ಮುಂಬೈ 26/11 ದಾಳಿಯ ಮಾಸ್ಟರ್​ ಮೈಂಡ್ ಗಡಿಪಾರು.. ಇಂದು ಮಧ್ಯಾಹ್ನ ಭಾರತಕ್ಕೆ ರಾಣಾ!

author-image
Gopal Kulkarni
Updated On
ಭಾರತಕ್ಕೆ ಕಾಲಿಟ್ಟ 26/11 ಮಾಸ್ಟರ್ ಮೈಂಡ್‌ ತಹವ್ವೂರ್​ ರಾಣಾ NIA ವಶಕ್ಕೆ; ಮುಂದೇನು?
Advertisment
  • ಭಾರತದ ಮೋಸ್ಟ್ ವಾಟೆಂಡ್​ ಉಗ್ರ ತಹಾವೂರ್ ರಾಣಾ ಕೊನೆಗೂ ಗಡಿಪಾರು
  • ಇಂದು ಮಧ್ಯಾಹ್ನ ದೆಹಲಿಗೆ ರಾಣಾನನ್ನು ಕರೆತರಲಿರುವ ಭಾರತದ ಎನ್​ಐಎ
  • ಮುಂಬೈ ಕೋರ್ಟ್​​ನ ಬದಲು ದೆಹಲಿ ಕೋರ್ಟ್​ನಲ್ಲಿಯೇ ವಿಚಾರಣೆಗೆ ನಿರ್ಧಾರ

26-11-2008 ಇದು ಭಾರತ ಎಂದೂ ಮರೆಯದ ಕರಾಳ ಅಧ್ಯಾಯ. ಅಂದು ಪಾಕಿಸ್ತಾನದಿಂದ ಮುಂಬೈಗೆ ಬಂದಿಳಿದ 10 ಜನ ಉಗ್ರರು, ಭಾರತದ ವಾಣಿಜ್ಯ ನಗರಿ ಮೇಲೆ ರಣಭೀಕರ ದಾಳಿ ನಡೆಸಿದ್ದರು. ಛತ್ರಪತಿ ಶಿವಾಜಿ ಟರ್ಮಿನಸ್, ನಾರಿಮನ್ ಹೌಸ್, ಹೋಟೆಲ್ ತಾಜ್​, ಲಿಯೋಫೋಲ್ಡ್ ಕೆಫೆ, ಕಾಮಾ ಹಾಸ್ಪಿಟಲ್ ಹೀಗೆ ಎಲ್ಲೆಂದರಲ್ಲಿ ದಾಳಿಯಿಟ್ಟ 10 ಉಗ್ರರು. ಮುಂಬೈಯನ್ನು ಅಕ್ಷರಶಃ ಮೂರು ದಿನಗಳ ಕಾಲ ಒತ್ತೆಯಿಟ್ಟುಕೊಂಡು ಬಿಟ್ಟಿದ್ದರು. ಕೊನೆಗೆ ಅಖಾಡಕ್ಕೆ ಇಳಿದ ಎನ್​​ಎಸ್​ಜಿ ಫೋರ್ಸ್​ 9 ಉಗ್ರರನ್ನು ಹೊಡೆದುರುಳಿಸಿತು. ಅಜ್ಮಲ್ ಕಸಬ್ ಎಂಬ 20 ವರ್ಷದ ಉಗ್ರನನ್ನು ಮುಂಬೈ ಪೊಲೀಸರು ಜೀವಂತವಾಗಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.

publive-image

ಈ ಒಂದು ಭೀಕರ ಘಟನೆಯಲ್ಲಿ ಒಟ್ಟು 173 ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದು ಸುಮಾರು 300 ಜನರು ಗಾಯಗೊಂಡಿದ್ದರು. ಈ 2008ರ ಮುಂಬೈ ದಾಳಿಯ ಮಾಸ್ಟರ್​ ಮೈಂಡ್​​ ತಹವೂರ್ ರಾಣಾ ಬೇಟೆಗೆ ಭಾರತ ಅಂದಿನಿಂದಲೇ ಯೋಜನೆ ರೂಪಿಸುತ್ತಾ ಬಂದಿತ್ತು. ಕೊನೆಗೂ ರಾಣಾ ಭಾರತದ ಸೆರೆಮನೆಯ ಕಂಬಿ ಎಣಿಸುವ ಕಾಲ ಸನ್ನಿಹಿತವಾಗಿದೆ. ಅಮೆರಿಕಾದ ತಹವೂರ್ ರಾಣಾನನ್ನು ಭಾರತಕ್ಕೆ ಗಡಿಪಾರು ಮಾಡಲು ಗ್ರೀನ್​ ಸಿಗ್ನಲ್​ ನೀಡಿದೆ.

ಇದನ್ನೂ ಓದಿ:ಭಾರತೀಯ ಸೇನೆಗೆ ಮತ್ತಷ್ಟು ಆನೆ ಬಲ.. ರಫೇಲ್ ಮರೀನ್ ಫೈಟರ್‌ ಜೆಟ್ ಖರೀದಿಗೆ ನಿರ್ಧಾರ

publive-image

ಇದನ್ನೂ ಓದಿ:ರೈಲ್ವೆ ಹಳಿಗಳ ನಡುವೆ ಮಲಗಿ ರೀಲ್ಸ್​ ಮಾಡಿದ ರೀಲ್​​ಪುತ್ರ.. ವಿಡಿಯೋಗೆ 70K ಹೆಚ್ಚು ವೀವ್ಸ್, ಆದ್ರೆ ಯುವಕ ಏನಾದ?​

ಈಗಾಗಲೇ ಅಮೆರಿಕಾಗೆ ತಲುಪಿರುವ ಭಾರತದ ವಿಶೇಷ ವಿಮಾನ, ಇಂದು ಮಧ್ಯಾಹ್ನ ದೆಹಲಿಗೆ ತಹಾವೂರ್ ರಾಣಾ ಸಮೇತ ಬಂದಿಳಿಯಲಿದೆ. ರಾಣನನ್ನು ಕರೆತರಲು ಎನ್​ಐಎ, ಇಂಟಲಿಜೆನ್ಸ್ ಬ್ಯುರೋ ಅಧಿಕಾರಿಗಳು ಹೋಗಿದ್ದಾರೆ. ದೆಹಲಿಗೆ ಬಂದ ಬಳಿಕ ರಾಣಾನನ್ನು ದೆಹಲಿಯ ಸ್ಪೇಷಲ್ ಎನ್​ಐಎ ಕೋರ್ಟ್​ಗೆ ಹಾಜರುಪಡಿಸಿ ಎನ್​​ಐಎ ಅಧಿಕಾರಿಗಳು ವಶಕ್ಕೆ ಪಡೆಯಲಿದ್ದಾರೆ. ಇನ್ನು ಮುಂಬೈ ಕೋರ್ಟ್​​ನಲ್ಲಿ ವಿಚಾರಣೆ ನಡೆಸದೆ ದೆಹಲಿ ಕೋರ್ಟ್​ನಲ್ಲಿಯೇ ವಿಚಾರಣೆ ನಡೆಸಲು ನಿರ್ಧಾರ ಮಾಡಲಾಗಿದೆ. ಅದರ ಜೊತೆಗೆ ರಾಣಾನನ್ನು ಮುಂಬೈನ ಅರ್ಥರ್​ ರೋಡ್ ಜೈಲಿನ ಬದಲು ತಿಹಾರ್​ ಜೈಲಿನಲ್ಲಿಯೇ ಇರಿಸಲು ತೀರ್ಮಾನ ಮಾಡಲಾಗಿದ್ದು ಹೈ ಸೆಕ್ಯೂರಿಟಿ ಸೆಲ್​ನಲ್ಲಿ ತಹಾವೂರ್​ ರಾಣಾನನ್ನು ಇರಿಸಲು ನಿರ್ಧಾರ ಮಾಡಲಾಗಿದೆ ಈಗಾಗಲೇ ಹೇಳಿದಂತೆ ಡೇವಿಡ್ ಕೋಲಮನ್ ಹೆಡ್ಲಿ ಜೊತೆಗೆ ತಹಾವೂರ್ ರಾಣಾನೇ ದಾಳಿಯ ಮಾಸ್ಟರ್ ಮೈಂಡ್​ ಎಂಬುದು ಸ್ಪಷ್ಟವಾಗಿದೆ. ಲಷ್ಕರ್ ಇ ತೊಯ್ಬಾಗೆ ದಾಳಿಯ ಸ್ಕೆಚ್ ಹಾಕಿಕೊಟ್ಟ ಆರೋಪ ರಾಣಾ ಮೇಲಿದೆ. ಈತನ ಮಾರ್ಗದರ್ಶನದಲ್ಲಿಯೇ ಸಮುದ್ರ ಮಾರ್ಗದ ಮೂಲಕ ಪಾಕ್​ನ 10 ಉಗ್ರರು ಮುಂಬೈಗೆ ಬಂದು ತಲುಪಿದ್ದರು. ಇಂತಹ ದಾಳಿಕೋರರ ಗುರುವನ್ನು ಶಿಕ್ಷಿಸಲು ಈಗ ಭಾರತ ಕಾನೂನು ಸಜ್ಜಾಗಿದೆ.

ಇದೇ ಮುಂಬೈ ದಾಳಿಯಲ್ಲಿ 10 ಉಗ್ರರ ಪೈಕಿ ಒಬ್ಬ ಅಜ್ಮಲ್ ಕಸಬ್ ಎಂಬ ಉಗ್ರನನ್ನು ಮುಂಬೈ ಪೊಲೀಸರು ಬಂಧಿಸಿದ್ದರು. ಈತನನ್ನು ಬಂಧಿಸುವ ವೇಳೆ ತುಕಾರಂ ಒಂಬ್ಳೆ ಎಂಬ ಕಾನ್​ಸ್ಟೇಬಲ್​ ಹುತಾತ್ಮರಾಗಿದ್ದರು. ಕೊನೆಗೆ ಅಜ್ಮಲ್ ಕಸಬ್​ನನ್ನು 21 ನವೆಂಬರ್ 2012ರಲ್ಲಿ ಯರವಾಡಾ ಜೈಲಿನಲ್ಲಿ ನೇಣಿಗೇರಿಸಲಾಯ್ತು. ಇವರಿಗೆಲ್ಲಾ ಹಾದಿಯನ್ನು ತೋರಿಸಿದ ರಾಣಾಗೂ ಕೂಡ ಅದೇ ಶಿಕ್ಷೆ ಕಾದಿದೆಯಾ ಎನ್ನುವ ಕುತೂಹಲ ಈಗ ಎಲ್ಲರಿಗೂ ಮೂಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment