newsfirstkannada.com

ಈ ವಿಶ್ವಕಪ್​​ನಲ್ಲಿ ಇಂಗ್ಲೆಂಡ್​ ಜೊತೆಯಿದೆ ​​ಅದೃಷ್ಟದ ದೇವತೆ.. ಹೇಗೆಲ್ಲ ವರದಾನ ಆಗಿದೆ ಗೊತ್ತಾ..? ಅದ್ಭುತ..!

Share :

Published June 27, 2024 at 10:45am

Update June 27, 2024 at 11:31am

    ಮತ್ತೊಂದು ಸೇಡಿನ ಸಮರ.. ಯುದ್ಧಕ್ಕೆ ಟೀಮ್​ ಇಂಡಿಯಾ ಸಿದ್ಧ

    ಆಸಿಸ್​​ನೇ ಬಿಟ್ಟಿಲ್ಲ.. ನೀವ್​ ಯಾವ ಲೆಕ್ಕ.. ನಿಮ್ಗೂ ಐತೆ ಹಬ್ಬ

    ಇಂಗ್ಲೆಂಡ್​ ಲಯನ್ಸ್​ ಬೇಟೆಗೆ, ಇಂಡಿಯನ್​ ಟೈಗರ್ಸ್​ ಕಾತರ

ಟಿ 20 ವಿಶ್ವಕಪ್​ ಟೂರ್ನಿ ಮತ್ತೊಂದು ಹೈವೋಲ್ಟೆಜ್​ ಕದನಕ್ಕೆ ಸಜ್ಜಾಗಿದೆ. ಗಯಾನಾದ ಪ್ರಾವಿಡೆನ್ಸ್​ ಸ್ಟೇಡಿಯಂನಲ್ಲಿ ಕ್ರಿಕೆಟ್​ ಲೋಕದ ಪವರ್​ಹೌಸ್​ಗಳ ಮುಖಾಮುಖಿಯಾಗಲಿದೆ. ಬಲಿಷ್ಠ ಟೀಮ್​ ಇಂಡಿಯಾ, ಬಲಾಢ್ಯ ಇಂಗ್ಲೆಂಡ್​​ ನಡುವಿನ ಕಾಳಗದ ಮೇಲೆ ವಿಶ್ವ ಕ್ರಿಕೆಟ್​ ಲೋಕದ ಕಣ್ಣಿದೆ. ಸೆಮಿಸ್​ ಸಮರದಲ್ಲಿ ಯಾರು? ಯಾರನ್ನ ಸೋಲಿಸಿ ಫೈನಲ್​ಗೆ ಎಂಟ್ರಿ ಕೊಡ್ತಾರೆ? ಎಂಬ ಕುತೂಹಲ ಕ್ರಿಕೆಟ್ ಲೋಕದ ಫೀವರ್​ ಹೆಚ್ಚಿಸಿದೆ.

ಮತ್ತೊಂದು ಸೇಡಿನ ಸಮರ..
2023ರ ಏಕದಿನ ವಿಶ್ವಕಪ್​ ಫೈನಲ್​ ಸೋಲಿನ ಸೇಡನ್ನ ಟೀಮ್​ ಇಂಡಿಯಾ ತೀರಿಸಿಕೊಂಡಿದ್ದಾಗಿದೆ. ಸೆಂಟ್​ ಲೂಸಿಯಾದಲ್ಲಿ ಜಯಭೇರಿ ಬಾರಿಸಿ ಆಸ್ಟ್ರೇಲಿಯಾವನ್ನ ಕಿಕ್​ಔಟ್​ ಮಾಡಿದ್ದಾಯ್ತು. ಇದೀಗ ಗಯಾನದಲ್ಲಿ ಗೆದ್ದು ಆಂಗ್ಲರಿಗೆ ಗೇಟ್​ಪಾಸ್​ ನೀಡಲು ಟೀಮ್​ ಇಂಡಿಯಾ ಸಜ್ಜಾಗಿದೆ. 2022ರ T20 ವಿಶ್ವಕಪ್​ನ ಸೆಮಿಸ್​ನಲ್ಲಿ ಹಿಗ್ಗಾಮುಗ್ಗಾ ಬಾರಿಸಿದ್ದ ಆಂಗ್ಲಪಡೆ, ಟೀಮ್​ ಇಂಡಿಯಾವನ್ನ ನಾಕ್​ಔಟ್​​ ಮಾಡಿತ್ತು. ಇದೀಗ ಪೇ ಬ್ಯಾಕ್​​ ಟೈಮ್​ ಬಂದಾಗಿದೆ. ಇಂಡಿಯನ್​ ಟೈಗರ್ಸ್​​, ಅಂಗ್ಲರನ್ನ ಬೇಟೆಯಾಡಲು ತುದಿಗಾಲಲ್ಲಿ ನಿಂತಿದ್ದಾರೆ.

ಇದನ್ನೂ ಓದಿ:‘ಪ್ಲೀಸ್ ಯಾರನ್ನೂ ಭೇಟಿಗೆ ಬಿಡಬೇಡಿ..’ ಜೈಲು ಅಧಿಕಾರಿಗಳ ಮುಂದೆ ದರ್ಶನ್ ಪಶ್ಚಾತಾಪದ ಮಾತುಗಳು..?

ಇಂಗ್ಲೆಂಡ್​ನ​​ ಅದೃಷ್ಟದಾಟ
ಈ ವಿಶ್ವಕಪ್​ ಟೂರ್ನಿಯಲ್ಲಿ ಟೀಮ್​ ಇಂಡಿಯಾ ಬೊಂಬಾಟ್​ ಪರ್ಫಾಮೆನ್ಸ್​ ನೀಡಿದೆ. ಒಂದು ಪಂದ್ಯ ಮಳೆಯಿಂದ ರದ್ದಾಗಿದ್ದನ್ನ ಬಿಟ್ರೆ, ಉಳಿದೆಲ್ಲಾ ಪಂದ್ಯಗಳಲ್ಲೂ ಪರ್ಫಾಮ್​ ಮಾಡಿ ವಿಜಯ ಸಾಧಿಸಿದೆ. ಸೋಲಿಲ್ಲದ ಸರದಾರನಂತೆ ಸೆಮಿಸ್​ಗೆ ಎಂಟ್ರಿ ಕೊಟ್ಟಿದೆ.
ಎದುರಾಳಿ ಇಂಗ್ಲೆಂಡ್​ಗೆ​​ ಅದೃಷ್ಟ ಕೈ ಹಿಡಿದಿದೆ. ಟೂರ್ನಿಯ ಮೊದಲ ಪಂದ್ಯ ಮಳೆಯಿಂದ ರದ್ದಾದ್ರೆ, 2ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲ್ತು. ಅಂತಿಮವಾಗಿ ರನ್​ರೇಟ್​ ಲೆಕ್ಕಾಚಾರದಲ್ಲಿ ಸೂಪರ್​​ 8ಗೆ ಎಂಟ್ರಿ ಕೊಡ್ತು. ಸೂಪರ್​ 8ನಲ್ಲೂ ಸೌತ್​ ಆಫ್ರಿಕಾ ಎದುರು ಮುಖಭಂಗ ಅನುಭವಿಸಿತು. ಏಳು-ಬೀಳಿನ ಆಟದಲ್ಲಿ ಅದೃಷ್ಟ ಕೈ ಹಿಡಿದ ಪರಿಣಾಮ ಇಂದು ಸೆಮಿಸ್​ ಅಖಾಡದಲ್ಲಿದೆ.

ಬ್ಯಾಟ್​ & ಬಾಲ್​ ನಡುವೆ ವಾರ್..!
ವಿಶ್ವಕಪ್​ ಅಖಾಡದಲ್ಲಿ ಬ್ಯಾಟಿಂಗ್​ಗಿಂತ ಬೌಲಿಂಗ್​ ಡಿಪಾರ್ಟ್​ಮೆಂಟ್​ ಟೀಮ್​ ಇಂಡಿಯಾ ಮ್ಯಾಚ್​ ವಿನ್ನಿಂಗ್​ ಸೀಕ್ರೆಟ್​ ಆಗಿ ಮಾರ್ಪಟ್ಟಿದೆ. ಇಂಗ್ಲೆಂಡ್​ ತಂಡಕ್ಕೆ ಬ್ಯಾಟಿಂಗ್​ ವಿಭಾಗವೇ ಬಲವಾಗಿದೆ. ಆಂಗ್ಲ ಪಡೆ ಬ್ಯಾಟರ್ಸ್​​ ಅಬ್ಬರದ ಆಟವಾಡ್ತಿದ್ರೆ, ಇಂಡಿಯನ್​ ಬೌಲರ್ಸ್​​ ರಣರಂಗದಲ್ಲಿ ಧೂಳೆಬ್ಬಿಸ್ತಿದ್ದಾರೆ. ಹೀಗಾಗಿ ಇಂದು ಬ್ಯಾಟ್​ ಅಂಡ್ ಬಾಲ್​ ನಡುವೆ ವಾರ್​​ ಏರ್ಪಡಲಿದೆ.

