newsfirstkannada.com

ಧೋನಿ, ಯುವಿ, ಗಂಭೀರ್​ಗಿಂತ ಪಾಕ್​​ ವಿರುದ್ಧ​ ಕೊಹ್ಲಿಯೇ ಬೆಸ್ಟ್​.. ಟ್ರ್ಯಾಕ್​ ರೆಕಾರ್ಡ್​​ ಕೇಳಿದ್ರೆ ಶಾಕ್ ಆಗ್ತೀರಾ!

Share :

Published June 8, 2024 at 10:37pm

Update June 8, 2024 at 10:40pm

    ಮೆಲ್ಬರ್ನ್​ ಮೈದಾನದಲ್ಲಿ ಟೀಮ್ ಇಂಡಿಯಾವನ್ನು ಗೆಲ್ಲಿಸಿದ್ದ ಕೊಹ್ಲಿ

    ಗ್ರೇಟೆಸ್ಟ್​ ಇನ್ನಿಂಗ್ಸ್ ನಮ್ಮನೆಲ್ಲ ರೋಮಾಂಚನಗೊಳಿಸೋದು ಪಕ್ಕಾ

    ಯುವಿ, ಧೋನಿ, ಗಂಭೀರ್​ಗಿಂತ ಬಿಗ್ ರೆಕಾರ್ಡ್ ಮಾಡ್ತಾರೆ ಕೊಹ್ಲಿ

ಭಾರತ ಮತ್ತು​​​ ಪಾಕಿಸ್ತಾನದ ನಡುವೆ ಪಂದ್ಯ ನಡೆಯುತ್ತದೆ ಎಂದು ನಮಗೆಲ್ಲ ನೆನಪಾಗೋದು ಕಿಂಗ್ ಕೊಹ್ಲಿಯ ಬ್ಯಾಟಿಂಗ್​. ಯಾಕಂದ್ರೆ ಬದ್ಧವೈರಿ ವಿರುದ್ಧ ವಿರಾಟ್ ಅಮೋಘವಾದ ಬ್ಯಾಟಿಂಗ್ ಪ್ರದರ್ಶನ ಮಾಡಿ ಅಭಿಮಾನಿಗಳನ್ನ ರಂಜಿಸಿದ್ದಾರೆ. ಟಿ20 ವಿಶ್ವಕಪ್ ಟೂರ್ನಿಗಳಲ್ಲಿ ಪಾಕ್​​ ವಿರುದ್ಧ ರನ್ ಮಷಿನ್​​ ಕಟ್ಟಿದ ಸೂಪರ್ ಇನ್ನಿಂಗ್ಸ್​ಗಳನ್ನ ಯಾವೊಬ್ಬ ಕ್ರಿಕೆಟ್ ಪ್ರೇಮಿ ಮರೆಯಲು ಸಾಧ್ಯವಿಲ್ಲ. ಸದ್ಯ ಪಾಕ್ ಜೊತೆಗಿನ ಪಂದ್ಯದಲ್ಲಿ ಕೊಹ್ಲಿಯ ಟ್ರ್ಯಾಕ್ ರೆಕಾರ್ಡ್​ ಈ ಕೆಳಗಿನಂತಿದೆ.

ಇದನ್ನೂ ಓದಿ: T20 World Cup; ಪಾಕಿಸ್ತಾನ ವಿರುದ್ಧ ವಿಶೇಷ ದಾಖಲೆ ಬರೆಯಲಿರೋ ಕಿಂಗ್ ಕೊಹ್ಲಿ.. ರೆಕಾರ್ಡ್ ಯಾವುದು? 

ಟಿ20 ವಿಶ್ವಕಪ್​ನಲ್ಲಿ ಕಿಂಗ್ ಕೊಹ್ಲಿ ಕಟ್ಟಿರುವಂತ ಗ್ರೇಟೆಸ್ಟ್​ ಇನ್ನಿಂಗ್ಸ್ ಎಲ್ಲರನ್ನು ರೋಮಾಂಚನಗೊಳಿಸುತ್ತದೆ​​. 2016ರ ಟಿ20 ವಿಶ್ವಕಪ್​ನಲ್ಲಿ ಈಡನ್ ಗಾರ್ಡನ್ಸ್​ನಲ್ಲಿ ಪಾಕ್ ವಿರುದ್ಧ ಕೊಹ್ಲಿ ವೀರಾವೇಶ ತೋರಿದ್ದರು. 37 ಎಸೆತಗಳಲ್ಲಿ 7 ಬೌಂಡ್ರಿ, 1 ಸಿಕ್ಸರ್ ಸಮೇತ 55 ರನ್ ಗಳಿಸಿ ಪಾಕ್​ಗೆ​ ಸೋಲುಣ್ಣಿಸಿದ್ದರು. ಇದಾದ ಬಳಿಕ 2022ರ ಟಿ20 ವಿಶ್ವಕಪ್​​ನಲ್ಲಿ ಭಾರತ ಸೋಲಿನ ಸುಳಿಯಲ್ಲಿತ್ತು. ಮೆಲ್ಬರ್ನ್​ ಮೈದಾನದಲ್ಲಿ ಸಿಡಿದೆದ್ದ ಕೊಹ್ಲಿ ಗೆಲುವಿಗಾಗಿ ಟೊಂಕಕಟ್ಟಿ ಹೋರಾಡಿದ್ದರು. 53 ಎಸೆತಗಳಲ್ಲಿ ಸ್ಫೋಟಕ 82 ರನ್ ಚಚ್ಚಿ ಅಜೇಯರಾಗಿ ಉಳಿದು, ಭಾರತಕ್ಕೆ ರೋಚಕ ಗೆಲುವು ತಂದಿದ್ದರು.

ಇದನ್ನೂ ಓದಿ: T20 World Cup; ಉಗ್ರರ ಬೆದರಿಕೆ.. ಇಂಡಿಯಾ- ಪಾಕ್ ಮ್ಯಾಚ್​ ನಡೆಯೋದೆ ಡೌಟ್!

ವಿರಾಟ್ ಕೊಹ್ಲಿ ಇಲ್ಲಿವರೆಗೆ ಪಾಕ್ ವಿರುದ್ಧ ಟಿ20 ವಿಶ್ವಕಪ್​ನಲ್ಲಿ 10 ಮ್ಯಾಚ್​ಗಳನ್ನು ಆಡಿದ್ದು 482 ರನ್​ಗಳನ್ನು ಗಳಿಸಿದ್ದಾರೆ. ಈ ರನ್ಸ್​ ಇಡೀ ಭಾರತದ ಆಟಗಾರರ ಪೈಕಿ ಅತಿ ಹೆಚ್ಚು ರನ್ ಆಗಿದೆ. ಭಾರತದ ಜೊತೆ ಆಡಿರುವ ಯಾವೋಬ್ಬ ಪಾಕ್ ಪ್ಲೇಯರ್ ಕೂಡ ಇಷ್ಟೊಂದು ರನ್ಸ್ ಹೊಡೆದಿಲ್ಲ. ಪಾಕಿಸ್ತಾನ ಜೊತೆಗಿನ ಪಂದ್ಯವೆಂದರೆ ಎದೆಯುಬ್ಬಿಸಿ ಆಡುವ ವಿರಾಟ್​ ರನ್​ಗಳ ಕೋಟೆಯನ್ನು ಕಟ್ಟುತ್ತಾರೆ. 10 ಪಂದ್ಯಗಳಲ್ಲಿ 482 ರನ್ ಗಳಿಸಿರುವ ವಿರಾಟ್ 81.33 ಸರಾಸರಿ ಹೊಂದಿದ್ದು 123.85 ಸ್ಟ್ರೈಕ್​ರೇಟ್ ಹೊಂದಿದ್ದಾರೆ. ಇನ್ನು 82 ರನ್​ಗಳನ್ನು ಗಳಿಸಿರುವುದು ಪಾಕ್ ವಿರುದ್ಧದ ವೈಯಕ್ತಿಕ ಹೆಚ್ಚು ರನ್ ಆಗಿದೆ.

ಪಾಕಿಸ್ತಾನ ವಿರುದ್ಧ ವಿರಾಟ್ ಕೊಹ್ಲಿ ಇನ್ನೂ 18 ರನ್​ ಗಳಿಸಿದರೆ ಒಟ್ಟು 500 ರನ್​ ಗಳಿಸಿದ ಏಕೈಕ ಭಾರತೀಯ ಆಟಗಾರ ಆಗುತ್ತಾರೆ. ಉಳಿದಂತೆ ಯುವರಾಜ್ ಸಿಂಗ್ 155, ಗೌತಮ್ ಗಂಭೀರ್ 139, ಧೋನಿ 93, ರೋಹಿತ್ ಶರ್ಮಾ 114 ರನ್​ಗಳನ್ನು ಮಾತ್ರ ಗಳಿಸಿದ್ದಾರೆ. ನಾಳೆಯ ಪಂದ್ಯದಲ್ಲಿ ವಿರಾಟ್ ಕೊಹ್ಲಿಯ ಬ್ಯಾಟಿಂಗ್​ ಮೇಲೆ ಎಲ್ಲರ ಕಣ್ಣು ನೆಟ್ಟಿದೆ ಎಂದು ಹೇಳಲಾಗುತ್ತಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಧೋನಿ, ಯುವಿ, ಗಂಭೀರ್​ಗಿಂತ ಪಾಕ್​​ ವಿರುದ್ಧ​ ಕೊಹ್ಲಿಯೇ ಬೆಸ್ಟ್​.. ಟ್ರ್ಯಾಕ್​ ರೆಕಾರ್ಡ್​​ ಕೇಳಿದ್ರೆ ಶಾಕ್ ಆಗ್ತೀರಾ!

https://newsfirstlive.com/wp-content/uploads/2024/06/VIRAT_KOHLI_NEW-1.jpg

Load More