನ್ನೂ ಓದಿ:ಭಾರತ-ಇಂಗ್ಲೆಂಡ್ ಪಂದ್ಯಕ್ಕೆ ಮೀಸಲು ದಿನ ಇಲ್ಲ.. ಮಳೆಯಿಂದ ಪಂದ್ಯ ರದ್ದಾದರೆ ಫೈನಲ್​ಗೆ ಹೋಗೋದ್ಯಾರು?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

All the best team India; ವಿಶ್ವಕಪ್ ಸೆಮಿಫೈನಲ್ ಆಡ್ತಿರುವ ಭಾರತದ ಪ್ಲೇಯಿಂಗ್-11 ಹೇಗಿರುತ್ತದೆ..?

https://newsfirstlive.com/wp-content/uploads/2024/06/IND-VS-ENG.jpg

Load More