ಮಗುವಿನ ಕಾಯಿಲೆ ಗುಣಪಡಿಸಲು ಬ್ಲ್ಯಾಕ್​ ಮ್ಯಾಜಿಕ್ ಮೊರೆ ಹೋದ ಪೋಷಕರು! ನಂತರ ನಡೆದಿದ್ದೇ ಘೋರ ದುರಂತ

author-image
Gopal Kulkarni
Updated On
ಮಗುವಿನ ಕಾಯಿಲೆ ಗುಣಪಡಿಸಲು ಬ್ಲ್ಯಾಕ್​ ಮ್ಯಾಜಿಕ್ ಮೊರೆ ಹೋದ ಪೋಷಕರು! ನಂತರ ನಡೆದಿದ್ದೇ ಘೋರ ದುರಂತ
Advertisment
  • 6 ತಿಂಗಳ ಮಗುವನ್ನು ಗುಣಪಡಿಸಲು ತಾಂತ್ರಿಕ ಬಳಿ ಕರೆದೊಯ್ದ ಪೋಷಕರು
  • ಮಗುವನ್ನು ತಲೆ ಕೆಳಗೆ, ಕಾಲು ಮೇಲೆ ಮಾಡಿ ಬೆಂಕಿಯ ಕೆಳಗೆ ಹಿಡಿದ ತಾಂತ್ರಿಕ
  • ಪೂಜೆ ಮುಗಿದ ಬಳಿಕ ಪೋಷಕರಿಗೆ ಕಾದಿತ್ತು ದೊಡ್ಡ ಶಾಕ್! ಆಗಿದ್ದೇನು ಗೊತ್ತಾ?

ಅನಾರೋಗ್ಯಗೊಂಡ 6 ತಿಂಗಳ ಮಗುವಿಗೆ ಚಿಕಿತ್ಸೆ ನೀಡಲೆಂದು ಸ್ವಯಂ ಘೋಷಿತ ತಾಂತ್ರಿಕನ ಬಳಿ ಹೋದ ಕಾರಣ ಮಗುವಿನ ಕಣ್ಣಿಗೆ ತೀವ್ರ ಹಾನಿಗೊಳಗಾದ ಘಟನೆ ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯಲ್ಲಿ ನಡೆದಿದೆ. ತಾಂತ್ರಿಕ ವಿದ್ಯೆ ಬಲ್ಲವನೆಂದು ತಿಳಿದು ಮಗುವನ್ನು ಪೋಷಕರು ಆತನ ಬಳಿ ಮಗುವಿಗೆ ಬಂದಿರುವ ಕಾಯಿಲೆಯನ್ನು ಗುಣ ಮಾಡಿ ಎಂದು ಹೋಗಿದ್ದಾರೆ. ಈ ವೇಳೆ ಮಗುವನ್ನು ತಲೆ ಕೆಳಗೆ ಕಾಲು ಮೇಲೆ ಮಾಡಿ ಅಗ್ನಿಕುಂಡದ ಮೇಲ್ಗಡೆ ಜೋತು ಬಿಡಲಾಗಿದೆ. ಈ ಹುಚ್ಚಾಟದಿಂದಾಗಿ ಮಗು ಹೆಚ್ಚು ಕಡಿಮೆ ಕುರುಡಾಗಿದೆ ಎಂದು ಆಸ್ಪತ್ರೆಯ ಕೆಲ ವೈದ್ಯರು ದೃಢಪಡಿಸಿದ್ದಾರೆ.

ಈ ಒಂದು ಭೀಕರ ಘಟನೆ ನಡೆದಿದ್ದು ಮಾರ್ಚ್ 13 ರಂದು ಕೊಲಾರಾಸ್​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಗು ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದ ಕಾರಣ ತಾಂತ್ರಿಕ ರಘುವೀರ್ ಧಾಕಡ್ ಎಂಬುವವನ ಬಳಿ ಮಗುವನ್ನು ಕರೆದುಕೊಂಡು ಹೋಗಿದ್ದಾರೆ. ಅವನು ಮಗುವಿನಲ್ಲಿ  ಪ್ರೇತಾತ್ಮದ ಪ್ರವೇಶವಾಗಿದೆ ಎಂದು ಹೇಳಿ ಬ್ಲ್ಯಾಕ್​ ಮ್ಯಾಜಿಕ್​ನ ಕೆಲವು ಪೂಜೆಗಳನ್ನು ಮಾಡಲು ಶುರು ಮಾಡಿದ್ದಾನೆ.

ಇದನ್ನೂ ಓದಿ:ತಾಜ್​ ಮಹಲ್ ಗುಮ್ಮಟದ ಮೇಲಿದ್ದ 466 ಕೆಜಿ ಬಂಗಾರದ ಕಿರೀಟ ಏನಾಯ್ತು? ಕಾಣೆಯಾಗಿದ್ದು ಹೇಗೆ ಗೊತ್ತಾ?

publive-image

ಮಗುವನ್ನು ಬೆಂಕಿಗೆ ತಲೆ ಕೆಳಗೆ, ಕಾಲು ಮೇಲೆ ಮಾಡಿ ಪೂಜೆ ಮಾಡಲಾಗಿದೆ. ಪೋಷಕರು ಇದರಿಂದ ತಮ್ಮ ಮಗು ಸಂಪೂರ್ಣವಾಗಿ ಗುಣವಾಗಲಿದೆ ಎಂದು ನಂಬಿದ್ದರು.6 ತಿಂಗಳ ಹಸುಗೂಸು ಚಿತ್ಕರಿಸಿ ಅತ್ತರೂ ಕೂಡ ಹೆತ್ತವರಿಂದ ಹಿಡಿದು ಯಾರಿಗೂ ಕೂಡ ಕರುಣೆ ಬಂದಿಲ್ಲ, ಹಾಗೆಯೇ ತಾಂತ್ರಿಕ ಪೂಜೆಯನ್ನು ಮುಗಿಸಲಾಗಿದೆ.

ಪೂಜೆಯೆಲ್ಲಾ ಮುಗಿದು ಮೇಲೆ ಪೋಷಕರಿಗೆ ತಮ್ಮ ಮಗು ತುಂಬಾ ಗಂಭೀರ ಸ್ಥಿತಿಯಲ್ಲಿ ಬಳಲುತ್ತಿದೆ ಎಂದು ಅರಿವಾಗಿದೆ ಕೂಡಲೇ ಶಿವಪುರಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ ಎಂದು ಶಿವಪುರಿಯ ಎಸ್​ಪಿ ಅಮನ್ ಸಿಂಗ್ ಹೇಳಿದ್ದಾರೆ. ಮಗುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ತಾಂತ್ರಿಕ ರಘುವೀರ್​ ಧಾಕಡ್ ಮೇಲೆ ಕೇಸ್​ ರಜಿಸ್ಟರ್ ಆಗಿದೆ. ಪೊಲೀಸರು ಹೇಳುವ ಪ್ರಕಾರ ದಾಕಡ್​ ಸದ್ಯ ನಾಪತ್ತೆಯಾಗಿದ್ದಾನೆ ತನಿಖೆ ಜಾರಿಯಲ್ಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಭಾರತದಲ್ಲಿ ಮೊಟ್ಟ ಮೊದಲ ಟ್ರೈನ್ ಹೈಜಾಕ್ ನಡೆದಿದ್ದು ಯಾವಾಗ? ಮಾಡಿದ್ದು ಯಾರು? ಹೇಗಿತ್ತು ಆಪರೇಷನ್?

ಇನ್ನು ಮಗುವಿಗೆ ಚಿಕಿತ್ಸೆ ನೀಡಿದ ಶಿವಪುರಿ ಜಿಲ್ಲಾಸ್ಪತ್ರೆಯ ಡಾ. ಗಿರೀಶ್​ ಚತುರ್ವೇದಿ ಹೇಳುವ ಪ್ರಕಾರ, ಮಗುವಿನ ಕಣ್ಣುಗಳಿಗೆ ತೀವ್ರ ಹಾನಿಯುಂಟಾಗಿದೆ. ಮಗುವನ್ನು ಈಗಾಗಲೇ ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. 72 ಗಂಟೆಗಳ ಬಳಿಕವಷ್ಟೇ ಮಗುವಿನ ದೃಷ್ಟಿ ಮೊದಲನಂತಾಗಲಿದೆಯಾ ಅಥವಾ ಇಲ್ಲವಾ ಎಂಬುದು ತಿಳಿದು ಬರಲಿದೆ ಎಂದು ಹೇಳಿದ್ದಾರೆ. ಮಗುವಿನ ಕಣ್ಣುಗಳು ಗಂಭೀರವಾಗಿ ಗಾಯಗೊಂಡಿವೆ ಎಂದು ಗಿರೀಶ್ ಸ್ಪಷ್ಟಪಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment