newsfirstkannada.com

ಇಂದು ಕೊಹ್ಲಿಗೆ ಗೇಟ್​ಪಾಸ್​.. ಭಾರೀ ಬದಲಾವಣೆಯೊಂದಿಗೆ ಭಾರತ ಕಣಕ್ಕೆ.. ಅದಕ್ಕೂ ಇದೆ ಒಂದು ದೊಡ್ಡ ಕಾರಣ..!

Share :

Published June 15, 2024 at 9:28am

Update June 15, 2024 at 9:29am

  ಸೋಲಿಲ್ಲದ ಸರದಾರನಿಗೆ ಇದು ಹೊಸ ಆರಂಭ..!

  ಕೆನಡಾ ಎದುರಿನ ಪಂದ್ಯದಲ್ಲಿ ಯಾರಿಗೆ ಸಿಗುತ್ತೆ ರೆಸ್ಟ್​..?

  ಇಂದು ವಿರಾಟ್​​ ಕೊಹ್ಲಿಗೆ ರೆಸ್ಟ್​.. ಜೈಸ್ವಾಲ್​​ಗೆ ಸ್ಥಾನ..?

ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಸೂಪರ್ 8 ಪ್ರವೇಶಿಸಿದೆ. ಅನ್​​ಸ್ಟಾಪಬಲ್ ಆಗಿ ಮುನ್ನುಗ್ಗುತ್ತಿರುವ ಟೀಮ್ ಇಂಡಿಯಾ, ಇಂದು ಕೆನಡಾ ವಿರುದ್ಧ ಆಡಲು ಸಜ್ಜಾಗಿದೆ. ಕೆನಡಾ ಎದುರು ಸುಲಭ ಗೆಲುವಿನ ನಿರೀಕ್ಷೆಯಲ್ಲೇ ಇದೆ. ಕ್ರಿಕೆಟ್​ ಶಿಶುವನ್ನ ಅಷ್ಟು ಸುಲಭವಾಗಿ ಪರಿಗಣಿಸುವ ಹಾಗಿಲ್ಲ.

ಟಿ20 ವಿಶ್ವಕಪ್‌ನ ಮತ್ತೊಂದು ಪಂದ್ಯಕ್ಕೆ ಟೀಮ್ ಇಂಡಿಯಾ ಸಜ್ಜಾಗಿದೆ. ಇಂದು ಕ್ರಿಕೆಟ್ ಶಿಶು ಕೆನಡಾ ಎದುರು ಕೊನೆ ಲೀಗ್​ ಪಂದ್ಯವನ್ನಾಡಲಿದೆ. ದೈತ್ಯ ಟೀಮ್ ಇಂಡಿಯಾ ಹಾಗೂ ಕ್ರಿಕೆಟ್​ ಶಿಶು ಕೆನಡಾದ ಪಂದ್ಯಕ್ಕೆ ಫ್ಲೋರಿಡಾದ ಸೆಂಟ್ರಲ್ ಬ್ರೋವರ್ಡ್ ರೀಜನಲ್ ಪಾರ್ಕ್ ಸ್ಟೇಡಿಯಂ ವೇದಿಕೆಯಾಗಿದೆ. ಪಂದ್ಯದಲ್ಲಿ ಟೀಮ್ ಇಂಡಿಯಾ ಬದಲಾವಣೆಗಳೊಂದಿಗೆ ಕಣಕ್ಕಿಳಿಯೋದು ಕನ್ಫರ್ಮ್.
ಹ್ಯಾಟ್ರಿಕ್​ ಗೆಲುವಿನೊಂದಿಗೆ ಸೂಪರ್ 8 ಗ್ರ್ಯಾಂಡ್ ಎಂಟ್ರಿ ನೀಡಿರುವ ಟೀಮ್ ಇಂಡಿಯಾಗೆ, ಕೆನಡಾ ಎದುರಿನ ಪಂದ್ಯ ಆಟಕ್ಕುಂಟು ಲೆಕ್ಕಕ್ಕಿಲ್ಲ. ಹೀಗಾಗಿ ಸೂಪರ್-8ಗೂ ಮುನ್ನ ಕೆಲ ಸ್ಟಾರ್ ಆಟಗಾರರಿಗೆ ವಿಶ್ರಾಂತಿ ನೀಡೋ ಸಾಧ್ಯತೆ ದಟ್ಟವಾಗಿದೆ. ಕೆಲ ನ್ಯೂನ್ಯತೆ ಸರಿಪಡಿಸಿಕೊಳ್ಳುವ ಲೆಕ್ಕಚಾರದಲ್ಲಿದೆ.

