Advertisment

ಟಿ20 ವಿಶ್ವಕಪ್​ಗೆ 20 ಆಟಗಾರರ ಹೆಸರು ಬಹಿರಂಗ; IPLನಲ್ಲಿ ಫೇಲ್​​​​ ಆದವರ ಹೆಸರೂ ಇದೆ..!

author-image
Ganesh
Updated On
ಟಿ20 ವಿಶ್ವಕಪ್​ಗೆ 20 ಆಟಗಾರರ ಹೆಸರು ಬಹಿರಂಗ; IPLನಲ್ಲಿ ಫೇಲ್​​​​ ಆದವರ ಹೆಸರೂ ಇದೆ..!
Advertisment
  • ಆಯ್ಕೆ ಸಮಿತಿ ಮಾಡಿಕೊಂಡ ಶಾರ್ಟ್​​ ಲಿಸ್ಟ್​ ಬಹಿರಂಗ
  • ಟಿ-20 ವಿಶ್ವಕಪ್​​ಗೆ ಆಟಗಾರರ ಆಯ್ಕೆಗೆ ಬಿಸಿಸಿಐ ಕಸರತ್ತು
  • ರಿಯಾನ್ ಪರಾಗ್ ಹೆಸರು ಇಲ್ಲದಿರೋದು ಭಾರೀ ಅಚ್ಚರಿ ​

T20 ವಿಶ್ವಕಪ್ ಹತ್ತಿರ ಬರುತ್ತಿದೆ. ಐಪಿಎಲ್ 2024ರಲ್ಲಿ ಕೆಲವು ಆಟಗಾರರ ಪ್ರಚಂಡ ಫಾರ್ಮ್​​ನಿಂದಾಗಿ ಆಯ್ಕೆ ಸಮಿತಿಯ ಸದಸ್ಯರು ಗೊಂದಲದಲ್ಲಿದ್ದಾರೆ. ರಾಷ್ಟ್ರೀಯ ಮಾದ್ಯಮಗಳ ವರದಿ ಪ್ರಕಾರ, ಟಿ-20 ವಿಶ್ವಕಪ್‌ಗೆ 20 ಆಟಗಾರರ ಪಟ್ಟಿಯನ್ನು ಬಿಸಿಸಿಐ ರೆಡಿ ಮಾಡಿಕೊಂಡಿದೆ. ಆ ಪಟ್ಟಿಯಲ್ಲಿ ಯಾರೆಲ್ಲ ಇದ್ದಾರೆ ಎಂಬ ಮಾಹಿತಿ ಇದೀಗ ಬಹಿರಂಗವಾಗಿದೆ.

Advertisment

ಇದನ್ನೂ ಓದಿ: ರಾಮನವಮಿ ಸಂಭ್ರಮದ ವೇಳೆ ಕಿರಿಕ್; ಜೈ ಶ್ರೀರಾಮ್ ಎಂದಿದ್ದಕ್ಕೆ ಹಲ್ಲೆ ಮಾಡಿದ್ದ ಮೂವರು ಅರೆಸ್ಟ್.!

20 ಆಟಗಾರರ ಶಾರ್ಟ್​ಲಿಸ್ಟ್​ನಲ್ಲಿ 15 ಆಟಗಾರರನ್ನು ಆಯ್ಕೆ ಮಾಡಲಾಗುತ್ತದೆ. ಉಳಿದ ಐವರನ್ನು ಮೀಸಲು ಇರಿಸಬಹುದು. ಭಾರೀ ಚರ್ಚೆಗೆ ಒಳಗಾಗಿರುವ ವಿಚಾರ ಏನೆಂದರೆ ರಿಯಾನ್ ಪರಾಗ್ ಹೆಸರು ಪಟ್ಟಿಯಲ್ಲಿ ಇಲ್ಲದಿರುವುದು. ಐಪಿಎಲ್ 2024ರಲ್ಲಿ ಕಳಪೆ ಪ್ರದರ್ಶನ ನೀಡ್ತಿರುವ ಯಶಸ್ವಿ ಜೈಸ್ವಾಲ್, ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜಾ ಕೂಡ 20 ಆಟಗಾರರ ಪಟ್ಟಿಯಲ್ಲಿದ್ದಾರೆ.
20 ಆಟಗಾರರ ಪಟ್ಟಿಯಲ್ಲಿ ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್ ಮತ್ತು ವಿರಾಟ್ ಕೊಹ್ಲಿ ಸ್ಥಾನ ಪಡೆಯಬಹುದು.