ಇದನ್ನೂ ಓದಿ:IND vs ENG ಸೆಮಿಫೈನಲ್ ಪಂದ್ಯ ಕ್ಯಾನ್ಸಲ್..? ವೆದರ್​​ ರಿಪೋರ್ಟ್​​ನಲ್ಲಿ ಶಾಕಿಂಗ್ ಮಾಹಿತಿ..!

ಅಗ್ರೆಸ್ಸಿವ್​ ನಾಯಕರ ಮುಖಾಮುಖಿ, ಕದನ ಕುತೂಹಲ
ರೋಹಿತ್​ ಶರ್ಮಾ-ಜೋಸ್​ ಬಟ್ಲರ್​.. ಇಬ್ಬರೂ ಅಗ್ರೆಸ್ಸಿವ್​ ಕ್ಯಾಪ್ಟನ್ಸ್​​. ನುಗ್ಗಿ ಹೊಡೆಯೋದೇ ಇಬ್ಬರ ಮಂತ್ರ. ತಾವು ಅಗ್ರೆಸ್ಸಿವ್​ ಇಂಟೆಂಟ್​ನಲ್ಲಿ ಬ್ಯಾಟಿಂಗ್​ ಮಾಡೋದಷ್ಟೇ ಅಲ್ಲ.. ಆನ್​ಫೀಲ್ಡ್​ನಲ್ಲಿದ್ದಷ್ಟು ಹೊತ್ತು ತಂಡ ಕೂಡ ಹಾಗೇ ಪರ್ಫಾಮ್​ ಮಾಡಬೇಕು ಅನ್ನೋದು ಇಬ್ಬರ ನಿರೀಕ್ಷೆ. ಇಬ್ಬರು ಕ್ಯಾಪ್ಟನ್ಸ್​​​ ನಾನಾ? ನೀನಾ? ಎಂಬಂತೆ ಫೈಟ್​ ನಡೆಸೋದು ಕನ್​ಫರ್ಮ್​. ಹೀಗಾಗಿ ಇಂದಿನ ಕದನ ಸಿಕ್ಕಾಪಟ್ಟೆ ಕುತೂಹಲ ಮೂಡಿಸಿದೆ.

ಗಯಾನದಲ್ಲಿ ಮೊದಲ ಪಂದ್ಯ, ಕಂಡೀಷನ್ಸ್​ ಸವಾಲು
ಸೆಮಿಫೈನಲ್​ ಕದನ ನಡೀತಿರೋ ಗಯಾನಾದಲ್ಲಿ ಇಂಡಿಯಾ-ಇಂಗ್ಲೆಂಡ್​ ಎರಡೂ ತಂಡಗಳಿಗೂ ಕಂಡೀಷನ್ಸ್​ನ ಸವಾಲಿದೆ. ಈ ಟೂರ್ನಿಯಲ್ಲಿ ಮೊದಲ ಬಾರಿ ಈ ಮೈದಾನದಲ್ಲಿ ಉಭಯ ತಂಡಗಳು ಕಣಕ್ಕಿಳೀತಾ ಇವೆ. ಹೈ ಸ್ಕೋರ್​, ಲೋ ಸ್ಕೋರ್​ ಎರಡೂ ಗೇಮ್​ಗಳಿಗೆ ಈ ಪಿಚ್​ ಸಾಕ್ಷಿಯಾಗಿದೆ. ಬ್ಯಾಟ್ಸ್​​ಮನ್​ಗಳ ಜೊತೆ ಸ್ಪಿನ್ನರ್ಸ್​ ಹಾಗೂ ಮೀಡಿಯಂ ಪೇಸರ್ಸ್​ ಇಲ್ಲಿ ಮೇಲುಗೈ ಸಾಧಿಸಿದ್ದಾರೆ. ಈ ಕಂಡೀಷನ್ಸ್​ಗೆ​​ ಉಭಯ ತಂಡಗಳು ಹೇಗೆ ಹೊಂದಿಕೊಳ್ತವೆ ಅನ್ನೋದು ಕುತೂಹಲ ಮೂಡಿಸಿದೆ.

ಇದನ್ನೂ ಓದಿ:ಭಾರತ-ಇಂಗ್ಲೆಂಡ್ ಪಂದ್ಯಕ್ಕೆ ಮೀಸಲು ದಿನ ಇಲ್ಲ.. ಮಳೆಯಿಂದ ಪಂದ್ಯ ರದ್ದಾದರೆ ಫೈನಲ್​ಗೆ ಹೋಗೋದ್ಯಾರು?

ಮಳೆ ಬಂದ್ರೆ ಕಥೆ ಏನು? ಯಾರಿಗೆ ಫೈನಲ್​ ಟಿಕೆಟ್​?
ಇಂಡೋ-ಇಂಗ್ಲೆಂಡ್​​ ನಡೆಯೋ ಗಯಾನದಲ್ಲಿ ನಿನ್ನೆ ಮಳೆ ಸುರಿದಿದೆ. ಹವಮಾನ ಇಲಾಖೆ ಯೆಲ್ಲೋ ವಾರ್ನಿಂಗ್​ ಕೂಡ ಘೋಷಣೆ ಮಾಡಿತ್ತು. ಇಂದು ಕೂಡ ವರುಣ ಆರ್ಭಟಿಸೋ ಸಾಧ್ಯತೆಯಿದ್ದು, ಪಂದ್ಯಕ್ಕೆ ಮಳೆಯ ಭೀತಿ ಕಾಡ್ತಿದೆ. ಒಂದು ವೇಳೆ ಮಳೆಯಿಂದಾಗಿ ಪಂದ್ಯ ರದ್ದಾದ್ರೆ, ಟೀಮ್​ ಇಂಡಿಯಾ ಫೈನಲ್​ಗೆ ಎಂಟ್ರಿ ಕೊಡಲಿದೆ. ಟೂರ್ನಿಯಲ್ಲಿ ರೋಹಿತ್​ ಪಡೆ ಸೋಲೆ ಕಂಡಿಲ್ಲ. ಇಂಗ್ಲೆಂಡ್​ 2 ಪಂದ್ಯಗಳಲ್ಲಿ ಸೋತಿದೆ. ಈ ಲೆಕ್ಕಾಚಾರದಲ್ಲಿ ಭಾರತ ತಂಡ ಫೈನಲ್​ ಪ್ರವೇಶಿಸಲಿದೆ.

ಮಳೆ ಭೀತಿ ನಡುವೆಯೋ ಇಂದಿನ ಪಂದ್ಯ ನಡೆಯಲಿ ಅನ್ನೋದು ಭಾರತೀಯ ಕ್ರಿಕೆಟ್​ ಅಭಿಮಾನಿಗಳ ಆಸೆಯಾಗಿದೆ. ಸೇಡಿನ ಸಮರದಲ್ಲಿ ಇಂಡಿಯನ್​​ ಟೈಗರ್ಸ್​, ಥ್ರಿ ಲಯನ್ಸ್​ನ ಚಿಂದಿ ಉಡಾಯಿಸೋದನ್ನ ನೋಡೋ ಆಸೆ ಫ್ಯಾನ್ಸ್​ಗಿದೆ. ಗಯಾನದಲ್ಲಿ ಟೀಮ್​ ಇಂಡಿಯಾ ಆರ್ಭಟಿಸಲಿ. ಹಳೆ ಸೇಡನ್ನ ತೀರಿಸಿಕೊಂಡು, ಫೈನಲ್​ಗೆ ರಾಜನಂತೆ ಎಂಟ್ರಿ ಕೊಡಲಿ ಅನ್ನೋದು ನಮ್ಮ ಆಶಯವೂ ಕೂಡ.

ಇದನ್ನೂ ಓದಿ:ಇಂಗ್ಲೆಂಡ್, ಅಫ್ಘಾನಿಸ್ತಾನ್ ಯಾವುದೂ ಅಲ್ಲ.. ಈ ತಂಡ ವಿಶ್ವಕಪ್ ಗೆಲ್ಲುತ್ತೆ ಎಂದ ಮಾಜಿ ಕ್ರಿಕೆಟಿಗ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಈ ವಿಶ್ವಕಪ್​​ನಲ್ಲಿ ಇಂಗ್ಲೆಂಡ್​ ಜೊತೆಯಿದೆ ​​ಅದೃಷ್ಟದ ದೇವತೆ.. ಹೇಗೆಲ್ಲ ವರದಾನ ಆಗಿದೆ ಗೊತ್ತಾ..? ಅದ್ಭುತ..!

https://newsfirstlive.com/wp-content/uploads/2024/06/IND-VS-ENG-2.jpg

Load More