ಇದನ್ನೂ ಓದಿ:Rain Alert: ರಾಜ್ಯದ 8 ಜಿಲ್ಲೆಗಳಲ್ಲಿ ಇಂದಿನಿಂದ ಭರ್ಜರಿ ಮಳೆ.. ಹವಾಮಾನ ಇಲಾಖೆ ಎಚ್ಚರಿಕೆ

ಇಂದು ಕೊಹ್ಲಿಗೆ ರೆಸ್ಟ್​.. ಜೈಸ್ವಾಲ್​​ಗೆ ಸ್ಥಾನ..?
ಟೀಮ್ ಇಂಡಿಯಾ ಲೀಗ್​​ನ ಸ್ಟೇಜ್​​ನಲ್ಲಿ ಸೋಲಿಲ್ಲದ ಸರದಾರ ನಿಜ. ಕೆಲ ವೈಫಲ್ಯಗಳು ಟೀಮ್ ಇಂಡಿಯಾಗೆ ಕಾಡ್ತಾನೇ ಇದೆ. ಈ ಪೈಕಿ ಮೊದಲನೆಯದ್ದೇ ಓಪನರ್ಸ್ ಸಮಸ್ಯೆ. ಹೀಗಾಗಿ ಸೂಪರ್-8ರ ಪಂದ್ಯಕ್ಕೂ ಮುನ್ನ ಕೆನಡಾ ಎದುರು ಹೊಸ ಆರಂಭಿಕ ಜೋಡಿಯನ್ನ ಕಣಕ್ಕಿಳಿಯೋ ಸಾಧ್ಯತೆ ಇದ್ದು, ರೋಹಿತ್ ಶರ್ಮಾ ಜೊತೆ ಆರಂಭಿಕರಾಗಿ ವಿಫಲರಾಗಿರುವ ವಿರಾಟ್​​​ಗೆ ರೆಸ್ಟ್​ ನೀಡಿ ಯಶಸ್ವಿ ಜೈಸ್ವಾಲ್ ಅಥವಾ ಸಂಜು ಸ್ಯಾಮ್ಸನ್​ಗೆ ಚಾನ್ಸ್​ ನೀಡೋ ಸಾಧ್ಯತೆ ಹೆಚ್ಚಿದೆ.

ಬೂಮ್ರಾಗೆ ವಿಶ್ರಾಂತಿ.. ಸ್ಪಿನ್ನರ್​​ಗೆ ಚಾನ್ಸ್..?
ಇಂದಿನ ಪಂದ್ಯದಲ್ಲಿ ಸ್ಟಾರ್​ ಬೌಲರ್​ ಜಸ್​ಪ್ರೀತ್​​​ ಬೂಮ್ರಾಗೆ ಟೀಮ್ ಮ್ಯಾನೇಜ್​ಮೆಂಟ್​ ವಿಶ್ರಾಂತಿ ನೀಡೋ ಚಿಂತನೆ ನಡೆಸಿದೆ. ಸೂಪರ್​​-8ನ ಮಹತ್ವದ ಪಂದ್ಯಗಳಿಗೆ ಬೂಮ್ರಾ, ಕ್ರೂಶಿಯಲ್​.. ಹೀಗಾಗಿ ಬೂಮ್ರಾರನ್ನ ಫ್ರೆಶ್​ ಆಗಿ ಇರಿಸಿಕೊಳ್ಳುವ ಉದ್ದೇಶ ಹೊಂದಿರುವ ಮ್ಯಾನೇಜ್​ಮೆಂಟ್​, ಕುಲ್​ದೀಪ್ ಯಾದವ್ ಅಥವಾ ಲೆಗ್ ಸ್ಪಿನ್ನರ್ ಯಜುವೇಂದ್ರ ಚಹಲ್​​ಗೆ ಪ್ಲೇಯಿಂಗ್​ ಇಲೆವೆನ್​ನಲ್ಲಿ ಆಡಿಸುವ ಉದ್ದೇಶ ಹೊಂದಿದೆ. ಇದಕ್ಕೆ ಕಾರಣವೂ ಇದೆ.

ಇದನ್ನೂ ಓದಿ:‘ಅಲ್ಲಿ ಏನಾಗ್ತಿದೆ ಅನ್ನೋದು ನನಗೆ ಗೊತ್ತೇ ಇಲ್ಲ, ಸರ್..’ ಅಧಿಕಾರಿಗಳ ಮುಂದೆ ದರ್ಶನ್ ಮತ್ತೊಂದು ಹೇಳಿಕೆ

ಮುಂದಿನ ಎಲ್ಲಾ ಪಂದ್ಯಗಳನ್ನ ಟೀಮ್ ಇಂಡಿಯಾ, ವೆಸ್ಟ್ ಇಂಡೀಸ್​ನಲ್ಲೇ ಆಡಲಿದೆ. ಇಲ್ಲಿನ ಪಿಚ್​ಗಳು ಸ್ಪಿನ್ನರ್​ಗಳಿಗೆ ನೆರವಾಗಲಿದೆ. ಹೀಗಾಗಿ ಕುಲ್​​ದೀಪ್ ಯಾದವ್​​​, ಯಜುವೇಂದ್ರ ಚಹಲ್​​ರನ್ನ ನೇರ ಸೂಪರ್-8ನಲ್ಲಿ ಕಣಕ್ಕಿಳಿಸುವ ಬದಲಾಗಿ ಕೆನಡಾ ಎದುರು ಕಣಕ್ಕಿಳಿಸುವ ಲೆಕ್ಕಚಾರ ಇದೆ.

ಫ್ಯಾನ್ಸ್​ಗೆ ಈಗ ವಿಂಡೀಸ್ ಕಂಡೀಷನ್ಸ್​ ಚಿಂತೆ
ಗ್ರೂಪ್​ ಸ್ಟೇಜ್​​ನ ಮೊದಲ 3 ಪಂದ್ಯಗಳನ್ನ ಟೀಮ್ ಇಂಡಿಯಾ ಗೆದ್ದಿದೆ ನಿಜ. ಐರ್ಲೆಂಡ್, ಪಾಕಿಸ್ತಾನ, ಅಮೆರಿಕಾ ವಿರುದ್ಧ ಟೀಮ್ ಇಂಡಿಯಾ ನೀಡಿದ ಪ್ರದರ್ಶನ ಫ್ಯಾನ್ಸ್​ ಮನದಲ್ಲಿ ಆತಂಕ ಮೂಡಿಸಿದೆ. ಕ್ರಿಕೆಟ್ ಶಿಶುಗಳ ಎದುರೇ ದೈತ್ಯ ಬ್ಯಾಟರ್​ಗಳು ಪರದಾಡಿದ್ದಾರೆ. ಹೀಗಾಗಿ ವೆಸ್ಟ್ ಇಂಡೀಸ್​​ನ ಸ್ಲೋ ಟ್ರ್ಯಾಕ್​ನಲ್ಲಿ ಯಾವ ರೀತಿಯ ಪ್ರದರ್ಶನ ನೀಡ್ತಾರೆ ಅನ್ನೋದು ಅಭಿಮಾನಿಗಳಿಗೆ ಚಿಂತೆಯಾಗಿದೆ.

ಸೂಪರ್​​-8ನಲ್ಲಿ ಕಾದಿದೆ ರಿಯಲ್ ಟೆಸ್ಟ್​..!
ಬ್ಯಾಟಿಂಗ್ ವೈಫಲ್ಯದ ನಡುವೆಯೂ ಟೀಮ್ ಇಂಡಿಯಾ ನಿರಾಯಾಸವಾಗಿ ಸೂಪರ್​-8ಕ್ಕೆ ಕಾಲಿಟ್ಟಿದೆ. ಆದ್ರೆ, ಇದೇ ಸೂಪರ್​-8ನಲ್ಲೇ ಟೀಮ್ ಇಂಡಿಯಾಗೆ ರಿಯಲ್ ಟೆಸ್ಟ್​ ಕಾದಿದೆ. ಯಾಕಂದ್ರೆ, ಸೂಪರ್-8ನಲ್ಲಿ ಟೀಮ್ ಇಂಡಿಯಾಗೆ ಆಸ್ಟ್ರೇಲಿಯಾ, ಅಫ್ಘಾನಿಸ್ತಾನ, ಬಾಂಗ್ಲಾದೇಶದೊಂದಿಗೆ ಪೈಪೋಟಿ ನಡೆಸಲಿದೆ. ಗ್ರೂಪ್​ ಸ್ಟೇಜ್​ನಲ್ಲಿ ಅದ್ಬುತ ಆಟವಾಡಿರುವ ಈ ತಂಡಗಳು, ಯಾವುದೇ ಕ್ಷಣದಲ್ಲಾದರೂ ಟೀಮ್ ಇಂಡಿಯಾಗೆ ಟಕ್ಕರ್ ನೀಡಬಲ್ಲವು. ಹೀಗಾಗಿ ಇಂದಿನ ಕೆನಡಾ ಎದುರಿನ ಪಂದ್ಯದಲ್ಲೇ ಟೀಮ್ ಇಂಡಿಯಾ ಎಲ್ಲವನ್ನು ಸರಿಪಡಿಸಿಕೊಳ್ಳಬೇಕಿದೆ. ಇಲ್ಲ ಸೋಲು ಫಿಕ್ಸ್​..

ಇದನ್ನೂ ಓದಿ:Watch: ‘ಕೊನೆ ಸಲ ಅಪ್ಪನ ನೋಡುತ್ತಾನೆ ಕರೆಸಿ ಸಾರ್..’ ದರ್ಶನ್ ಕೇಸ್​ನಲ್ಲಿ ಅರೆಸ್ಟ್ ಆಗಿರೋ ಅನು ಅಕ್ಕ ಕಣ್ಣೀರು

ಒಟ್ನಲ್ಲಿ..! ನ್ಯೂಯಾರ್ಕ್​ಗಿಂತ ವಿಭಿನ್ನ ಕಂಡೀಷನ್ಸ್​ನಲ್ಲಿ ಟೀಮ್ ಇಂಡಿಯಾ ಹೊಸ ಆಧ್ಯಾಯ ಆರಂಭಿಸಲಿದ್ದು, ಈ ಕಂಡೀಷನ್ಸ್​ನಲ್ಲಿ ಯಾವ ರೀತಿಯ ಪ್ರದರ್ಶನ ನೀಡುತ್ತೆ ಅನ್ನೋದು ಕಾದುನೋಡಬೇಕಿದೆ.

ಇದನ್ನೂ ಓದಿ:ದರ್ಶನ್​​ಗೆ ಕಾಡಿತ್ತು ಪಶ್ಚತಾಪ.. ‘ಡೆವಿಲ್ ಶೂಟಿಂಗ್​​​ನಲ್ಲಿ ನಟ ಹೇಗಿದ್ದರು ಅಂದರೆ..’

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಇಂದು ಕೊಹ್ಲಿಗೆ ಗೇಟ್​ಪಾಸ್​.. ಭಾರೀ ಬದಲಾವಣೆಯೊಂದಿಗೆ ಭಾರತ ಕಣಕ್ಕೆ.. ಅದಕ್ಕೂ ಇದೆ ಒಂದು ದೊಡ್ಡ ಕಾರಣ..!

https://newsfirstlive.com/wp-content/uploads/2024/06/KOHLI-16.jpg

Load More