ಇದನ್ನೂ ಓದಿ:ಟಿ-20 ವಿಶ್ವಕಪ್​ನಲ್ಲಿ ಫಿನಿಶರ್​ ರೋಲ್ ಮಾಡಲು ಕಾರ್ತಿಕ್​ಗೆ ಇಬ್ಬರು ಆಗಾರರು ಅಡ್ಡಿ..!

Advertisment

ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಓಪನಿಂಗ್ ಮಾಡಬಹುದು ಎನ್ನಲಾಗುತ್ತಿದೆ. ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್, ರಿಂಕು ಸಿಂಗ್, ರಿಷಬ್ ಪಂತ್, ಕೆಎಲ್ ರಾಹುಲ್ ಮತ್ತು ಸಂಜು ಸ್ಯಾಮ್ಸನ್ ಹೆಸರು ಕೇಳಿಬಂದಿದೆ.
ಆಲ್‌ರೌಂಡರ್‌ಗಳ ಬಗ್ಗೆ ಹೇಳುವುದಾದರೆ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ಆಯ್ಕೆ ಮಾಡಬಹುದು ಎನ್ನಲಾಗಿದೆ.

ಲೆಗ್ ಸ್ಪಿನ್ ಬೌಲಿಂಗ್‌ಗಾಗಿ ಕುಲದೀಪ್ ಯಾದವ್, ರವಿ ಬಿಷ್ಣೋಯ್ ಮತ್ತು ಯುಜ್ವೇಂದ್ರ ಚಹಾಲ್ ಇರಲಿದ್ದಾರೆ. ವೇಗದ ಬೌಲಿಂಗ್‌ನಲ್ಲಿ ಜಸ್ಪ್ರೀತ್ ಬುಮ್ರಾ ಅವರ ಸ್ಥಾನ ಬಹುತೇಕ ಖಚಿತವಾಗಿದೆ. ಮೊಹಮ್ಮದ್ ಸಿರಾಜ್, ಅವೇಶ್ ಖಾನ್ ಮತ್ತು ಅರ್ಶ್‌ದೀಪ್ ಸಿಂಗ್​​ ಚಾನ್ಸ್ ಒಲಿಯಬಹುದು. ಐಪಿಎಲ್​​ನಲ್ಲಿ ಮತ್ತೆ ಸಿಡಿದೆದ್ದಿರುವ ದಿನೇಶ್ ಕಾರ್ತಿಕ್​ಗೆ ಚಾನ್ಸ್ ಸಿಗೋದು ತುಂಬಾನೆ ವಿರಳ. ಯುವ ವೇಗಿ ಮಯಾಂಕ್ ಯಾದವ್‌ ಮೇಲೂ ಆಯ್ಕೆ ಸಮಿತಿ ಕಣ್ಣಿಟ್ಟಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ರೋಹಿತ್ ಜೊತೆ ಬಿಸಿಸಿಐ ಹೈ-ವೋಲ್ಟೇಜ್ ಮೀಟಿಂಗ್; ಪಾಂಡ್ಯಗೆ ಶಾಕಿಂಗ್ ನ್ಯೂಸ್​ ಕೊಟ್ಟ ಆಯ್ಕೆ ಸಮಿತಿ..!

Advertisment

20 ಆಟಗಾರರ ಪಟ್ಟಿ: ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್, ರಿಂಕು ಸಿಂಗ್, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್, ಕೆಎಲ್ ರಾಹುಲ್, ಸಂಜು ಸ್ಯಾಮ್ಸನ್, ರವೀಂದ್ರ ಜಡೇಜಾ, ಶಿವಂ ದುಬೆ, ಅಕ್ಷರ್ ಪಟೇಲ್, ಕುಲ್​ದೀಪ್ ಯಾದವ್, ಯುಜ್ವೇಂದ್ರ ಚಹಾಲ್, ರವಿ ಬಿಷ್ಣೋಯ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಅರ್ಷ್​​ದೀಪ್ ಸಿಂಗ್, ಅವೇಶ್ ಖಾನ್.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment